ಗ್ರಾಮ ಪಂಚಾಯಿತಿ ಮುಖಾಂತರ ನಿಮ್ಮ ಊರಿನಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಲಿ ಅಥವಾ ಸಾರ್ವಜನಿಕರಿಗೆ ಸಹಾಯವಾಗುವ ಯಾವುದೇ ಕೆಲಸ ಆಗಿರಬಹುದು. ಸರಕಾರಿ ಸೌಲಭ್ಯ ಅಥವಾ ಉದ್ಯೋಗ ಖಾತ್ರಿ ಕೆಲಸದ ಬಗ್ಗೆ ಆಗಿರಬಹುದು. ಊರು ಅಭಿವದ್ಧಿ ಹೊಂದಬೇಕು ಎಂದು ಪ್ರತಿಯೊಬ್ಬರ ಅಭಿಪ್ರಾಯ ಇರುತ್ತೆ.ಆದ್ರೆ ಕೆಲವೊಂದು ಸಮಯದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯ ಸರಿಯಾಗಿ ಸ್ಪಂದಿಸುವುದಿಲ್ಲ. ಯಾವುದೇ ಕೆಲಸ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತೆ. ಭಾರತ ಕೃಷಿ ಪ್ರಧಾನ ದೇಶ. ಹಳ್ಳಿಗಳಲ್ಲಿ ದೇಶದ ಆತ್ಮ ನೆಲೆಸಿದೆ ಎಂದೂ ಹೇಳಲಾಗುತ್ತದೆ. ದೇಶದ ಜನಸಂಖ್ಯೆಯ 60 ರಿಂದ 70 ರಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.

ಸಂವಿಧಾನದ 243ನೇ ವಿಧಿಯ ಅಡಿಯಲ್ಲಿ ಪಂಚಾಯತ್ ರಾಜ್‌ಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮಕ್ಕೂ ಒಬ್ಬ ಮುಖ್ಯಸ್ಥನಿದ್ದಾನೆ, ಅವರನ್ನು ನಾವು ಗ್ರಾಮದ ಮುಖ್ಯಸ್ಥ ಅಥವಾ ಸರಪಂಚ್ ಎಂದು ಕರೆಯುತ್ತೇವೆ. ಪ್ರತಿ ಗ್ರಾಮದಲ್ಲಿಯೂ ಗ್ರಾಮ ಮುಖ್ಯಸ್ಥರ ಪಾತ್ರ ಮಹತ್ವದ್ದಾಗಿದೆ. ದೇಶದ ಅಭಿವೃದ್ಧಿಯ ನಿಯಂತ್ರಣವು ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಅವರ ಮೇಲೆ ಇರುವಂತೆಯೇ, ಗ್ರಾಮಗಳ ಅಭಿವೃದ್ಧಿಯ ಜವಾಬ್ದಾರಿಯು ಗ್ರಾಮದ ಮುಖ್ಯಸ್ಥ ಅಥವಾ ಸರಪಂಚರ ಮೇಲಿದೆ. ಗ್ರಾಮ ಪಂಚಾಯತಿ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸಗಳು ಆಗಬೇಕೆಂದರೆ ನಾಗರಿಕರು ಏನು ಮಾಡಬೇಕು.

ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸಗಳು ಆಗ್ಬೇಕಂದ್ರೆ ಗ್ರಾಮದಲ್ಲಿ ಸುಮಾರು ಐದರಿಂದ 10 ಜನ ಸೇರಿಕೊಂಡು ಏನು ತೊಂದರೆ ಆಗಿದೆ ಅನ್ನೋದನ್ನು ಮೊದಲು ಚರ್ಚೆ ಮಾಡಬೇಕು. ನಂತರ ಆಗಿರುವ ತೊಂದರೆಯನ್ನು ವಿವರಿಸಿ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ದೂರನ್ನು ಬರಬೇಕು.ಆ ದೂರು ಹೇಗಿರಬೇಕೆಂದರೆ ದೂರಿನಲ್ಲಿ ನೈತಿಕತೆ ಇರಬೇಕು ಅಂದ್ರೆ ನಿಜ ಅಂಶ ಇರಬೇಕು.ಮತ್ತು ದೂರು ನಿಮ್ಮ ಗ್ರಾಮದ ಮತ್ತು ಗ್ರಾಮದವರ ಒಳಿತಿಗಾಗಿ ಅನ್ನೋದನ್ನು ಗ್ರಾಮಸ್ಥರಿಗೆ ವಿವರಿಸಬೇಕು. ದೂರು ಸ್ಪಷ್ಟವಾಗಿ ಯಾವುದರ ಬಗ್ಗೆ ಅನ್ನೋದು ಉದ್ದೇಶ ಹೊಂದಿರಬೇಕು. ಬರೆದಿರುವ ದೂರನ್ನು ನಿಮ್ಮ ಗ್ರಾಮ ಪಂಚಾಯಿತಿಯ ಕಾರ್ಯಾಲಯಕ್ಕೆ ಸಲ್ಲಿಸಬೇಕು.

ಗ್ರಾಮ ಪಂಚಾಯಿತಿಗೆ ದೂರು ಕೊಟ್ಟ ನಂತರ ಒಂದು ಕಾಪಿ ಪಡೆದುಕೊಳ್ಳಿ. ಗ್ರಾಮ ಪಂಚಾಯಿತಿ ಅವರು ಕೇಳಿದಷ್ಟು ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಒಂದು ವೇಳೆ ನಿಮ್ಮ ಕೆಲಸ ಪೂರ್ಣಗೊಳಿಸದಿದ್ದರೆ ನೀವು ಮುಂದಿನ ಸ್ಟೆಪ್ ಹೋಗಬಹುದು. ಮುಂದಿನ ಹೆಜ್ಜೆ ಗ್ರಾಮ ಪಂಚಾಯಿತಿ ವಿರುದ್ಧ ತಾಲೂಕು ಪಂಚಾಯಿತಿಯ ದೂರು ಕೊಡಬಹುದು. ಅಲ್ಲಿನು ಕೂಡ ನೀವು ಐದರಿಂದ 10 ಜನ ಸೇರಿ ನಿಮ್ಮ ಗ್ರಾಮ ಪಂಚಾಯ್ತಿಗೆ ಕೊಟ್ಟಿರುವ ದೂರನ್ನು ಉಲ್ಲೇಖಿಸಿ ಲಿಖಿತ ರೂಪದಲ್ಲಿ ಬರೆದು ಮತ್ತೆ ಪುನಃ ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು. ಹಾಗೇನಾದರೂ ಒಂದು ವೇಳೆ ತಾಲೂಕು ಪಂಚಾಯಿತಿ ಅವರಿಂದಲೂ ನಿಮ್ಮೂರಿನ ಕೆಲಸ ಪೂರ್ಣಗೊಳ್ಳದಿದ್ದರೆ ಮುಂದಿನ ಮುಂದಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *