ಚಾಣಕ್ಯರು ಮಹಾ ಮೇಧಾವಿ ಆಗಿದ್ದರು. ಅವರ ಆದರ್ಶಗಳು ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಿದೆ. ಈ ಮೂರು ವಿಚಾರಗಳಲ್ಲಿ ಮಹಿಳೆಯರೇ ಮುಂದಿರುತ್ತಾರೆ ಪುರುಷರಿಗಿಂತ ಅಂತ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವ ವಿಚಾರದಲ್ಲಿ ಮಹಿಳೆಯರ ಮುಂದೆ ಅಂತ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಹೇಳಬೇಕಂದ್ರೆ ಹಸಿವಿನ ವಿಚಾರದಲ್ಲಿ ಮಹಿಳೆಯರೇ ಮುಂದು ಅಂತ ಚಾಣಕ್ಯರು ಹೇಳುತ್ತಾರೆ ಯಾಕೆಂದರೆ ಮಹಿಳೆಯರಿಗೆ ಹಸಿವಾದರೆ ಅವರು ಪುರುಷರಿಗಿಂತ ಹೆಚ್ಚು ತಿನ್ನುತ್ತಾರೆ. ಹಾಗೆಯೇ ಪುರುಷರಿಗಿಂತ ಹೆಚ್ಚು ಹಸಿವು ಇವರಿಗೆ ಆಗುತ್ತದೆ ಪುರುಷರನ್ನು ಮೀರಿಸುವ ಸಾಮರ್ಥ್ಯ ಇವರಿಗಿದೆ ಅಂತ ಚಾಣಕ್ಯರು ಹೇಳುತ್ತಾರೆ. ಅಷ್ಟೇ ಅಲ್ಲ ಹಸಿವನ್ನ ಕಟ್ಟಿಕೊಳ್ಳುವುದರಲ್ಲಿ ಕೂಡ ಪುರುಷರಿಗಿಂತ ಇವರ ಹೆಚ್ಚು ಪುರುಷರಲ್ಲಿ ಹಸಿವನ್ನು ಕಟ್ಟಲು ಆಗುವುದಿಲ್ಲ ಆದರೆ ಮಹಿಳೆಯರು ಎಷ್ಟು ಹೊತ್ತಾದರೂ ಕೂಡ ಆಹಾರವನ್ನು ತಿನ್ನದೇ ಹಸಿವನ್ನು ಹಾಗೆ ಉಳಿಸಿಕೊಂಡು ಹೋಗುತ್ತಾರೆ.

ಇನ್ನು ಹೇಳಬೇಕು ಅಂತ ಅಂದ್ರೆ ಧೈರ್ಯದ ವಿಚಾರದಲ್ಲೂ ಕೂಡ ಮಹಿಳೆಯರೇ ಮುಂದು ಅಂತ ಹೇಳಲಾಗುತ್ತದೆ ಯಾಕೆಂದರೆ ಪುರುಷರನ್ನು ಮೀರಿಸುವಂತಹ ಧೈರ್ಯ ಮಹಿಳೆಯರ ಹತ್ತಿರ ಇದೆ ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲರು. ಯಾವುದೇ ಸಾಹಸವನ್ನು ಕೂಡ ಮಹಿಳೆಯರು ಮಾಡಬಲ್ಲರು. ಅಷ್ಟು ಸಾಹಸವಂತರು ಧೈರ್ಯವಂತರು ಮಹಿಳೆಯರು ಆಗಿದ್ದಾರೆ ಉದಾಹರಣೆಗೆ ನೋಡಿ ಹಿಂದಿನ ಕಾಲದಲ್ಲಿ ಮನೆ ಬರೀ ಮನೆ ಕೆಲಸ ಕಷ್ಟ ಸೀಮಿತವಾಗಿದ್ದ ಮಹಿಳೆಯರು ಇವತ್ತು ಎಲ್ಲ ರಂಗದಲ್ಲಿಯೂ ಕೂಡ ಇದ್ದಾರೆ.

ಇನ್ನು ಕೊನೆಯದಾಗಿ ಹೇಳಬೇಕೆಂದರೆ ಮಹಿಳೆಯರು ಬುದ್ದಿವಂತಿಕೆ ವಿಚಾರದಲ್ಲೂ ಮುಂದಿದ್ದಾರೆ ಏಕೆಂದರೆ ಮನೆಯನ್ನು ತೂಗಿಸಿ ನಡೆಸಿಕೊಂಡು ಹೋಗುವ ಬುದ್ದಿವಂತಿಕೆ ಮಹಿಳೆಯರಲ್ಲಿದೆ ಆದರೆ ಪುರುಷರಿಗೆ ಅಷ್ಟು ಬುದ್ಧಿವಂತಿಕೆ ಕಾಣಿಸುವುದಿಲ್ಲ. ಮನೆಯ ಒಳಗಡೆಯೂ ದುಡಿಯುತ್ತಾರೆ ಮನೆಯ ಹೊರಗೂ ದುಡಿಯುತ್ತಾರೆ ಅಂತಹ ಶಕ್ತಿ ಮಹಿಳೆಯರಲ್ಲಿ ಇದೆ ಅಂತಹ ಬುದ್ಧಿವಂತಿಕೆ ಮಹಿಳೆಯರು ಒಳಗೊಂಡಿದ್ದಾರೆ. ಪ್ರತಿಯೊಂದು ಸಮಯಕ್ಕೂ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಒಂದು ಕೆಪ್ಯಾಸಿಟಿ ಮಹಿಳೆಯರಲ್ಲಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *