ನಮಸ್ತೆ ಪ್ರಿಯ ಓದುಗರೇ, ಮನೆಯಲ್ಲಿ ಒಮ್ಮೊಮ್ಮೆ ತರಕಾರಿ ಖಾಲಿ ಆಗಿರುತ್ತೆ ಅಥವಾ ಎಲ್ಲೋ ಊರಿಂದ ಬಂದಿರ್ಥಿವಿ. ಆಗ ಏನೂ ತರಕಾರಿಗಳೇ ಕೈಗೆ ಸಿಗಲ್ಲ ಅಡುಗೆ ಮಾಡೋಣ ಎಂದರೆ. ಆಗ ಈ ಸಾಂಬರ್ ಮಾಡಿದರೆ ಮನೆ ಮಂದಿಯೆಲ್ಲ ತಟ್ಟೆ ಪೂರ್ತಿ ಖಾಲಿ ಮಾಡ್ತಾರೆ! ಅಷ್ಟು ರುಚಿಯಾಗಿ ಬರುತ್ತೆ ಈ ಸಾಂಬರ್. ಇದನ್ನು ನೀವು ಇಡ್ಲಿ, ಬಿಸಿ ಅನ್ನ, ದೋಸೆ ಜೊತೆಗೆ ಸೈಡ್ ಆಗಿ ಬಳಸಬಹುದು. ದಿನಾ ಅದೇ ಸೊಪ್ಪಿನ ಹಾಗೂ ತರಕಾರಿ ಸಾಂಬರ್ ಮಾಡಿ ಮಾಡಿ ಬೋರ್ ಆಗಿದ್ರೆ ಕೂಡ ನೀವು ಈ ಸಾಂಬರ್ ಅನ್ನು ಮಾಡಿ ಮನೆ ಮಂದಿಗೆಲ್ಲ ಖುಷಿ ಪಡಿಸಬಹುದು. ಬನ್ನಿ ತದ ಯಾಕೆ ಸಾಂಬರ್ ಹೇಗೆ ಮಾಡೋದು ಅಂತ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಈ ಸಾಂಬರ್ ಮಾಡಲು ಇಲ್ಲಿ ಮಸೂರ್ ದಾಲ್ ಬಳಸುತ್ತಿದ್ದೇವೆ. ಈ ಮಸೂರ್ ದಾಲ್ ಸಾಂಬರ್ ಗೆ ಒಂದು ಒಳ್ಳೆಯ ರುಚಿ ಘಮ ಕೊಡುತ್ತದೆ. ಒಂದುವೇಳೆ ನಿಮ್ಮ ಮನೆಯಲ್ಲಿ ತೊಗರಿ ಬೇಳೆ ಇದ್ರೆ ಅದನ್ನಿ ಹಾಕಿ ಈ ಸಾಂಬರ್ ಮಾಡಬಹುದು ತೊಂದರೆ ಇಲ್ಲ. ಆದ್ರೆ ಮಸೂರ್ ದಾಲ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದೀರಾ ಅದಕ್ಕೆ ಅನುಗುಣವಾಗಿ ಮಸೂರ್ ದಾಲ್ ಅನ್ನು ಚೆನ್ನಾಗಿ ತೊಳೆದು ಸ್ವಲ್ಪ ಎಣ್ಣೆ ಸೇರಿಸಿ ಒಂದು ಕುಕ್ಕರ್ ಅಲ್ಲಿ ಬೇಯಲಿಕ್ಕೆ ಇಡಿ. ಬೇಳೆ ಮೆತ್ತಗೆ ಬೇಯಲಿ. ಈಗ ಸಾಂಬರ್ ಗೆ ಮಸಾಲ ಮಾಡ್ಕೊಳ್ಳೋಣ. ಒಂದು ಪ್ಯನ್ ಅಲ್ಲಿ ಒಂದು ಚಮಚ ಕೊತ್ತಂಬರಿ ಕಾಳು, ಕಾಳು ಚಮಚ ಮೆಂತ್ಯ ಕಾಳು, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ, ನಿಮ್ಮ ಖಾರಕೆ ಅನುಗುಣವಾಗಿ ಕಾಳು ಮೆಣಸು, ಒಂದು ಚಮಚ ಉದ್ದಿನ ಬೇಳೆ ಇವಿಷ್ಟನ್ನು ಡ್ರೈ ರೋಸ್ಟ್ ಮಾಡಿ ಕೆಂಪಗೆ ಹುರಿ ದು ತಣ್ಣಗಾದ ಮೇಲೆ ಚಿಕ್ಕ ಜಾರ್ ಅಲ್ಲಿ ಸಣ್ಣಗೆ ಮಿಕ್ಸಿ ಮಾಡಿಟ್ಟುಕೊಳ್ಳಿ.

ಈಗ ಒಗ್ಗರಣೆಗೆ ಒಂದು ಬಾಣಲೆ ಬಿಸಿಗಿಟ್ಟೂ, ಎರೆಡು ಚಮಚ ಎಣ್ಣೆ ಸ್ವಲ್ಪ ಸಾಸಿವೆ, ಬೆಳ್ಳುಳ್ಳಿ ಕೆಂಪಾಗಲಿ, ಕರಿಬೇವು, ಇಂಗು ಹಾಕಿ ಬಾಡಿಸಿ ನಂತರ ಹಚ್ಚ ಮೆಣಸಿನ ಪುಡಿ, ಅರಿಶಿನ ಹಾಗೂ ಶುಂಠಿ ಪೇಸ್ಟ್ ಹಾಕಿ ಫ್ರೈ ಮಾಡಿ. ಈಗ ಹಸಿ ಮೆಣಸಿನ ಕಾಯಿ, ಒಂದು ಈರುಳ್ಳಿ ಸೇರಿಸಿ ಫ್ರೈ ಮಾಡಿ. ಈಗ ಕೆಂಪಾಗಿರುವ ೪ ಟೊಮೆಟೊ ಸಣ್ಣದಾಗಿ ಹೆಚ್ಚು ಸೇರಿಸಿ ಉಪ್ಪನ್ನು ಹಾಕಿ. ಟೊಮೆಟೊ ಬೆಂದು ಮೆತ್ತಗಾದಾಗ ರಬ್ಬಿರುವ ಡ್ರೈ ಮಸಾಲ ಹಾಕಿ ಫ್ರೈ ಮಾಡಿ. ಈಗ ಮೊದಲೇ ಬೇಡಿದ ಮಸೂರ ದಾಲ್ ಸೇರಿಸಿ ಚೆನ್ನಾಗಿ ಹದವಾಗಿ ಕಲಸಿ. ಇಡ್ಲಿಗೆ ಮಾಡುವುದಾದರೆ ನೀರಾಗಿ ಮಾಡಿ, ದೋಸೆ ಅನ್ನಕ್ಕೆ ಸ್ವಲ್ಪ ದಪ್ಪ ಇರಲಿ ಸಾರು. ಈಗ ಕುದಿಯುತ್ತಿರುವ ಮಿಶ್ರಣಕ್ಕೆ ಕಸೂರಿ ಮೇತಿ ಇದ್ದರೆ ಉದುರಿಸಿ, ಹಸಿ ಕೊತ್ತಂಬರಿ ಸೊಪ್ಪನ್ನು ಹಾಕಿ ಗ್ಯಾಸ್ ಆಫ್ ಮಾಡಿ ಮುಚ್ಚಳ ಮುಚ್ಚುವಾಗ ಒಂದು ಚಮಚ ತುಪ್ಪ ಹಾಕಿ ಮುಚ್ಚಿಡಿ. ಈಗ ಬಿಸಿ ಬಿಸಿ ಅನ್ನದ ಜೊತೆ ಸಾಂಬರ್ ಸವಿಯಲು ಸಿದ್ಧ. ಈ ರೆಸಿಪಿ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *