ವೀಕ್ಷಕರೆ ನಮಗೆ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವಿಧ ವಿಧವಾದ ತಂತ್ರಜ್ಞಾನಗಳು ಈಗಾಗಲೇ ನಮ್ಮ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಷ್ಟೋ ಸತಿ ಈ ತಂತ್ರಜ್ಞಾನಗಳನ್ನು ನಮ್ಮ ಹೊಲದಲ್ಲಿ ಉಪಯೋಗಿಸಿದರು ಕೂಡ ಕೆಲವೊಮ್ಮೆ ಕಳ್ಳತನವಾಗುವಂತಹ ಸಂದರ್ಭಗಳು ಬಂದೇ ಬರುತ್ತದೆ ಆದರೂ ಕೂಡ ಕೆಲವೊಮ್ಮೆ ಇದೇ ತಂತ್ರಜ್ಞಾನಗಳಿಂದನಾವು ದೊಡ್ಡ ಅಪಾಯವನ್ನು ಕೂಡ ತಪ್ಪಿಸಬಹುದು ಹೌದು ಇವತ್ತು ಮಾಹಿತಿ ಕೂಡ ಅದೇ ರೀತಿ ಆಗಿದೆ. ಒಂದು ವೇಳೆ ನೀವು ಹೊಲ ಕಾಯಲು ಯಾರಾದರೂ ಬೇರೆ ಜನರನ್ನು ಇಟ್ಟಿದ್ದಾರೆ ಈ ಮಾಹಿತಿ ನೋಡಿ ನಿಮಗೆ ಉಪಯೋಗವಾಗಬಹುದು.

ಏಕೆಂದರೆ ಇದರಲ್ಲಿ ಇರುವಂತಹ ತಂತ್ರಜ್ಞಾನ 10 ಜನಗಳ ಸೆಕ್ಯೂರಿಟಿ ಇರುವ ಶಕ್ತಿ ಈ ಒಂದು ಸಿಸಿ ಟಿವಿ ಸೋಲಾರ್ ಕ್ಯಾಮೆರಾಕ್ಕೆ ಇದೆ. ಹೌದು ಈ ತಂತ್ರಜ್ಞಾನದ ಹೆಸರು ಸೋಲಾರ್ ನಿಂದ ಸಿಸಿ ಟಿವಿ ಕ್ಯಾಮೆರಾ. ಸೋಲಾರ್ ಸಿಸಿ ಟಿವಿ ಎಂದರೇನು ನಿಮಗೆ ಮೊದಲು ತಲೆಯಲ್ಲಿ ಬರುವುದು ಸೋಲಾರ್ ಎಂದರೆ ಈ ಸೂರ್ಯನ ಬೆಳಕಿನಿಂದ ಓಡುವಂತಹ ತಂತ್ರಜ್ಞಾನ ಇದರ ಉಪಯೋಗವೇನೆಂದರೆ ನಮಗೆ ಯಾವುದೇ ರೀತಿಯಾದಂತಹ ಹೊರಗಿನಿಂದ ವಿದ್ಯುತ್ ಇದಕ್ಕೆ ನೀಡುವುದು ನಮಗೆ ಅಗತ್ಯವಿರುವುದಿಲ್ಲ ಹಾಗಾಗಿ ನಾವು ವಿದ್ಯುತ್ ಖರ್ಚನ್ನು ಕೂಡ ಉಳಿಸಬಹುದು ಇದರ ಬದಲಾಗಿ ನಮಗೆ ಪರಿಸರದಲ್ಲಿ ಸಿಗುವಂತಹ ಸೂರ್ಯನ ಬೆಳಕಿನಿಂದ ಈ ಒಂದು ಕ್ಯಾಮೆರಾವನ್ನು ನಾವು ಓಡಿಸಬಹುದು.

ಹೌದು ಹಗಲು ರಾತ್ರಿ ಎನ್ನದೆ ಈಸಿಸಿ ಟಿವಿ ಕ್ಯಾಮೆರಾ ಎತ್ತಾಯಿಚೆ 24 ಗಂಟೆಗಳ ಕಾಲ ಕೆಲಸ ಮಾಡುತ್ತದೆ. ಇದರ ಮಧ್ಯ ನಿಮಗೆ ಯಾವುದೇ ರೀತಿಯಾದಂತಹ ತೊಂದರೆ ಕೂಡ ಕೊಡುವುದಿಲ್ಲ ಅಷ್ಟು ಚೆನ್ನಾಗಿ ನಡೆಯುತ್ತದೆ ಈ ತಂತ್ರಜ್ಞಾನ ಒಮ್ಮೆ ನೀವು ಕೂಡ ನಿಮ್ಮ ಹೊಲದಲ್ಲಿ ಹಾಕಿ ನೋಡಿದರೆ ಖಂಡಿತ ನೀವು ಆಶ್ಚರ್ಯಗೊಳ್ಳುತ್ತೀರಾ. ಅಷ್ಟೇ ಅಲ್ಲದೆ ಇದರ ಇನ್ನೊಂದು ಮುಖ್ಯವಾದಂತಹ ಕಾರ್ಯವೇನೆಂದರೆ ಒಂದು ವೇಳೆ ನೀವು ನಿಮ್ಮ ಹೊಲಕ್ಕೆ ಈ ಒಂದು ತಂತ್ರಜ್ಞಾನವನ್ನು ಉಪಯೋಗಿಸಿದರೆ ಒಂದು ವೇಳೆ ನಿಮಗೆ ಗೊತ್ತಿಲ್ಲದಂತಹ ವ್ಯಕ್ತಿಗಳು ಯಾರಾದರೂ ಹೊಲದಲ್ಲಿ ಕಾಲಿಟ್ಟರೆ ನೀವು ಅವರನ್ನು ಈ ಕ್ಯಾಮೆರಾ ಮೂಲಕವೇ ಸಂದೇಶ ಕೊಟ್ಟು ಹೊರ ಕಳಿಸಬಹುದು.

ಅದು ಹೇಗೆ ಅಂತೀರಾ ಈ ಒಂದು ಕ್ಯಾಮೆರಾದಿಂದ ನಿಮ್ಮ ಹತ್ತಿರ ಇರುವಂತಹ ಮೊಬೈಲ್ ಫೋನಿನ ಮುಖಾಂತರ ನಾವು ಈ ಒಂದು ಕ್ಯಾಮೆರಾವನ್ನು ಕಾರ್ಯಾಚರಣೆ ಮಾಡಬಹುದು. ನಾವು ಮೊಬೈಲಿನಲ್ಲಿ ಒಂದು ಆಪ್ ಅನ್ನು ಹಾಕಿಕೊಂಡು ನಂತರ ಆಪ್ ಹಾಗೂ ಕ್ಯಾಮೆರಾವನ್ನು ಎರಡನ್ನು ನಾವು ಕನೆಕ್ಟ್ ಮಾಡಬೇಕು ಈ ಕ್ಯಾಮೆರಾದಿಂದ ನಿಮ್ಮ ಸುತ್ತಮುತ್ತಲು ಇರುವಂತಹ ಹೊಲದಲ್ಲೂ ಕೂಡ ಎಲ್ಲಾ ಒಂದು ಅಪಾಯವನ್ನು ನೀವು ತಡೆಗಟ್ಟಬಹುದು ಇದು 360° ಕ್ಯಾಮೆರಾ ಎಂದು ಕರೆಯಲಾಗುತ್ತದೆ ಇದರ ಬೆಲೆ ಹದಿನೈದು ಸಾವಿರದಿಂದ ಆರಂಭವಾಗುತ್ತದೆ. ನೀವು ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *