ನಮಸ್ತೆ ಪ್ರಿಯ ಓದುಗರೇ, ಚಪಾತಿ ಮಾಡಿದರೆ ಅದಕ್ಕೆ ಸೈಡ್ ಡಿಶ್ ಏನು ಮಾಡೋದು ಎಂಬ ಪ್ರಶ್ನೆ ಎಲ್ಲರಿಗೂ ಬರುತ್ತೆ, ಚಪಾತಿ ಏನೂ ಸುಲಭವೂ ಮಾಡಿ ಬಿಡ್ತೀವಿ ಆದರೆ ಅದಕ್ಕೆ ಯಾವಾಗಲೂ ಮಾಡುವ ಅದೇ ಸೈಡ್ ಡಿಶ್, ಪಲ್ಯಗಳನ್ನು ಮಾಡಿ ಬೇಸರ ಆಗಿದ್ದರೆ, ಇಂದಿನ ಲೇಖನದಲ್ಲಿ ತಿಳಿಸುವ ಬದನೆಕಾಯಿ ಟೊಮ್ಯಾಟೊ ಗ್ರೇವಿಯನ್ನು ಖಂಡಿತ ಟ್ರೈ ಮಾಡಿ ನೋಡಿ. ಮನೆ ಮಂದಿಯೆಲ್ಲ ಇಷ್ಟ ಪಟ್ಟು ಊಟಾ ಸವಿಯುತ್ತಾರೆ. ಈ ಗ್ರೇವಿ ತುಂಬಾ ಸಿಂಪಲ್ ಯಾಕಂದ್ರೆ ಅದರಲ್ಲಿ ಬಳಸಿರುವುದು ಕೇವಲ ಬದನೆಕಾಯಿ. ಬದನೆಕಾಯಿ ಒಂದನ್ನೇ ಬಳಸಿ ಅದಕ್ಕೆ ಟೊಮೆಟೊ ಗ್ರೇವಿ ಜೊತೆಗೆ ಮಿಕ್ಸ್ ಮಾಡಿ ಒಂದು ರುಚಿಯಾದ ಚಪಾತಿ ಕಾಂಬಿನೇಶನ್ ಹೇಗೆ ಮಾಡೋದು ನೋಡೋಣ ಬನ್ನಿ ಸ್ನೇಹಿತರೆ. ಇದು ಚಪಾತಿ, ಬಿಸಿ ಅನ್ನ, ಹಾಗೂ ಅಕ್ಕಿ ರೊಟ್ಟಿಗೆ ಒಳ್ಳೆಯ ಕಾಂಬಿನೇಶನ್. ಹಾಗಾದರೆ ತಡ ಮಾಡದೆ ಬದನೆಕಾಯಿ ಟೊಮ್ಯಾಟೊ ಗ್ರೇವಿಯನ್ನು ಹೇಗೆ ಮಾಡೋದು ನೋಡೋಣ.

ಮೊದಲು ಬದನೆಕಾಯಿಯನ್ನು ಉದ್ದುದ್ದಾಗಿ ಹೆಚ್ಚಿಕೊಂಡು ನೀರಲ್ಲಿ ಹಾಕಿಟ್ಟು ಕೊಳ್ಳಿ, ನೀವು ಯಾವ ಬದನೆಕಾಯಿಯನ್ನು ಬೇಕಾದರೂ ಉಪಯೋಗಿಸಬಹುದು. ಎಳೆಯದಾಗಿದ್ದರೆ ಇನ್ನೂ ಚೆನ್ನಾಗಿ ಉತ್ತಮ ರುಚಿ ಕೊಡುತ್ತೆ. ಇವತ್ತು ನಾವು ಒಂದು ಮೂರು ನಾಲ್ಕು ಜನಕ್ಕೆ ಆಗುವಷ್ಟು ಪ್ರಮಾಣ ಮಾಡುತ್ತಿರುವುದರಿಂದ ಅರ್ಧ ಕೆಜಿ ಅಷ್ಟು ಬದನೆಕಾಯಿ ತಗೊಂಡ್ರೆ ಆಗುತ್ತೆ. ಈಗ ಒಂದು ಮಿಕ್ಸಿ ಜಾರಿಗೆ ಎರೆಡು ಟೊಮೆಟೊ, ಒಂದು ಇಂಚಿನಷ್ಟು ಹಸಿ ಶುಂಠಿ, ಎರೆಡು ಅಥವಾ ಮೂರು ಬೆಳ್ಳುಳ್ಳಿ ಎಸಳು, ನೀವು ಬೆಳ್ಳುಳ್ಳಿ ಇಷ್ಟ ಪಡೋದಾದ್ರೆ ಹೆಚ್ಚು ಪ್ರಮಾಣದಲ್ಲಿ ಬಳಸಿ, ಅರ್ಧ ಬಟ್ಟಲು ಹಸಿ ಕಾಯಿ ತುರಿ ಹಾಕಿಕೊಳ್ಳಿ. ಇವೆಲ್ಲವನ್ನೂ ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಬೇಕು. ಈಗ ಟೊಮೆಟೊ ಗ್ರೇವಿ ರೆಡಿ ಆಗಿದೆ. ಈಗ ಒಂದು ಬಾಣಲೆ ಬಿಸಿ ಇಟ್ಟು, ಅದಕ್ಕೆ ಮೂರು ಟೇಬಲ್ ಸ್ಪೂನ್ ಅಷ್ಟು ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕಾದ ನಂತರ ಅರ್ಧ ಚಮಚ ಜೀರಿಗೆ, ಸ್ವಲ್ಪ ಹಿಂಗನ್ನು ಉದುರಿಸಿ, ಜೀರಿಗೆ ಚಟಪಟ ಸಿಡಿದ ಮೇಲೆ ಕರಿಬೇವು ಸೊಪ್ಪು ಹಾಕಿ, ಒಂದು ಈರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿ ಹಸಿ ವಾಸನೆ ಹೋಗಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ, ಇದಕ್ಕೆ ನಾವು ಮೊದಲೇ ರುಬ್ಬಿರುವ ಟೊಮೆಟೊ ಪೇಸ್ಟ್ ನ್ನ ಹಾಕಿ ನೀರಿನಂಶ ಹೋಗಿ, ಎಣ್ಣೆ ಬಿಡುವ ವರೆಗೆ ಚೆನ್ನಾಗಿ ಕೈ ಆಡಿಸಿ.

ಎಣ್ಣೆ ಬಿಟ್ಟ ಮೇಲೆ ಒಂದು ಚಿಟಿಕೆ ಅರಿಶಿನ, ಒಂದು ಚಮಚ ಕೆಂಪು ಮೆಣಸಿನ ಪುಡಿ, ಅಷ್ಟೇ ಪ್ರಮಾಣದ ಧನಿಯಾ ಪುಡಿ, ಒಂದು ಚಮಚ ಗ್ರೇವಿಗೆ ಬಣ್ಣ ಬರಲು ಕೆಂಪು ಮೆಣಸಿನ ಪುಡಿಯನ್ನು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಅರ್ಧ ಲೋಟದಷ್ಟು ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಬೇಯಲು ಬಿಡಿ, ಬೆಂದ ನಂತರ ಮೊದ್ಲೇ ಹೆಚ್ಚಿಟ್ಟು ಕೊಂಡಿರುವ ಬದನೆಕಾಯಿಯನ್ನು ಹಾಕಿ ನೀರು ಬೇಕೆನಿಸಿದರೆ ಸ್ವಲ್ಪ ಸೇರಿಸಿ ಗ್ರೇವಿ ರೀತಿ ಮಾಡಿಕೊಳ್ಳಿ. ಈಗ ಮಿಕ್ಕ ಮಸಾಲೆ ಪದಾರ್ಥಗಳನ್ನು ಸೇರಿಸಿಕೊಳ್ಳುವ. ಅರ್ಧ ಚಮಚ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ಹಾಗೂ ಒಂದು ಚಮಚದಷ್ಟು ಕಸೂರಿ ಮೇತಿಯನ್ನು ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಬದನೆಕಾಯಿ ಬೆಂದು ಮೆತ್ತಗಾಗುವವರೆಗೆ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಬೆಂದಿದೆ ಎಂದೇನಿಸಿದ ನಂತರ ಕೊನೆಯದಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ಮಿಕ್ಸ್ ಕೊಟ್ಟರೆ ಬಿಸಿ ಬಿಸಿ ಬಾಯಲ್ಲಿ ನೀರೂರಿಸುವ ಬದನೆಕಾಯಿ ಟೊಮ್ಯಾಟೊ ಗ್ರೇವಿ ಸವಿಯಲು ಸಿದ್ಧ. ನೀವು ಒಮ್ಮೆ ಖಂಡಿತ ಟ್ರೈ ಮಾಡಿ. ಈ ರೆಸಿಪಿ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ತಪ್ಪದೆ ಲೈಕ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *