ನಮಸ್ತೆ ಪ್ರಿಯ ಓದುಗರೇ, ದಿನಾ ಅದೇ ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ಪೊಂಗಲ್, ಕಷ್ಟಕರವಾದ ತಾಲಿಪೆಟ್ಟು, ಹಿಂದಿನ ದಿನದಿಂದಲೇ ತಯಾರಿ ಮಾಡಿಕೊಂಡು ಸೇವನೆ ಮಾಡುವ ದೋಸೆ, ಇಡ್ಲಿ, ರೊಟ್ಟಿ, ಚಪಾತಿ ಮಾಡಿ ಮಾಡಿ, ತಿಂದು ತಿಂದು ಬೋರ್ ಆಗಿದೆಯಾ? ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ಅತಿ ಸುಲಭವಾಗಿ, ಸರಳವಾಗಿ, ರುಚಿ ರುಚಿಯಾಗಿ ರೆಸ್ಟೋರೆಂಟ್ ವಿಧದಲ್ಲಿ ದಾಲ್ ಕಿಚಡಿ ಮಾಡುವ ವಿಧಾನ ತಿಳಿದುಕೊಂಡು ನಾವು ನಮ್ಮ ಮನೆಯಲ್ಲಿ ತಯಾರಿಸಿ ಎಲ್ಲರಿಗೂ ಅದರ ರುಚಿ ತಿಳಿಸಿ ಕೊಡೋಣ. ಲೇಖನವನ್ನು ಸಂಪೂರ್ಣವಾಗಿ ಓದಿ, ಹಾಗೂ ನಿಮ್ಮ ಮನೆಯಲ್ಲಿ ಮಾಡಿದ ಕಿಚಡಿ ಹೇಗೆ ಬಂತು ಎಲ್ಲರೂ ಏನು ಕಮೆಂಟ್ಸ್ ಕೊಟ್ರು ಅನ್ನೋದನ್ನ ತಪ್ಪದೇ ತಿಳಿಸಿ. ಹಾಗಾದ್ರೆ ಯಾಕೆ ತದ ದಾಲ್ ಕಿಚಡಿ ಮಾಡುವ ವಿಧಾನ ನೋಡೆ ಬಿಡೋಣ ಸ್ನೇಹಿತರೆ.

ಈ ದಾಲ್ ಕಿಚಡಿ ಮಾಡಲಿಕ್ಕೆ ಅರ್ಧ ಕಪ್ ನೀವು ದಿನವೂ ಅನ್ನ ಮಾಡಲು ಬಳಸುವ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ, ಜೊತೆಗೆ ಅಷ್ಟೇ ಪ್ರಮಾಣದ ಹೆಸರು ಬೆಳೆಯನ್ನು ಸಹ ಅದೇ ಪಾತ್ರೆಗೆ ಸೇರಿಸಿ ಚೆನ್ನಾಗಿ ತೊಳೆದು ಒಂದು ಹತ್ತು ನಿಮಿಷ ನೆನೆಯಲು ಬಿಡಿ. ಹತ್ತು ನಿಮಿಷ ನೆಂದ ನಂತರ ಇವೆರಡನ್ನೂ ಒಂದು ಕುಕ್ಕರ್ ಗೆ ಹಾಕಿ ಅದಕ್ಕೆ ಅರ್ಧ ಚಮಚ ಅರಿಶಿಣ, ಚಿಟಿಕೆ ಉಪ್ಪು, ಒಂದು ಚಮಚ ಎಣ್ಣೆ ಹಾಗೂ 3 ಕಪ್ ಅಷ್ಟು ನೀರನ್ನು ಹಾಕಿ ಕಡಿಮೆ ಅಂದರೂ 5 ವಿಷಲ್ ಹೊಡೆಸಿ ಗ್ಯಾಸ್ ಆಫ್ ಮಾಡಿ. ಈಗ ಸ್ಟೌವ್ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾದ ನಂತರ ಎರೆಡು ದೊಡ್ಡ ಚಮಚ ತುಪ್ಪ ಹಾಕಿ ಕಾಯಲು ಬಿಡಿ, ಸ್ವಲ್ಪ ತುಪ್ಪ ಬಿಸಿ ಆಗುತ್ತಿದ್ದಂತೆ ಒಂದು ಚಮಚ ಜೀರಿಗೆ ಹಾಕಿ ಅವು ಚಟಗುಟ್ಟುವ ತನಕ ಕೈ ಆಡಿಸಿ. ಅದಾದ ನಂತರ ಒಂದು ಈರುಳ್ಳಿಯನ್ನು ಹಾಗೂ ಎರೆಡು ಹಸಿ ಮೆಣಸಿನ ಕಾಯಿಯನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಿ ಈರುಳ್ಳಿ ಹಸಿ ವಾಸನೆ ಹೋಗಿ ಇವೆರೆಡೂ ಚೆನ್ನಾಗಿ ಫ್ರೈ ಆದ ಮೇಲೆ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಈಗ ಒಂದು ಟೊಮೆಟೊ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಹಾಕ್ಕೂಳಿ. ಟೊಮೆಟೊ ಮೆತ್ತಗಗುವವರೆಗೆ ಫ್ರೈ ಮಾಡಿ, ನಂತರ ಒಂದು ಕಾಲು ಚಮಚದಷ್ಟು ಉಪ್ಪನ್ನು ಹಾಕಿ, ಈ ಮೊದಲೇ ನಾವು ಅಕ್ಕಿ ಬೇಳೆ ಬೇಯಿಸುವಾಗ ಉಪ್ಪು ಹಾಕಿದೆವು, ಹಾಗಾಗಿ ಉಪ್ಪನ್ನು ನೋಡಿಕೊಂಡು ಸೇರಿಸಿ. ಕಾಲು ಚಮಚದಷ್ಟು ಕೆಂಪು ಮೆಣಸಿನ ಪುಡಿ, ಕಾಲು ಚಮಚ ಗರಂ ಮಸಾಲ ಸ್ವಲ್ಪ ಅರಿಶಿನ ಹಾಗೇನೇ ಸ್ವಲ್ಪ ಹಿಂಗು ಹಾಕಿಕೊಳ್ಳಿ. ಈಗ ಕಿಚಡಿ ಗೆ ಮಸಾಲ ರೆಡಿ ಆಗಿದೆ.

ಈ ಮಸಾಲೆಗೆ ಮೊದಲೇ ನಾವು ಕೂಗಿಸಿಟ್ಟ ಅನ್ನ ಮತ್ತು ಬೆಲೆ ಮಿಶ್ರಣವನ್ನು ಸೇರಿಸಿ ಸ್ವಲ್ಪ ನೀರು ಬೇಕಾದರೆ ಸೇರಿಸಿ ಕಿಚಡಿ ಹದಕ್ಕೆ ಕಲಸಿಕೊಳ್ಳಿ. ಅಕ್ಕಿ ಮತ್ತು ಬೇಳೆ ಚೆನ್ನಾಗಿ ಹದವಾಗಿ ಬೆಂದಿದ್ದರೆ ಕಿಚಡಿ ತುಂಬಾ ರುಚಿಯಾಗಿ ಬರುತ್ತದೆ. ಈಗ ಕುದಿಯುತ್ತಿರುವ ಮಿಶ್ರಣಕ್ಕೆ ಒಂದು ಚಮಚ ತುಪ್ಪ ಸೇರಿಸಿ ಉಪ್ಪು, ಹುಳಿ ಖಾರವನ್ನು ನೋಡಿಕೊಂಡು ಅಡ್ಜಸ್ಟ್ ಮಾಡಿಕೊಳ್ಳಿ. ನಿಮಗೆ ಹುಳಿ ಮುಂದೆ ಇದ್ರೆ ಇಷ್ಟ ಪಡ್ತೀರ ಅಂದಾದ್ರೆ ಸ್ವಲ್ಪ ನಿಂಬೆ ರಸವನ್ನು ಹಕ್ಕೊಬೋದು. ಇದೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಕುದಿಯುತ್ತಿದೆ ಎಂದಾಗ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಕಿಚಡಿ ಸವಿಯಲು ಸಿದ್ಧ. ಉತ್ತರ ಭಾರತದಲ್ಲಿ ಇದು ತುಂಬಾ ಫೇಮಸ್. ಮತ್ತು ತುಂಬಾ ಆರೋಗ್ಯಕರ ಕೂಡ. ಯಾಕಂದ್ರೆ ಹೆಸರು ಕಾಳನ್ನು ಬಳಸಿರೋ ಡ್ರಿಂದ ಆರೋಗ್ಯಕ್ಕೆ ಒಳ್ಳೆಯದು. ನಾರ್ಮಲ್ ಆಗಿ ಬೆಳಗಿನ ಉಪಹಾರ ಕ್ಕೇ ಇದು ತುಂಬಾ ಸ್ಪೆಷಲ್ ಆಗಿರುತ್ತೆ. ಮತ್ತೆ ಇದನ್ನು ನೀವು ಬಡಿಸಿಕೊಂಡು ತಿನ್ನುವಾಗ ತಟ್ಟೆಯಲ್ಲಿ ಮೇಲೆ ಮತ್ತೆ ತುಪ್ಪ ಸೇರಿಸಿ ತಿಂತಾ ಇದ್ರೆ ಸ್ವರ್ಗ ಮೂರೇ ಗೇಣು ಅಂತೀರಾ. ಖಂಡಿತ ಈ ರೆಸಿಪಿ ಟ್ರೈ ಮಾಡಿ. ಶುಭದಿನ.

Leave a Reply

Your email address will not be published. Required fields are marked *