ನಮ್ಮ ಆಯುರ್ವೇದ ಪದ್ಧತಿಗೆ ಸಾವಿರಾರು ವರ್ಷ ಗಳ ಇತಿಹಾಸವಿದೆ ದೇಶದಲ್ಲಿ ಅನೇಕ ಕಾಡು ಮೇಡು ಬೆಟ್ಟ ಗುಡ್ಡಗಳಲ್ಲಿ ಜೀವ ರಕ್ಷಣೆ ಮಾಡುವಂತಹ ಗಿಡಮೂಲಿಕೆಗಳು ದೊರೆಯುತ್ತ ಇವೆ. ಇಂತಹ ಅದ್ಭುತವಾದ ಔಷಧಿ ಪದ್ಧತಿಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ಮಕ್ಕಳಿಗೆ ಸ್ವರ್ಣ ಬಿಂದು ಅಥವಾ ಪ್ರಾಶನವನ್ನು ನೀಡುತ್ತಾರೆ ಮಕರ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಅನುಷ್ಠಾನದಲ್ಲಿ ಇರುವಂತಹ ಸ್ವರ್ಣ ಬಿಂದು ಪ್ರಶಣದ ಕುರಿತು ಇವತ್ತಿನ ಮಾಹಿತಿಯಲ್ಲಿ ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡುತ್ತೇವೆ ಹಾಗಾಗಿ ಸ್ಕಿಪ್ ಮಾಡದೆ ಕೊನೆವರೆಗೂ ಓದುವುದನ್ನು ಮರೆಯಬೇಡಿ. ವೀಕ್ಷಕರೆ ಸ್ವರ್ಣ ಬಿಂದು ಪ್ರಾಶನ ಅಥವಾ ಸ್ವರ್ಣ ಪ್ರಶಾಣವನ್ನು ಎಲ್ಲ ಆಯುರ್ವೇದ ಚಿಕಿತ್ಸೆಗಳಲ್ಲಿ ವಿಶೇಷವಾಗಿ ಪುಷ್ಪ ನಕ್ಷತ್ರ ದಿನದಂದು ನೀಡಲಾಗುತ್ತದೆ.

ಪುಷ್ಯ ನಕ್ಷತ್ರದ ದಿನದಂದು ನಡೆಸುವ ಸ್ವರ್ಣ ಪ್ರಾಶನವನ್ನು ಆರು ತಿಂಗಳ ಕಾಲ ಮಾಡಬೇಕು. ಈ ದಿನವು ಪ್ರತಿ 27 ದಿನಗಳ ನಂತರ ಬರುತ್ತದೆ. ಪುಷ್ಯ ನಕ್ಷತ್ರಪುಂಜವು ಪುಷ್ಟಿ ಮತ್ತು ಪೋಷಣೆಯ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇನ್ನು ಸ್ವರ್ಣ ಪ್ರಶಾಣಕ್ಕೆ ಸರಿಯಾದ ವಸ್ತು ಯಾವುದು ಎಂದರೆ ನೌಜಾತ ಶಿಶುವಿನಿಂದ ಹಿಡಿದು 16 ವರ್ಷದ ಒಳಗೆ ಇರುವಂತಹ ಮಕ್ಕಳಿಗೆ ನೀಡಬಹುದು. ಐದು ವರ್ಷದ ಮಕ್ಕಳಿಗೆ ಈ ಶ್ವರನ ಪ್ರಾಶನವು ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ. ಮಕ್ಕಳಿಗೆ ಪ್ರತಿ ತಿಂಗಳು ಪುಷ್ಪ ನಕ್ಷತ್ರದ ದಿನದಂದು ಆರು ತಿಂಗಳ ಕಾಲ ನಿರಂತರವಾಗಿ ನೀಡುವುದರಿಂದ ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದು. ಇನ್ನು ಈ ಸ್ವರ್ಣ ಬಿಂದುವನ್ನು ಯಾವ ರೀತಿಯ ಪದಾರ್ಥಗಳನ್ನು ಹಾಕಿ ತಯಾರಿ ಮಾಡಬಹುದು ಅಂತ ನೋಡುವುದಾದರೆ ಇದರಲ್ಲಿ ಚಿನ್ನ ವಜ್ರ ಅಶ್ವಗಂಧ ಜೇನುತುಪ್ಪ ಮತ್ತು ಶುದ್ಧವಾದ ಹಸುವಿನ ತುಪ್ಪ ಮತ್ತು ಮುಂತಾದವುಗಳನ್ನು ಹಾಕಿ ತಯಾರಿ ಮಾಡಿರುತ್ತಾರೆ. ಚಿನ್ನ ಅಂದ ಕೂಡಲೇ ಗಾಬರಿಯಾಗಬೇಡಿ ನಮ್ಮ ಭೂಮಿಯಲ್ಲಿ ದೊರಕುವಂಥ ಚಿನ್ನದಲ್ಲಿ ಮನುಷ್ಯನ ಆರೋಗ್ಯವನ್ನು ಕಾಪಾಡುವ ಹಾಗೂ ದೇಹವನ್ನು ಸಮರ್ಪಕವಾಗಿ ಇಡುವಂತಹ ಶಕ್ತಿ ಇದೆ.

ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಮಗುವಿನ ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಮೆದುಳಿನ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಮಗುವಿನ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಚಯಾಪಚಯ, ಜೀರ್ಣಕ್ರಿಯೆ ಮತ್ತು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ, ವೈರಸ್‌ಗಳಂತಹ ರೋಗ-ಉಂಟುಮಾಡುವ ವಿರುದ್ಧ ಹೋರಾಡುವ ಮೂಲಕ ಅವರನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ. ಸುವರ್ಣ ಪ್ರಾಶನವು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ವಿಧಾನವಾಗಿದೆ.

Leave a Reply

Your email address will not be published. Required fields are marked *