ಇತ್ತೀಚಿಗೆ ವಾಹನಗಳ ರೂಲ್ಸ್ ಬಹಳಷ್ಟು ಹೆಚ್ಚಾಗುತ್ತಿದೆ ಇವುಗಳನ್ನು ಪಾಲನೆ ಮಾಡದಿದ್ದರೆ ಖಂಡಿತವಾಗಿಯೂ ಟ್ರಾಫಿಕ್ ಪೊಲೀಸ್ ನಮ್ಮ ಮೇಲೆ ದಂಡ ವಿಧಿಸುವುದು ಕಾಯಂ ಆಗಿದೆ ಆದರೆ ನಾವು ಒಂದು ವಿಷಯವನ್ನು ತೆಲೆಯಲ್ಲಿ ಇಟ್ಟುಕೊಳ್ಳಬೇಕು ಈ ಎಲ್ಲಾ ರೂಲ್ಸ್ ಗಳು ನಮಗೆ ಬಹಳಷ್ಟು ಉಪಯೋಗವಾಗುತ್ತಿವೆ ಇತ್ತೀಚಿಗೆ ಬಿಡುಗಡೆಯಾದಂತಹ ಐ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸುವುದು ಎಲ್ಲಾ ವಾಹನಗಳಿಗೆ ಕಾಯಂ ಆಗಿದೆ ಇದರ ಬಗ್ಗೆ ನೀವು ಇನ್ನ ಯೋಚನೆ ಮಾಡದಿದ್ದರೆ ಖಂಡಿತವಾಗಿಯೂ ನೀವು ಬೇಗನೆ ಈ ಮಾಹಿತಿಯ ಉಪಯೋಗವನ್ನು ತೆಗೆದುಕೊಳ್ಳಿ. ಸ್ವಂತ ವಾಹನ ಹೊಂದಿರುವ ರಾಜ್ಯದ ಎಲ್ಲ ವಾಹನ ಮಾಲೀಕರಿಗೆ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಜಾರಿ.

ಇನ್ನು ಮುಂದೆ ಟ್ರಾಫಿಕ್ ಪೊಲೀಸರು ಎಲ್ಲಿ ನಿಮ್ಮ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದು ನಮಗೆ ಗೊತ್ತಿದೆ ಅದರ ಬಗ್ಗೆ ದೊಡ್ಡ ರೂಲ್ಸ್ ಜಾರಿಗೊಳಿಸಲಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ಕೂಡ ಕಡ್ಡಾಯವಾಗಿ ವಿಷಯ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31 ರ ವರೆಗೆ ಅವಕಾಶ ನೀಡಲಾಗಿದ್ದು, ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ. 2019 ರ ಏಪ್ರಿಲ್ 1 ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ HSRP ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ರಾಜ್ಯದಲ್ಲಿ ಸುಮಾರು 2,00,00,000 ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಎರಡು ಗಡುವಿನ ವಿಸ್ತರಣೆಗಳ ಹೊರತಾಗಿಯೂ ರಾಜ್ಯದಲ್ಲಿ ಕೆಲವು ವಾಹನಗಳು ಮಾತ್ರ ನೋಂದಾಯಿಸಲ್ಪಟ್ಟಿವೆ.

ನಡೆದಿದೆ ಮತ್ತು ಹೆಚ್ಚಿನ ವಾಹನಗಳು ಆಯ್ಕೆಯನ್ನು ಮಾಡಿಸಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ ತ್ರಿಚಕ್ರ ಲಘು ಮೋಟಾರು ವಾಹನಗಳು ಪ್ರಯಾಣಿಕರ ಕಾರು ಮಾಧ್ಯಮ ಬಾರಿ ವಾಣಿಜ್ಯ ವಾಹನಗಳು, ಟ್ರೈಲರ್ ಮತ್ತು ಟ್ರಾಕ್ಟರ್ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ.ಮೇ 31 ರವರೆಗೆ ಹೆಚ್‌ಎಸ್‌ಆರ್‌ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಅದಾದ ನಂತರ ಜೂನ್ ಒಂದರಿಂದ ಪೊಲೀಸ್ ಇಲಾಖೆ ಜೊತೆಗೂಡಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಹೆಚ್ಚಿಸಿ ನಂಬರ್ ಪ್ಲೇಟ್ ಅಳವಡಿಸಿದರೆ 500 ರೂಪಾಯಿಂದ 1000 ರೂಪಾಯಿಗಳು ದಂಡ ವಿಧಿಸಲಾಗುವುದು. ಹಾಗಾಗಿ ಆದಷ್ಟು ಬೇಗನೆ ನಿಮ್ಮ ಸಮೀಪ ಇರುವಂತಹ ಶೋರೂಮ್ ಅಲ್ಲಿ ಹೋಗಿ ನೀವು ಅರ್ಜಿಯ ಮುಖಾಂತರ ನಿಮ್ಮ ನಂಬರ್ ಪ್ಲೇಟ್ಗಳನ್ನು ಬದಲಾಯಿಸಬಹುದು ಹಾಗಾಗಿ ಆದಷ್ಟು ಬೇಗನೆ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಿ.

Leave a Reply

Your email address will not be published. Required fields are marked *