ಅಜ್ವೈನ್ ಎಳೆಗಳು ತನ್ನದೇ ಆದ ಪ್ರಯೋಜನೆಗಳಿಂದ ಆಯುರ್ವೇದದಲ್ಲಿ ಪ್ರಮುಖ ಸ್ಥಾನ ಪಡೆದಿದೆ.ಯಾವೆಲ್ಲ ಆರೋಗ್ಯದ ಪ್ರಯೋಜನೆಗಳೆಂದು ಈ ಅಂಕಣದಲ್ಲಿ ತಿಳಿಯೋಣ ಆಜ್ವೇನ್ ಎಳೆಗಳು ಅನೇಕ ಸೋಂಕುಗಳಿಂದ ರಕ್ಷಿಸುತ್ತದೆ . ಇದೊಂದು ಅದ್ಭುತವಾದ ದಿವ್ಯೌಷಧ ಆಗಿದ್ದು ಶೀತ, ಕೆಮ್ಮು,ಜ್ವರ ನಿವಾರಣೆಗೆ ತನ್ನದೇ ಆದ ಚಿಕಿತ್ಸೆ ನೀಡುತ್ತದೆ . ಈ ಎಳೆಗಳು ನಮ್ಮ ಭಾರತೀಯ ಮನೆಗಳಲ್ಲಿ ಅಡುಗೆ ಮನೆಯಲ್ಲಿ ಬಳಸುತ್ತಾರೆ .ಪರಿಮಳಯುಕ್ತ ಅಜ್ವೈನ ಬೀಜಗಳನ್ನು ಹಲವಾರು ದೇಸೀ ಪಾನೀಯಗಳು ,ಪರೋಟಗಳಿಗೂ ಸೇರಿಸುತ್ತಾರೆ .ಮುಖ್ಯವಾಗಿ ಈ ಎಳೆಗಳು ಆಯುರ್ವೇದದಲ್ಲಿ ಅದರದ್ದೇ ಆದ ಸ್ಥಾನ ಪಡೆದುಕೊಂಡಿದೆ .ವಾಸ್ತವವಾಗಿ ಈ ಎಳೆಗಳ ಪ್ರಯೋಜನಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ .ಅದರ ಇನ್ನೂ ಪ್ರಯೋಜನಗಳ ಬಗ್ಗೆ ಇಲ್ಲಿದಿ ಒಂದು ಚಿಕ್ಕ ಮಾಹಿತಿ.

೧. ಶೀತ, ಕೆಮ್ಮು ಗುಣ ಪಡಿಸುತ್ತದೆ : ಈ ಅಜ್ವಿನ್ ಎಳೆಗಳು ಶೀತ ಹಾಗೂ ಕೆಮ್ಮಿಗೆ ರಾಮಬಾಣವಾಗಿದೆ. ಅದರಲ್ಲೂ ಈ ಚಳಿಗಾಲದಲ್ಲಿ ಈ ಅಜ್ವೇನ ಹಾಕಿದ ಪಾನೀಯಗಳನ್ನು ಕುಡಿಯುವುದರಿಂದ ದೇಹಕ್ಕೆ ಹೆಚ್ಚು ಒಳ್ಳೆಯದು ..೨. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಇತ್ತೀಚಿನ ದಿನಗಳಲ್ಲಿ ಯುವಜನರಿಗೆ ಅತಿಯಾಗಿ ಕಾಡುವುದು ಈ ಕೊಲೆಸ್ಟ್ರಾಲ್, ಇದು ನಮ್ಮ ಅನಾರೋಗ್ಯಕರವಾದ ಆಹಾರದ ಪರಿಣಾಮ ಎಂದೇ ಹೇಳಬಹುದು .ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ,ದೇಹದ ಉತ್ಕರ್ಷಣ ನಿರೋಧಕ ಆಗಿದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.ಅಲ್ಲದೇ ಹೃದ್ರೋಗದ ತೊಂದರೆಯನ್ನು ಶಮನ ಮಾಡುತ್ತದೆ.೩. ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ: ಅಜ್ವನ್ ಎಳೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದ್ದು , ಕ್ಯಾಲ್ಸಿಯಂ ,ಸತು ಮುಂತಾದ ಜೀವಸತ್ವವನ್ನು ಮಾತು ಖನಿಜ ಸಂಪತ್ತನ್ನು ಹೊಂದಿದೆ .ಇದು ನೆತ್ತಿಯ ಸೋಂಕಿನಿಂದ ಮತ್ತು ಕೂದಲು ಉದುರುವಿ ಕೆ ಇಂದ ಪಾರು ಮಾಡುತ್ತದೆ . ಈ ಎಳೆಗಳನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಬಳಸುತ್ತಿದ್ದರೆ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಸೊಂಪಾಗಿ ಬೆಳೆಯುತ್ತದೆ.

೪. ಜೀರ್ಣ ಕ್ರಿಯೆ ಯನ್ನೂ ಸುಧಾರಿಸುತ್ತದೆ: ಈ ಎಳೆಗಳಲ್ಲಿರುವ ಪೋಷಕಾಂಶಗಳು ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ .ಇದರಲ್ಲಿನ ಜೀವಸತ್ವಗಳು ಚಯಾಪಚಯ ಕ್ರಯೆಯನ್ನು ಹೆಚ್ಚಿಸಿ , ಹೊಟ್ಟೆ ಉಬ್ಬರ ,ಹೊಟ್ಟೆ ನೋವು , ಮಲಬದ್ದತೆ ಅಂತಹ ಲಕ್ಷಣಗಳಿಂದ ಪಾರು ಮಾಡುತ್ತದೆ .೫. ಮಕ್ಕಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ::::ನಿಮ್ಮ ಮಗುವಿನ ಕಾಳಜಿ ನಿಮಗಿದ್ದರೆ , ಪ್ರತಿದಿನ ಬೆಳಿಗ್ಗೆ ಜೇನುತುಪ್ಪದ ಜೊತೆ ಆಜ್ವನ್ ಎಳೆಗಳ ರಸ ಮಿಶ್ರಣ ಮಾಡಿ ಕುಡಿಸಿ .ಹಾಗೂ ನೀವು ತಯಾರಿಸುವ ಅಡುಗೆಯಲ್ಲಿ ಬಳಸಿ ಇದರಿಂದ ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯ ಕಾಪಾಡಿಕೊಳ್ಳಿ.

Leave a Reply

Your email address will not be published. Required fields are marked *