ಹೌದು ಸ್ನೇಹಿತರೆ, ರಾಜ್ಯ ಸರ್ಕಾರ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಅನ್ನ ನೀಡಿದೆ. ಅದೇನೆಂದರೆ ಸಪ್ಟೆಂಬರ್ ಬಂದೇಬಿಡ್ತು. ಗೃಹಲಕ್ಷ್ಮಿಯ 2ನೇ ಕಂತಿನ ಹಣವನ್ನ ಸರ್ಕಾರ ಸಾಧ್ಯವೇ ಬಿಡುಗಡೆ ಮಾಡಲಿದೆ. ಅದರಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಇದು ಬಿಡುಗಡೆಯಾಗಿದೆ ಅಂತ ತಿಳಿದುಕೊಳ್ಳೋಣ ಬನ್ನಿ. ಆದರೆ ಈ ಗೃಹಲಕ್ಷ್ಮಿ ವಿಚಾರದಲ್ಲಿ ಮಹಿಳೆಯರು ತುಂಬಾ ಗೊಂದಲದಲ್ಲಿದ್ದಾರೆ. ಏಕೆಂದರೆ 1.28 ಕೋಟಿ ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ ಕೇವಲ 70 ಪ್ರತಿಶತ ಜನರಿಗೆ ಮಾತ್ರ ಗೃಹಲಕ್ಷ್ಮಿ ಹಣ ಬಂದು ಸೇರಿದೆ.

ಇನ್ನು ಉಳಿದವರ ಖಾತೆಗೆ ಹಣ ಬಂದಿಲ್ಲ. ಅದಕ್ಕಾಗಿ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಅಕ್ಕ ಪಕ್ಕದ ಮನೆಯವರೆಲ್ಲರಿಗೂ ಹಣ ಬಂದಿದೆ ನಮಗೆ ಮಾತ್ರ ಬಂದಿಲ್ಲ ಅಂತ ಯೋಚಿಸುತ್ತಿದ್ದಾರೆ. ಆದರೆ ಯಾಕೆ ಬಂದಿಲ್ಲ ಅಂತಂದ್ರೆ ಕೆಲವು ಮಹಿಳೆಯರ ಖಾತೆಗಳು ತಾತ್ಕಾಲಿಕವಾಗಿ ಬಂದಾಗಿವೆ. ಅವರಿಗೆ ಇನ್ನು ಹಣ ಬಂದಿಲ್ಲ ಇನ್ನು ಕೆಲವು ಮಹಿಳೆಯರಿಗೆ ತಾಂತ್ರಿಕ ದೋಷದಿಂದನೇ ಹಣ ಬಂದಿಲ್ಲ. ಈ ರೀತಿಯಾಗಿ ಎರಡನೇ ಕಂತಿನ ಹಣದ ಮೂಲಕ ಯಾರ್ಯಾರಿಗೆ ಹಣ ಬಂದಿಲ್ಲವೋ ಮೊದಲನೇ ಕಂತಿನ ಹಣವು ಸೇರಿ ಬರುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಯಾರ್ಯಾರಿಗೆ ಮೊದಲನೇ ಕಂತೆನ ಹಣವು ತಲುಪಿದೆಯೋ ಅವರಿಗೆ ಎರಡನೇ ಕಂತಿನ ಹಣವು ಸಪ್ಟೆಂಬರ್ ಮುಗಿಯುವುದರ ಒಳಗಾಗಿ ಬಂದು ತಲುಪುತ್ತದೆ ಅಂತ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಆರ್‌ಬಿಐ ಆದೇಶದ ಪ್ರಕಾರ ಸರಕಾರವು ಡಿ ಬಿ ಟಿ ಮುಲಖಾನೆ ಹಣವನ್ನ ವರ್ಗಾವಣೆ ಮಾಡುತ್ತಿದೆ ಆದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಹಣವನ್ನು ವರ್ಗಾವಣೆ ಮಾಡಲಿಕ್ಕೆ ಸ್ವಲ್ಪ ಸಮಯ ಬೇಕಾಗುವುದು ಎಂದು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಇನ್ನು ಯಾವ ಯಾವ ಜಿಲ್ಲೆಗಳಲ್ಲಿ ಹಣ ಬಿಡುಗಡೆಯಾಗಲಿದೆ ಅಂತ ನೋಡುವುದಾದರೆ ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೊಡಗು, ವಿಜಯನಗರ, ಬಳ್ಳಾರಿ, ರಾಯಚೂರು, ಬೀದರ್ ಕಲ್ಬುರ್ಗಿ, ಯಾದಗಿರಿ ಜಿಲ್ಲೆಗೆ ಸೆಪ್ಟೆಂಬರ್ 26ರಂದು ಎರಡನೇ ಕಂತಿನ ಹಣ ಸಿಗಲಿದೆ, ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಫಲಾನುಭವಿಗಳು ಖಾತೆಗೆ ಈ ಹಣ ತಲುಪಲಿದೆ ಎಂದು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *