ಜೀವನದಲ್ಲಿ ಏನು ಕಳೆದುಕೊಂಡರು? ಒಂದನ್ನು ಮಾತ್ರ ಕಳೆದುಕೊಳ್ಳಬಾರದು. ಅದು ಏನು ಗೊತ್ತಾ ಆಶಾಭಾವ ,ಹೋಪ್. ಇದನ್ನು ಕಳೆದುಕೊಂಡರೆ ನಾವು ನಿಂತಲ್ಲೇ ನಿಂತು ಬಿಡುತ್ತೇವೆ. ಜೀವನ ಇಷ್ಟೇ ಸಾಕು ಅನ್ನೋ ಮನಸ್ಥಿತಿಗೆ ಬಂದುಬಿಡುತ್ತೇವೆ.ಈ ವ್ಯಕ್ತಿಯು ಹಾಗೆ ತನ್ನವರು ಕಾಣಲಿಲ್ಲ ಯಾರೂ ಇರಲಿಲ್ಲ. ಯಾವ ದಾರಿಯೂ ಕಾಣದೆ ಕಸದ ತೊಟ್ಟಿಯಲ್ಲಿ ಸಿಗುವ ಊಟ ತಿಂದು ಬದುಕುತ್ತಿದ್ದ. ಆದರೆ 1 ದಿನ ಈ ಕೆಟ್ಟ ದರಿದ್ರ ಜೀವನದಿಂದ ನಾನು ಆಚೆ ಬರಬೇಕು.ಎಲ್ಲರಂತೆ ನಾನು ಬದುಕಬೇಕು ಅನ್ನೋ ಒಂದೇ ಒಂದು ಆಶಾಭಾವ ಇವತ್ತು ಈ ವ್ಯಕ್ತಿಯ ಬಗ್ಗೆ ನಾವು ಮಾತನಾಡುವಂತೆ ಮಾಡಿದೆ. ಇಂಗ್ಲೆಂಡ್ ದೇಶದಲ್ಲಿ ವಾಸವಿರುವ ಈತನ ಹೆಸರು ಬ್ರಿಯಾಂಟ್.

ಚಿಕ್ಕವನಿದ್ದಾಗಲೇ ಎಲ್ಲರನ್ನೂ ಕಳೆದುಕೊಂಡು ಈ ಹುಡುಗ ಬೀದಿಗೆ ಬಿದ್ದ. ಅವತ್ತಿಂದ ಈತನ ಹೋರಾಟ ಒಂದುತ್ತಿನ ಊಟಕ್ಕಾಗಿ ಯಾವುದೇ ದಾರಿ ಕಾಣಲಿಲ್ಲ. ಯಾರದು ಮಾರ್ಗದರ್ಶನ ಸಿಗಲಿಲ್ಲ. ವಿದ್ಯಾಭ್ಯಾಸ ಇಲ್ಲ ಹಾಗಾಗಿ ಕೆಲಸ ಸಿಗಲಿಲ್ಲ. ಈತನ ಬದುಕು ಅಕ್ಷರಶಃ ಬೀದಿಗೆ ಸೀಮಿತವಾಯಿತು. ಕಸದ ತೊಟ್ಟಿಯಲ್ಲಿ ಬಿಸಾಕಿದ ಅಲ್ಪ ಸ್ವಲ್ಪ ಊಟವನ್ನು ತಿಂದು ಬದುಕುತ್ತಿದ್ದ ಕೆಲವೊಮ್ಮೆ ಊಟ ಸಿಗದೆ ಹಸಿವಿನಿಂದ ಮಲಗುತ್ತಿದ್ದ. ಆದರೆ 1 ದಿನ ಈ ಜೀವನ ಸಾಕು ಸಾಕು ಹೇಗಾದರೂ ಮಾಡಿ ಇದರಿಂದ ಆಚೆ ಬರಬೇಕು ಎಂದು ನಿರ್ಧರಿಸಿದ ಈತ ಹಿಡಿದಿದ್ದು ಒಂದು ಬಕೆಟ್ ಹಾಗೂ ಸ್ಪಾಂಜ್ ನಿಮ್ಮ ಕಾರ ಚೆನ್ನಾಗಿ ಕ್ಲೀನ್ ಮಾಡ್ತೀನಿ.

ನಿಮಗೆ ಇಷ್ಟ ಇದ್ದಷ್ಟು ಹಣ ಕೊಡಿ ಎಂದು ಕೈಯಲ್ಲಿ ಒಂದು ಬಕೆಟ್ ಹಾಗೂ ಸ್ಪಾಂಜ್ ಹಿಡಿದುಕೊಂಡು ಬ್ರಿಯಾಂಟ್ ಕಾರ್ ವಾಶ್ ಮಾಡುತ್ತಾ ಬದುಕಿಗೆ ಒಂದು ದಾರಿ ಯನ್ನು ಕಂಡುಕೊಂಡ. ಈತನ ನಿಯತ್ತಿನ ಕೆಲಸ ನೋಡಿ ಸಂತೋಷಗೊಂಡ ಒಬ್ಬ ವ್ಯಕ್ತಿ ಆತನಿಗೆ ಕಾರ್ ವಾಶಿಂಗ್ ಗ್ಯಾರೇಜ್‌ನಲ್ಲಿ ಕೆಲಸ ಕೊಡಿಸಿದ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು.ಬ್ರಿಟನ್ ನಂತರ ಫೆರಾರಿ ಗ್ಯಾರೇಜ್ ನಲ್ಲಿ ಕೆಲಸ ಸಿಕ್ಕಿತು. ಅಲ್ಲಿಂದ ಬ್ರಿಯಾಂಟ್ ಜೀವನ ಬದಲಾಗಿ ಹೋಯ್ತು. ದುಬಾರಿ ಕಾರುಗಳನ್ನು ಹಾಗೂ ಅದರ ಬಿಡಿಭಾಗಗಳನ್ನು ಹೇಗೆ ತೊಳೆಯಬೇಕು ಅನ್ನೋ ಸೂಕ್ಷ್ಮತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಬ್ರಿಯಾಂಟ್.

ದುಬಾರಿ ಕಾರು ವಾಷ ಮಾಡೋದ್ರಲ್ಲಿ ಪ್ರಸಿದ್ಧ ಗೊಂಡ ನಮ್ಮ ದುಬಾರಿ ಕಾರನ್ನು ಬ್ರಿಯಾಂಟ್ ವಾಶ್ ಮಾಡಬೇಕು ಎಂದು ಕಾರ್ ಓನರ್ ಹೇಳುತ್ತಿದ್ದರು. ನಂತರ ಕೆಲಸಕ್ಕೆ ರಾಜೀನಾಮೆ ಕೊಟ್ಟು ತನಗೆ ಗೊತ್ತಿರುವ ವ್ಯಕ್ತಿಗಳ ದುಬಾರಿ ಕಾರ್ ಕ್ಲೀನ್ ಮಾಡಲು ಆರಂಭಿಸಿದ ಬ್ರಿಯಾಂಟ್. ಫೆರಾರಿ ಸ್ಪೋರ್ಟ್ಸ್ ಕಾರ್ ಬೆನ್ನಲ್ಲೇ ಜಾಗ್ವಾರ್ ಹೀಗೆ ದುಬಾರಿ ಕಾರ್ ಕ್ಲೀನ್ ಮಾಡುವ ಈತ ಒಂದು ಕಾರ್ ವಾಶ್ ಮಾಡಲು 5,70,000 ಚಾರ್ಜ ಮಾಡುತ್ತಾನೆ.

Leave a Reply

Your email address will not be published. Required fields are marked *