ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ಈ ವಿಡಿಯೋದಲ್ಲಿ ಜಮೀನು, ಕ್ರಯಪತ್ರ ಮತ್ತು ವಿಭಾಗ ಪತ್ರ ಮತ್ತು ದಾನಪತ್ರದ ಮೂಲಕ ಯಾವುದೇ ಒಂದು ಜಮೀನಿನ ಹಕ್ಕು ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅಂದ್ರೆ ಜಮೀನು ಮ್ಯೂಟೇಷನ್ ಆಗುವ ಸಂದರ್ಭಗಳಲ್ಲಿ ಆ ಒಂದು ಜಾಮೀನಿಗೆ ತಕರಾರು ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು? ತಕರಾರು ಪ್ರಕ್ರಿಯೆ ಹೇಗಿರುತ್ತೆ? ಯಾರು ತಕರಾರಿಗೆ ಅರ್ಜಿ ಸಲ್ಲಿಸಬಹುದು?
ಎಂತಹ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು ತಕರಾರಿಗೆ ಈ ಮಾಹಿತಿ ಮಾಡ್ತಿರೋ ಉದ್ದೇಶ ಸುಮಾರು ಜನರು ತಕರಾರು ಅರ್ಜಿ ಮತ್ತು ತಕರಾರಿನ ಪ್ರಕ್ರಿಯೆ ಹೇಗಿರುತ್ತೆ ಎಂದು ನೋಡೋಣ.

ಈಗಾಗಲೇ ನಿಮಗೆ ಗೊತ್ತಿರುವಂತೆ ನೋಂದಣಿಯಾದ ಅಂದ್ರೆ ರಿಜಿಸ್ಟರ್ ಮಾಡಲಾದ ಎಲ್ಲ ಜಮೀನಿನ ಎಲ್ಲ ಕಡತಗಳು ಭೂಮಿ ಕೇಂದ್ರದ ಮೂಲಕ ಮ್ಯೂಟೇಷನ್ಗೆ ಒಳಪಡಲೇಬೇಕು. ಆಗ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ ಅವರು ಅಂದ್ರೆ ತಲಾಟಿ ಅವರು ತಕರಾರು ಮತ್ತು ಆಕ್ಷೇಪಣೆಗಾಗಿ ಜೆಫ್ ಮೂಲಕ 21 ದಿನಗಳ ಸಾರ್ವಜನಿಕವಾಗಿ ಪ್ರಚಾರ ನಡೆಸುತ್ತಾರೆ..ಗೊತ್ತು ಪಡಿಸಿದ ದಿನಗಳಲ್ಲಿ ನೊಂದಣಿ ರೈತರು ಆಸ್ತಿಗೆ ಸಂಬಂಧಿಸಿದಂತೆ ತಮ್ಮಲ್ಲಿ ಲಭ್ಯವಿರುವ ಸೂಕ್ತ ದಾಖಲೆಗಳೊಂದಿಗೆ ಒಂದು ಬಿಳಿ ಹಾಳೆಯ ಮೇಲೆ ಬರೆದು ತಕರಾರು ಅರ್ಜಿ ತಲಾಟಿ ಅವರ ಬಳಿ ಅಂದ್ರೆ ಗ್ರಾಮಲೆಕ್ಕಾಧಿಕಾರಿ ಅವರಿಗೆ ತಕರಾರು ಅರ್ಜಿ ಸಲ್ಲಿಸಬಹುದು.

ಮಾನ್ಯ ಗ್ರಾಮ ಲೆಕ್ಕಾಧಿಕಾರಿ ಅವರು ತಕರಾರು ಅರ್ಜಿ ಸ್ವೀಕರಿಸಿ ವಿವಾದಾತ್ಮಕ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರ್ ಕಚೇರಿಗೆ ಅದನ್ನು ಕಳುಹಿಸಿಕೊಡುತ್ತಾರೆ. ತಹಸೀಲ್ದಾರ್ ಕಚೇರಿಯಿಂದ ತಕರಾರು ಅರ್ಜಿ ಸಲ್ಲಿಸಿದವರಿಗೂ ಮತ್ತು ಜಮೀನು ನೋಂದಣಿ ಮಾಡಿಕೊಂಡು ಅವರಿಗೂ ನೋಟಿಸ್ ಹೊರಡಿಸಲಾಗುತ್ತೆ. ಅಂದರೆ ಅರ್ಜಿದಾರರಿಗೂ ಮತ್ತು ದೂರು ದಾರರಿಗೂ ನಿಗದಿಪಡಿಸಿದ ದಿನಾಂಕ ಅಂದ್ರೆ ಗೊತ್ತು ಪಡಿಸಿದ ದಿನದಂದು ಮಾನ್ಯ ತಹಶೀಲ್ದಾರ್ ಪೀಠದಲ್ಲಿ ದೂರುದಾರರು ಮತ್ತು ಅರ್ಜಿದಾರರು ಸೂಕ್ತ ದಾಖಲಾತಿಗಳೊಂದಿಗೆ ತಮ್ಮ ಅಹವಾಲು ಹೇಳಬೇಕಾಗಿ ಬರುತ್ತೆ.

ಅಲ್ಲಿ ಅಹವಾಲು ತಾವೇ ಹೇಳಬಹುದು ಅಥವಾ ತಮ್ಮ ವಕೀಲರ ಮೂಲಕವುವಾದ ಮಾಡಿಸಬಹುದು ಎರಡು ವಿಷಯದಲ್ಲಿ ಯಾವುದೇ ರೀತಿಯಿಂದಾಗಿ ನಿಮಗೆ ತೊಂದರೆ ಬರುವುದಿಲ್ಲ ಎರಡು ವಿಷಯ ನಿಮ್ಮ ಮೇಲೆ ಬಿಟ್ಟಿದ್ದು ಒಂದು ವೇಳೆ ವಕೀಲರ ಮುಖಾಂತರ ನೀವು ಹೋದರೆ ನಿಮಗೆ ಸ್ವಲ್ಪ ಲಾಭ ಆಗುವ ಸಂದರ್ಭ ಜಾಸ್ತಿ ಇರುತ್ತದೆ. ಮಾನ್ಯ ತಹಶೀಲ್ದಾರ್ ರವರು ಕಾಲಕಾಲಕ್ಕೆ ಇಬ್ಬರನ್ನು ವಿಚಾರಣೆ ಮಾಡಿ ಅಂತಿಮವಾಗಿ ವಿಚಾರಣೆಯೊಂದಿಗೆ ಆದೇಶಕ್ಕಾಗಿ ಇಡಲಾಗುತ್ತೆ. ಕೊನೆದಾಗಿ ತಹಸೀಲ್ದಾರ್ ಅವರ ಈ ಟೀಕೆಯಲ್ಲಿ ಚರ್ಚಿಸಿದ ಅಂಶಗಳ ಆಧಾರದ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 128 ಹಾಗೂ 129 ಅಡಿಯಲ್ಲಿ ಮಾನ್ಯ ತಶಿಲ್ದಾರರು ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ. ಮತ್ತು ಈ ತಹಶೀಲ್ದಾರರ ಆದೇಶ ಚಾಲನೆಗೆ ಬರುತ್ತದೆ.

Leave a Reply

Your email address will not be published. Required fields are marked *