ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಒಂದು ಸಿಂಪಲ್ಲಾಗಿ ಹಾಗೂ ರುಚಿಯಾದ ಪುದೀನಾ ರೈಸ್ ರೆಸಿಪಿ ಯನ್ನ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಸಾಮಾನ್ಯವಾಗಿ ಇದನ್ನು ಉಳಿದ ಅನ್ನದಲ್ಲಿ ಮಾಡಬಹುದು ಅಥವಾ ಫ್ರೆಶ್ ಆಗಿ ಆಗಲೇ ತಯಾರಿಸಿದ ಅನ್ನಕ್ಕೆ ತುಂಬಾ ರುಚಿಯಾಗಿರುತ್ತದೆ. ಮದುವೆಯಾಗದ ಗಂಡಸರಿಗೆ ಅಂದರೆ ಬ್ಯಾಚುಲರ್ ಗಳಿಗೆ ತುಂಬಾ ಸರಿ ಹೊಂದುವ ಅಡಿಗೆ ಇದಾಗಿದೆ. ಯಾಕೆ ಅಂದ್ರೆ ಬೇಗ ಆಗುತ್ತೆ, ನಾರ್ಮಲ್ ಆಗಿ ರಾತ್ರಿ ಊಟಕ್ಕೆ ದಿಢೀರಗಿ ಬೇಗ ಅಡುಗೆ ಮಾಡ್ಕೋಬೇಕು ಅಂದರೆ ಇದು ಸರಿಯಾದ ಆಯ್ಕೆ. ಹಾಗಾದರೆ ತಡ ಮಾಡದೆ ಪುದೀನಾ ರೈಸ್ ಮಾಡುವ ವಿಧಾನ ನೋಡೋಣ ಬನ್ನಿ. ಮೊದಲು ಗ್ಯಾಸ್ ಸ್ಟೌವ್ ಹಚ್ಚಿ ಒಂದು ದೊಡ್ಡ ಬಾಣಲೆ ಇಡಿ. ಬಿಸಿ ಆದ ಮೇಲೆ ಎರೆಡು ಟೇಬಲ್ ಸ್ಪೂನ್ ಎಣ್ಣೆpuಯನ್ನ ಸೇರಿಸಿ. ಎಣ್ಣೆ ಕಾದ ಕೂಡಲೇ ಒಂದು ದೊಡ್ಡ ಚಮಚ ಉದ್ದಿನ ಬೇಳೆ ಹಾಕ್ಕೋಳಿ.

ಉದ್ದಿನ ಬೇಳೆಯನ್ನು ಚೆನ್ನಾಗಿ ಹುರಿದುಕೊಳ್ಳಿ, ಇದು ಸ್ವಲ್ಪ ಬಣ್ಣ ಬದಲಾಗುವ ವರೆಗೆ ಬಾಡಿಸಿ, ಹಸಿ ವಾಸನೆ ಹೋಗುವಷ್ಟು ಹುರಿಯಿರಿ, ಇದಕ್ಕೆ ಎರೆಡು ಹಸಿ ಮೆಣಸಿನ ಕಾಯಿ ಸೇರಿಸಿ, ನಿಮಗೆ ಖಾರ ಇನ್ನೂ ಬೇಕೆನಿಸಿದರೆ 3-4 ಹಸಿ ಮೆಣಸಿನಕಾಯಿಯನ್ನು ಸೇರಿಸಿಕೊಳ್ಳಬಹುದು. ಇದಕ್ಕೆ ಸುಮಾರು 5 ಬೆಳ್ಳುಳ್ಳಿ ಎಸಳುಗಳನ್ನು ಹಾಗೂ 8-10 ಕರಿಬೇವಿನ ಎಲೆಗಳನ್ನು ಸೇರಿಸಿ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುವಷ್ಟು ಬಾಡಿಸಿಕೊಳ್ಳಿ, ಒಂದು ದೊಡ್ಡ ಬಟ್ಟಲಷ್ಟು ಪುದೀನಾ ಸೊಪ್ಪನ್ನು ಕಡ್ಡಿ ಸಮೇತ ಚೆನ್ನಾಗಿ ತೊಳೆದು ಬಾಣಲೆಗೆ ಹಾಕಿ ಸೊಪ್ಪು ಕುಗ್ಗುವ ವರೆಗೂ ಬಾಡಿಸಿಕೊಳ್ಳಿ. ಸೊಪ್ಪು ಮಾಗಿ ಕಡಿಮೆ ಗಾತ್ರಕ್ಕೆ ಬಂದ ಮೇಲೆ ಒಂದು ಸಣ್ಣ ಬಟ್ಟಲು ಹುಣಸೆ ಹಣ್ಣಿನ ರಸವನ್ನು ಸೇರಿಸಿ ನೀರು ಇಂಗುವವರೆಗೂ ಬಾಡಿಸಿ, ಇದೆಲ್ಲ ಆದ ನಂತರ ಗ್ಯಾಸ್ ಆಫ್ ಮಾಡಿ, ಒಂದು ಚಿಕ್ಕ ಬಟ್ಟಲು ಹಸಿ ಕಾಯಿ ತುರಿಯನ್ನು ಹಾಕಿ. ಇದೆಲ್ಲ ಆರಿದ ನಂತರ ಇದನ್ನು ಮಿಕ್ಸಿಯಲ್ಲಿ ಒಂದೆರಡು ಚಮಚ ನೀರನ್ನು ಮಾತ್ರ ಬಳಸಿ ಗಟ್ಟಿ ಚಟ್ನಿ ಹದಕ್ಕೆ ರುಬ್ಬಿಕೊಳ್ಳಿ.

ಒಗ್ಗರಣೆಗೆ ಮತ್ತೆ ಅದೇ ಬಾಣಲೆಗೆ ತುಪ್ಪ ಹಾಕಿ ಅರ್ಧ ಚಮಚ ಜೀರಿಗೆ ಒಂದು ಚಮಚ ಉದ್ದಿನ ಬೇಳೆ ಹಾಕಿ ಬಣ್ಣ ಬದಲಾಗುವ ವರೆಗೆ ಬಾಡಿಸಿ, ನಂತರ ಗೋಡಂಬಿ ದ್ರಾಕ್ಷಿ ಹಾಕಿ 8-10 ಕರಿಬೇವು, ಬಟಾಣಿ, ಒಂದು ಈರುಳ್ಳಿ , ಬೀನ್ಸ್ ಹಾಗೂ ಕ್ಯಾರೆಟ್ ಸೇರಿಸಿ ಫ್ರೈ ಮಾಡಿ. ನಿಮಗೆ ಬೇಕಾದ ನಿಮ್ಮ ಮನೆಯಲ್ಲಿರುವ ತರಕಾರಿಗಳನ್ನು ಸೇರಿಸಬಹುದು. ತೀರಾ ಬೇಯಿಸುವ ಅವಶ್ಯಕತೆ ಇಲ್ಲ. ಎಣ್ಣೆಯಲ್ಲಿ ಒಂದು 75% ಬೆಂದರೆ ಸಾಕು. ಈಗ ನಾವು ಮಿಕ್ಸಿ ಮಾಡಿದ ಹಸಿರು ಪುದೀನಾ ಚಟ್ನಿಯನ್ನು ಸೇರಿಸಿ ಒಂದೆರೆಡು ನಿಮಿಷ ಎಣ್ಣೆಯಲ್ಲಿ ಫ್ರೈ ಮಾಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಜಾಸ್ತಿ ಬೇಯಿಸದೆ ಈಗಾಗಲೇ ಉದುರಾಗಿ ಬಿಸಿಯಾಗಿ ಮಾಡಿಕೊಂಡಿರುವ ಅನ್ನವನ್ನು ಅಥವಾ ರಾತ್ರಿ ಉಳಿದ ಅನ್ನವನ್ನು ಸೇರಿಸಿ ಚೆನ್ನಾಗಿ ಕಲಸಿ ಹಾಗೆಯೇ ಸ್ವಲ್ಪ ಫ್ರೈ ಮಾಡಿ. ಗ್ಯಾಸ್ ಆಫ್ ಮಾಡಿ. ಈಗ ಬಿಸಿ ಬಿಸಿ ಪುದೀನಾ ರೈಸ್ ಸವಿಯಲು ಸಿದ್ಧ ಇದೆ. ಇದನ್ನು ಮಧ್ಯಾನದ ಲಂಚ್ ಬಾಕ್ಸ್ ಗೆ, ರಾತ್ರಿ ಊಟಕ್ಕೆ, ಅಥವಾ ಹಬ್ಬದ ಅಡುಗೆಯಲ್ಲಿ ಚಿತ್ರಾನ್ನ ದ ಬದಲು ಮಾಡಿದರೆ ಎಲ್ಲರೂ ಇಷ್ಟ ಪಟ್ಟು ಊಟಾ ಸವಿಯುತ್ತಾರೆ. ಈ ರೆಸಿಪಿ ಇಷ್ಟ ಆಗಿದ್ದರೆ ದಯವಿಟ್ಟು ತಪ್ಪದೇ ಶೇರ್ ಮಾಡಿ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *