ಪೇರಳೆ ಹಣ್ಣು ಕೆಲವರಿಗಂತೂ ತುಂಬಾ ಇಷ್ಟ ಈ ಹಣ್ಣಿನಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಅದೇ ರೀತಿ ಈ ಮರದ ಎಲೆಯಲ್ಲೂ ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರ ಇದೆ. ಅದೇನು ಅನ್ನೋದು ಇಲ್ಲಿದೆ ನೋಡಿ.

ಹಲ್ಲುನೋವು, ಗಂಟಲು ನೋವು ಮತ್ತು ಒಸಡು ನೋವಿದ್ದರೆ ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ನಂತರ ಸೋಸಿದ ನೀರಿನಿಂದ ಬೆಳಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಪೇರಳೆ ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್‌ ಅನ್ನು ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು.

ಪೇರಳೆ ಎಲೆಯನ್ನು ಜಜ್ಜಿ ಒಂದು ಲೀಟರ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಅದು ತಣ್ಣಗಾದ ನಂತರ ದಿನಕ್ಕೆ ಮೂರು ಬಾರಿ ಕುಡಿಯಬೇಕು. ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಅಜೀರ್ಣದಿಂದ ಉಂಟಾಗುವ ವಾಂತಿ, ತಲೆಸುತ್ತು, ಹೊಟ್ಟೆನೋವಿನಂತಹ ಸಮಸ್ಯೆಗಳು ನಿವಾರಣೆಯಾಗುವುದು ಹಾಗು ಈ ನೀರು ಅಸ್ತಮಾ ರೋಗವನ್ನು ಕಡಿಮೆಮಾಡುತ್ತದೆ.

ಪೇರಳೆ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದ ಪ್ಲೇಟ್ಲೆಟ್‌ಗಳನ್ನು ಹೆಚ್ಚಿಸುವ ಮೂಲಕ ಡೆಂಗ್ಯೂ ಜ್ವರವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಐದು ಕಪ್‌ ನೀರಿನಲ್ಲಿ ಒಂಭತ್ತು ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಬೇಕು. ಬಳಿಕ ಬೆಂಕಿಯನ್ನು ಕಡಿಮೆ ಮಾಡಿ ಐದು ಕಪ್‌ ನೀರು ಆವಿಯಾಗಿ ಮೂರು ಕಪ್‌ಗಳಾಗುವವರೆಗೆ ಒಲೆಯ ಮೇಲಿರಿಸಬೇಕು. ಈ ದ್ರಾವಣ ತಣ್ಣಗಾದ ಬಳಿಕ ಸೋಸಿ ಜ್ವರ ಇದ್ದವರಿಗೆ ಊಟದ ಬಳಿಕ ದಿನಕ್ಕೆ ಮೂರು ಬಾರಿ ನೀಡಬೇಕು.

ಪೇರಳೆ ಎಲೆಗಳಲ್ಲಿ ಆಂಟಿಸೆಪ್ಟಿಕ್‌ ಗುಣ ಇರುವುದರಿಂದ ಇದರಿಂದ ತಯಾರಿಸಿದ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚಿ ಕೆಲಕಾಲ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ಮೃದುವಾದ ಸೋಪು ದ್ರಾವಣ ಬಳಸಿ ಪ್ರತಿ ದಿನ ಎರಡರಿಂದ ಮೂರು ಬಾರಿ ಮುಖ ತೊಳೆದುಕೊಳ್ಳುವುದರಿಂದ ಮುಖದಲ್ಲಿರುವ ಮೊಡವೆ ಮತ್ತು ಕಪ್ಪುಚುಕ್ಕೆಗಳು ಕಡಿಮೆಯಾಗುತ್ತವೆ ಮತ್ತು ಬ್ಲ್ಯಾಕ್‌ ಹೆಡ್‌ಗಳು ಮಾಯವಾಗುತ್ತದೆ.

ಪೇರಳೆ ಎಲೆಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಂತ ಹಲವು ಪೋಷಕಾಂಶಗಳಿವೆ ಆದ್ದರಿಂದ ದೇಹದ ಮೇಲಾಗುವ ಯಾವುದೇ ರೀತಿಯ ಗಾಯಕ್ಕೆ ಪೇರಳೆ ಎಲೆಗಳನ್ನು ಜಜ್ಜಿ ಮಾಡಿದ ಪೇಸ್ಟ್‌ನ್ನು ಹಚ್ಚುವುದರಿಂದ ಗಾಯ ಬೇಗನೆ ಗುಣವಾಗುತ್ತದೆ.

Leave a Reply

Your email address will not be published. Required fields are marked *