ರಾಜ್ಯದಲ್ಲಿ ಕಾಂಗ್ರೆಸ್ ಬಂದ ಮೇಲೆ ನಮ್ಮ ರಾಜ್ಯ ಸರ್ಕಾರ ಜನತೆಗೆ ಅನುಕೂಲವಾಗಲು ಹಲವು ಯೋಜನೆಗಳನ್ನ ಜಾರಿಗೆ ತಂದಿದೆ ಮಹಿಳೆಯರಿಗಾಗಿ ವೃದ್ಧರಿಗಾಗಲಿ ಮತ್ತು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಉದ್ದಿಮೆದಾರರಿಗೆ ಹೀಗೆ ಹಲವಾರು ರೀತಿಯಲ್ಲಿ ಉನ್ನತಿಯಾಗಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಹೊಸದಾಗಿ ವೃದ್ಧರಿಗೆ ಸಹಾಯವಾಗುವಂತೆ ಒಂದು ಹೊಸ ಯೋಜನೆಯನ್ನು ರೂಪಿಸಿದೆ.

ವೃದ್ಧರಿಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣವನ್ನು ನೀಡಲಾಗುತ್ತಿತ್ತು. ಈಗ ವೃದ್ಧಾಪ್ಯ ವೇತನದಲ್ಲಿ ಸ್ವಲ್ಪ ಮೊತ್ತವನ್ನು ಏರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯರ ಸದೃಢೀಕರಣ ಇಲಾಖೆ ಅಕ್ಟೋಬರ್ ಒಂದರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಿತ್ತು. ಈ ಸಮಯದಲ್ಲಿ ಸಿದ್ದರಾಮಯ್ಯನವರು ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ವೃದ್ಧರಿಗೆ ಒಂದು ಹೊಸ ಯೋಜನೆಯನ್ನ ರೂಪಿಸುವುದಾಗಿ ಭರವಸೆಯನ್ನು ನೀಡಿದ್ದಾರೆ.

ಕರ್ನಾಟಕದಲ್ಲಿ 2011ರ ಪ್ರಕಾರ 57 ಲಕ್ಷ ಹಿರಿಯರು ಇದ್ದಾರೆ ಸುಮಾರು 2,13,705 ಹಿರಿಯರಿಗೆ ಸೇವಾ ಸಿಂಧು ಆನ್ಲೈನ್ ಪೋರ್ಟಲ್ಲಿಂದ ಐಡೆಂಟಿಟಿ ಕಾರ್ಡನ್ನು ಕೊಡಲಾಗಿದೆ. ಇರುವ ಒಟ್ಟು 57 ಲಕ್ಷ ಹಿರಿಯ ನಾಗರಿಕರಲ್ಲಿ 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಸಂಧ್ಯಾ ಸುರಕ್ಷಣೆ ಯೋಜನೆಯಿಂದ 30 ಲಕ್ಷದ 27,270 ಜನರಿಗೆ ಪ್ರತಿ ತಿಂಗಳು 1200 ರೂಪಾಯಿ ವೇತನವನ್ನು ಕೊಡಲಾಗುತ್ತಿದೆ. ಆದರೆ ಇದೀಗ ಈ ವೇತನದಲ್ಲಿ ಹೆಚ್ಚಳವನ್ನು ಮಾಡುವ ಭರವಸೆ ಅಲ್ಲ ಲಕ್ಷ್ಮಿ ಹೆಬ್ಬಾಳ್ಕರ್ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಇದಷ್ಟೇ ಅಲ್ಲದೆ ಇನ್ನೂ ಹಲವು ರೀತಿಯ ಸೌಲಭ್ಯವನ್ನು ವೃದ್ಧಾಪ್ಯರಿಗೆ ಒದಗಿಸಲಾಗುತ್ತಿದೆ. ಹಗಲು ಯೋಗ ಕ್ಷೇಮ ಕೇಂದ್ರವನ್ನ ತೆರೆಯಲಾಗಿದೆ ಮತ್ತು ಬಡತನದಲ್ಲಿರುವ ವೃದ್ದರಿಗೆ 80 ವೃದ್ಧಾಶ್ರಮವನ್ನು ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಕೂಡ ಹಿರಿಯರಿಗೆ ಅಂತಾನೆ ಬೇರೆಯಾಗಿ ಹತ್ತು ಹಾಸಿಗೆಗಳನ್ನ ಮೀಸಲಾಗಿ ಇಡಲಾಗಿದೆ. ಎಲ್ಲ ಹಿರಿಯರು ಕೂಡ ಈ ಸೌಲಭ್ಯಗಳನ್ನು ಪಡೆಯಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *