ನಮಸ್ತೆ ನಮ್ಮ ಪ್ರಿಯ ಓದುಗರೇ, ನಿಮಗೆಲ್ಲ ಗೊತ್ತೇ ಇದೆ,ದೇಹದ ತೂಕ ನಿಗದಿತ ತೂಕಕ್ಕಿಂತ ಹೆಚ್ಚಾಗಿದ್ದಾರೆ ಅದರಿಂದ ಹಲವಾರು ಅನಾರೋಗ್ಯಗಳು ಕಾಡಬಹುದು, ಆದರೆ ಇದಕ್ಕೆಲ್ಲಾ ಟೆನ್ಷನ್ ಮಾಡಿಕೊಳ್ಳದೆ ಕೆಲವೊಂದು ಹಣ್ಣುಗಳ ಸೇವನೆ ಇಂದ ದೇಹದ ತೂಕ ಇಳಿಸಬಹುದು ವ್ಯಾಯಾಮ ,ಕಟ್ಟು ನಿಟ್ಟಿನ ಆಹಾರ ಸೇವನೆ,ಡಯೆಟ್ ಮಾಡಿದರೂ ಸಹ ಕರಗದ ದೇಹದ ಬೊಜ್ಜು, ಇಳಿಯದ ತೂಕ ಹಣ್ಣುಗಳು ತರಕಾರಿಗಳು ಸೇವಿಸಿದರೆ ಕಡಿಮೆ ಆಗಬಹುದಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ಇತ್ತೀಚಿನ ಅಧ್ಯಯನಗಳು ತೂಕ ನಷ್ಟಕ್ಕೆ ಹಣ್ಣುಗಳ ಹಾಗೂ ತರಕಾರಿಗಳ ಪಾತ್ರ ಎಷ್ಟಿದೆ ಎಂಬ ಬಗ್ಗೆ ಆಸಕ್ತಿದಾಯಕ ಫಲತಾಂಶ ತೋರಿಸಿದೆ . ಹೌದು ! ನಿಮ್ಮ ನೆಚಿನ ರುಚಿಕರವಾದ ಕೆಲವು ಹಣ್ಣುಗಳು ಹಾಗೂ ತರಕಾರಿಗಳು ಬೊಜ್ಜು ಮತ್ತು ತೂಕ ಕರಗಿಸುವಲ್ಲಿ ಸಹಾಯ ಮಾಡುತ್ತವೆ.ಜೊತೆಗೆ ಹಣ್ಣುಗಳಲ್ಲಿ ದೇಹಕ್ಕೆ ಬೇಕಾದ ಫೈಬರ್, ಮತ್ತು ಪೋಷಕಾಂಶಗಳು ಇರುತ್ತವೆ. ಈ ಲೇಖನದಲ್ಲಿ ನಾವು ದಿನನಿತ್ಯ ಸೇವಿಸಬೇಕಾದ ,ಕೊಬ್ಬು ಕರಗಿಸುವ ಕೆಲವು ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ.

#1 ಸೀಬೆ ಹಣ್ಣು: ಸೀಬೆ ಹಣ್ಣು ಕೆಲವರಿಗೆ ಶೀತ, ಕೆಮ್ಮು ಉಂಟು ಮಾಡುತ್ತದೆ ಎಂದು ಅದನ್ನು ತಿನ್ನುವುದಿಲ್ಲ ಅದರ ಗೋಜಿಗೂ ಹೋಗದೆ ಇರುತ್ತಾರೆ.ಆದರೆ ಸೀಬೆ ಹಣ್ಣಿನ ಬಗೆಗಿನ ಇಂತಹ ತಪ್ಪು ಕಲ್ಪನೆಯೇ ಒಂದು ದೊಡ್ಡ ತಪ್ಪು .ಏಕೆಂದರೆ ಸೀಬೆ ಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅಗತ್ಯ ಇರುವ ಅಂಶಗಳು ಸಿಗುತ್ತವೆ . ಈ ಹಣ್ಣಿನ ವಿಶೇಷ ಏನಪ್ಪಾ ಅಂದ್ರೆ,ದೇಹದ ತೂಕ ಇಳಿಸುವ ಬಯಕೆಯಲ್ಲಿ ಇರುವವರಿಗೆ ಹೇಳಿ ಮಾಡಿಸಿದ ಹಣ್ಣು ಇದಾಗಿದೆ .ಹೌದು ಇದರಲ್ಲಿ ಇರುವಂತಹ ಫೈಬರ್ ನಾರಿನ ಅಂಶವು ಹೊಟ್ಟೆಯೂ ಧೀರ್ಘ ಕಾಲ ತುಂಬಿರುವ ಭಾವನೆ ನೀಡುತ್ತದೆ .ಹಾಗೂ ಪದೇ ಪದೆ ತಿನ್ನುವುದು ಕಡಿಮೆ ಮಾಡುತ್ತದೆ .ಅಲ್ಲದೆ ದೇಹಕ್ಕೆ ಹೆಚ್ಚು ಕ್ಯಾಲೋರಿ ಕೂಡ ಸೇರುವುದಿಲ್ಲ .#2 ಪಪಾಯ ಹಣ್ಣು: ಈಗಾಗಲೇ ಅತಿಯಾದ ಬೊಜ್ಜಿನ ಅಂಶವನ್ನು ಹೊಂದಿ ದೇಹದ ತೂಕ ಪಡೆದಿರುವವರು ಆರೋಗ್ಯಕರವಾದ ದೇಹದ ತೂಕ ನಿರ್ವಹಣೆಯಲ್ಲಿ ಅನುಕೂಲವಾಗುವಂತೆ ಪರಂಗಿ ಹಣ್ಣನ್ನು ನಿಯಮಿತವಾಗಿ ಪ್ರತಿ ದಿನವೂ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು .ಇದಕ್ಕೆ ಮುಖ್ಯ ಕಾರಣ ಈ ಹಣ್ಣಿನಲ್ಲಿರುವ ನಾರಿನಂಶ ಅಧಿಕವಿರುವುದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಲು ಈ ಹಣ್ಣು ತುಂಬಾನೇ ಸಹಕಾರಿ .ಹಾಗಾಗಿ ದಪ್ಪ ಇರುವವರು ಸಣ್ಣ ಆಗಲು ಪರಂಗಿ ಹಣ್ಣನ್ನು ಪ್ರತಿ ದಿನ ಮಧ್ಯಾನ ಊಟಾ ಆದ ನಂತ್ರ ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ .

