ಮೂಳೆಗಳು ಗಟ್ಟಿಯಾಗಿರಲು ಕ್ಯಾಲ್ಸಿಯಂ ಬೇಕು ಎಂದು ನಾವೆಲ್ಲಾ ಅರಿತಿದ್ದೇವೆ. ಆದರೆ, ವಾಸ್ತವದಲ್ಲಿ, ಕ್ಯಾಲ್ಸಿಯಂ ಒಂದರಿಂದಲೇ ಮೂಳೆಗಳು ಧೃದವಾಗುವುದಿಲ್ಲ. ಬದಲಿಗೆ ಇವುಗಳಿಗೆ ಪೂರಕವಾಗಿ ಇನ್ನೂ ಹಲವಾರು ಖನಿಜಗಳ ಅಗತ್ಯತೆ ಇದೆ. ಇಂದಿನ ಲೇಖನದಲ್ಲಿ ಈ ಖನಿಜಗಳ ಬಗ್ಗೆ ವಿವರಿಸಲಾಗಿದೆ. ಅವು ಯಾವುವು ಎಂದು ತಿಳಿಯಲು ಮುಂದೆ ಓದಿ. ಮೂಳೆಗಳು ದೃಢವಾಗಲು ಕ್ಯಾಲ್ಸಿಯಂ ಅತ್ಯಗತ್ಯ, ಜೊತೆಗೆ ಕಬ್ಬಿಣ, ಸತುಗಳೂ ನಮಗೆ ಸಾಕಷ್ಟು ಪ್ರಮಾಣದಲ್ಲಿ ಅಗತ್ಯವಾಗಿದೆ. ಕ್ಯಾಲ್ಸಿಯಂ ಹಾಲಿನ ಮೂಲಕ ಪ್ರಮುಖವಾಗಿ ಲಭ್ಯವಾದರೆ ಕಬ್ಬಿಣ ಮತ್ತು ಸತುಗಳನ್ನು ನಾವು ಸಾಮಾನ್ಯ ಆಹರಗಳಿಂದಲೇ ಪಡೆಯಬಹುದು. ಈ ಖನಿಜಗಳು ಇರುವ ಆಹಾರಗಳನ್ನು ಗುರುತಿಸಿ ಇವುಗಳನ್ನು ಆದಷ್ಟು ನಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವುದು ಮಾತ್ರ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ನಮ್ಮ ಆರೋಗ್ಯಕ್ಕೆ ಬೇಕಾದ ಖನಿಜಗಳು ಈ ಕೆಳಗಿನಂತಿವೆ.

೧.ಕ್ಯಾಲ್ಸಿಯಂ- ನಮ್ಮ ಮೂಳೆಗಳ ಧೃಢತೆ ಮತ್ತು ಆರೋಗ್ಯಕ್ಕೆ ನಿತ್ಯವೂ ಕ್ಯಾಲ್ಸಿಯಂ ಅನ್ನು ನಮ್ಮ ಆಹಾರದಲ್ಲಿ ಸೇವಿಸಬೇಕು. ಇವು ಹಾಲು ಮತ್ತು ಹಾಲಿನ ಉತ್ಪನ್ನಗಳು, ದ್ವಿದಳ ಧಾನ್ಯಗಳು, ಸೋಯಾ ಅವರೆ, ಹಸಿರು ಮತ್ತು ದಪ್ಪನೆಯ ಎಳೆಗಳ ತರಕಾರಿಗಳು, ಬಟಾಣಿ, ಆಕ್ರೋಟು, ಸೂರ್ಯಕಾಂತಿ ಹೂವಿನ ಬೀಜಗಳು, ಮತ್ತು ಕಿತ್ತಳೆಯಲ್ಲಿ ಸಮೃದ್ಧವಾಗಿವೆ. ಕ್ಯಾಲ್ಸಿಯಂ ನಮ್ಮ ನರ ವ್ಯವಸ್ಥೆಯ ಕಾರ್ಯನಿರ್ವಹಣೆಗೂ ಅಗತ್ಯವಾದ ಖನಿಜವಾಗಿದೆ. ೨.ಸತು – ರೋಗ ನಿರೋಧಕ ಶಕ್ತಿ ಬಲಯುತವಾಗಿರಲು ಸತು ಅಥ್ಯವಶ್ಯವಾದ ಖನಿಜವಾಗಿದೆ. ಸತು ಬೇಕ್ಡ್ ಬೀನ್ಸ್, ಹಾಲು, ಚೀಸ್, ಮೊಸರು, ಕೆಂಪು ಮಾಂಸ, ಬೆಳೆಗಳು, ಕಡ್ಲೆ ಕಾಳು, ಕುಂಬಳಕಾಯಿ, ಎಳ್ಳು, ಶೇಂಗಾ ಬೀಜ, ಗೋಡಂಬಿ, ಬಾದಾಮಿ, ಮೊಟ್ಟೆಗಳು, ಗೋಧಿ ಮತ್ತು ಅಕ್ಕಿ ಮೊದಲಾದ ಆಹಾರಗಳಲ್ಲಿ ಉತ್ತಮ ಪ್ರಮಾಣದಲ್ಲಿದೆ.

೩. ಮಗ್ನೆಸಿಯಮ್ – ನಮ್ಮ ನರ ವ್ಯವಸ್ಥೆ ಮತ್ತು ಮೂಳೆಗಳನ್ನು ಬಲಪಡಿಸಲು ಮಗ್ನಿಸಿಯಂ ಅತ್ಯಗತ್ಯವಾದ ಖನಿಜವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ೪. ಪೊಟ್ಯಾಸಿಯಂ – ಹೃದಯವನ್ನು ಆರೋಗ್ಯವಾಗಿರಲು ಪೊಟ್ಯಾಸಿಯಂ ಕೂಡ ಅತ್ಯಗತ್ಯವಾಗಿದೆ. ಈ ಖನಿಜ ಸಮೃದ್ಧವಾಗಿರುವ ಆಹಾರಗಳು ಯಾವುವೆಂದರೆ ಸಿಹಿ ಗೆಣಸು, ಬಟಾಣಿ, ಕುಂಬಳಕಾಯಿ, ಅಲ್ಲೋಗಡ್ಡೆ, ಬಾಳೆಹಣ್ಣು, ಕಿತ್ತಳೆ, ಸೌತೆಕಾಯಿ, ಅಣಬೆಗಳು, ಬಿಳಿಬದನೆ, ಒಣ ದ್ರಾಕ್ಷಿ, ಖರ್ಜೂರ ಇತ್ಯಾದಿ. ೫. ಸೆಲೆನಿಯಮ್  ದೇಹದಲ್ಲಿ ಸೆಲೆನಿಯಮ್ ಕೊರತೆ ಇಂದ ಸ್ನಾಯುಗಳ ದೌರ್ಬಲ್ಯ ಮಾತು ನರಗಳ ನೋವು ಉಂಟಾಗಬಹುದು. ಈ ಕೊರತೆ ಎದುರಾಗಿದೆ ಇರಲು, ಸೋಯಾ ಹಾಲು, ಹಂದಿಮಾಂಸ, ಕೋಳಿಮಾಂಸ, ಮೀನು, ಮೊಟ್ಟೆ, ಬಾಳೆಹಣ್ಣು, ಬ್ಲೂಬೆರ್ರಿ ಮೊದಲಾದ ಆಹಾರಗಳನ್ನು ಸೇವಿಸಬೇಕು.

Leave a Reply

Your email address will not be published. Required fields are marked *