#3 ಬಾಳೆಹಣ್ಣು: ಬಾಳೆಹಣ್ಣು ತುಂಬಾ ರುಚಿಕರ ಹಾಗೂ ಇದರ ಸ್ಮೂತಿ,ಜ್ಯೂಸ್ ಮಾಡಿಕೊಂಡು ಸೇವಿಸಬಹುದು .ಇದರಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳ ಆದ ವಿಟಮಿನ್ B6 ಮತ್ತು ಪೊಟ್ಯಾಸಿಯಂ ಇದೆ .ಇದು ತೂಕ ಇಳಿಸಲು ತುಂಬಾ ಸಹಕಾರಿ .ಬಾಳೆಹಣ್ಣು ನೇರವಾಗಿ ತೂಕ ಇಳಿಸಲು ನೆರವಾಗದೆ ಇದ್ದರೂ ಇದು ಹೊಟ್ಟೆ ಉಬ್ಬರ ಕಡಿಮೆ ಮಾಡಿ ದೀರ್ಘ ಕಾಲ ಹೊತ್ತೇ ತುಂಬಿರುವ ಭಾವನೆ ನೀಡುತ್ತದೆ. #4 ದಾಳಿಂಬೆ ಹಣ್ಣು ಬೇರೆಲ್ಲಾ ಹನ್ನುಗಳಂತೆ ದಾಳಿಂಬೆ ಹಣ್ಣು ಹೆಚ್ಚಾಗಿ ವರ್ಷ ಪೂರ್ತಿ ಸಿಗುವ ಕಾರಣ ಅದನ್ನು ನಮ್ಮ ಆಹಾರ ಕ್ರಮ ದಲ್ಲಿ ಬಳಸಿಕೊಳ್ಳಬಹುದು .ದಾಳಿಂಬೆ ಹಣ್ಣು ಹಾಗೂ ಜ್ಯೂಸ್ ಅನ್ನು ಬಳಸುವುದರಿಂದ ದೇಹವು ಹಲವಾರು ರೋಗಗಳನ್ನು ತಡೆಗಟ್ಟಬಹುದು. ಹಾಗೂ ದೇಹದ ತೂಕವನ್ನು ಸಹ ಕಡಿಮೆ ಮಾಡುತ್ತದೆ.ದಾಳಿಂಬೆ ಹಣ್ಣಿನಲ್ಲಿ ತುಂಬಾ ಕಡಿಮೆ ಕ್ಯಾಲೋರಿ ಇದ್ದು ಹೆಚ್ಚಿನ ಪೌಷ್ಟಿಕ ಸತ್ವಗಳು ಮತ್ತು ಆಂಟಿಆಕ್ಸಿಡೆಂಟ್ ಗಳಿವೇ. ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ದಲ್ಲೀ ಇರುವವರು ಮಾಡುವ ವ್ಯಾಯಾಮದ ಮುಂಚೆ ಮತ್ತು ನಂತರ ಅರ್ಧ ಗಂಟೆ ಒಳಗಾಗಿ ಈ ಹಣ್ಣು ಸೇವನೆ ಮಾಡಬೇಕು ಈ ಹಣ್ಣು ಹೆಚ್ಚು ರುಚಿ ಇದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. #5 ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣು ಸಿಟ್ರಸ್ ಜಾತಿಗೆ ಸೇರಿದ ಕಾರಣ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಜೊತೆಗೆ ತೂಕ ಇಳಿಸಲು ಸಹಕಾರಿ ಒಂದು ಸಾಮಾನ್ಯ ಕಿತ್ತಳೆ ಹಣ್ಣಿನಲ್ಲಿ 47 ಕ್ಯಾಲೋರಿ ಇದೆ. ಇದು ದೇಹವು ದಹಿಸುವ ಕ್ಯಲೋರಿಗಿನತಲೂ ಕಡಿಮೆ ಇದೆ. ಹೀಗಾಗಿ ಇದನ್ನು ಕ್ಯಾಲೋರಿ ನಗಣ್ಯವಾಗಿರುವ ಹಣ್ಣು ಎಂದು ಪರಿಗಣಿಸಲಾಗಿದೆ ಹೆಚ್ಚಾಗಿ ಜನರು ಈ ಹಣ್ಣಿನ ಜ್ಯೂಸ್ ಇಂದ ದಿನ ಶುರು ಮಾಡುತ್ತಾರೆ .

Leave a Reply

Your email address will not be published. Required fields are marked *