ಪುರಾತನ ಕಾಲದಿಂದಲೂ ಕರಿಮೆಣಸನ್ನು ಸಾಂಬಾರು ಪದಾರ್ಥವಾಗಿ ಉಪಯೋಗ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಔಷಧವಾಗಿಯೂ ಬಳಸುವ ಕ್ರಮ ಹಿಂದಿನಿಂದಲೂ ಬಂದಿದೆ. ಭಾರತದಲ್ಲಿ ಆಯುರ್ವೇದ ಸಿದ್ಧ ಮತ್ತು ಯುನಾನಿ ವೈದ್ಯಕೀಯ ಪದ್ಧತಿಯಲ್ಲಿ ಕರಿಮೆಣಸನ್ನು ಔಷಧಿಯಾಗಿ ಉಪಯೋಗಿಸುವುದು ಕಂಡುಬರುತ್ತದೆ. ಇನ್ನು ಐದು ನೇ ಶತಮಾನದ ಸಿರಿಯಾ ಬುಕ್ಕ ಆಫ್ ಎಂಬ ಪುಸ್ತಕವೂ ಕರಿಮೆಣಸನ್ನು ಮಲಬದ್ಧತೆ ಅತಿಸಾರ ಕಿವಿ ನೋವನ್ನು ಗಂಟಲು ಬೇನೆ ಅರ್ಜಿರ್ಣ ಕೀಟ ವಿಷಬಾಧೆ ನಿದ್ರಾಹೀನತೆ ಕೀಲು ನೋವು ಶಾಶ್ವಕೋಶದ ಕಾಯಿಲೆ ಚರ್ಮರೋಗ ಹುಳುಕು ಹಲ್ಲು ಮತ್ತು ಹಲ್ಲುನೋವು ಸಮಸ್ಯೆ ಸೇರಿದಂತೆ ಅನೇಕ ರೀತಿಯ ಕಾಯಿಲೆಗಳಿಗೆ ಔಷಧಿಯಂತೆ ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ. ಇನ್ನು ಕರಿಮೆಣಸಿನಲ್ಲಿದೆ ಪೊಟಾಶಿಯಂ ವಿಟಮಿನ್ಸ್ ಎ ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಕೆ ಕ್ಯಾಲ್ಸಿಯಂ ಹಾಗೂ ಇನ್ನಿತರ ಖನಿಜಗಳನ್ನು ಒಳಗೊಂಡಿದ್ದು ಕರಿಮೆಣಸು ಅತ್ಯಂತ ಉತ್ತಮ ಫ್ಯಾಟ್ ಬಲವೆಂದು ಪ್ರಸಿದ್ಧ ಪಡೆದಿದೆ. ನೀವು ತೂಕ ಇಳಿಸಲು ಪ್ರಯತ್ನ ಪಡುತ್ತಿದ್ದಾರೆ ನಿಮ್ಮ ಡಯಟ್ ಲಿಸ್ಟ್ ನಲ್ಲಿ ಇದನ್ನು ಕೂಡ ನೀವು ಆಡ್ ಮಾಡಿಕೊಳ್ಳಬಹುದು. ಹೌದು ಇದರಲ್ಲಿ ಪ್ರಬಲವಾದ ನ್ಯೂಟ್ರಿಷನ್ ಎಂಬ ಔಷಧಿ ಇರುವುದರಿಂದ ಇವತ್ತು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ.

ಜೊತೆಗೆ ಇದು ದೇಹದ ಕಲ್ಮಶವನ್ನು ಮತ್ತು ಹೆಚ್ಚು ಮೂತ್ರ ವಿಸರ್ಜನೆ ಬೆವರು ಇವುಗಳನ್ನು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗಲು ಸಹಕರಿಸುತ್ತದೆ. ಆಹಾರ ಪದಾರ್ಥಗಳ ಮೇಲೆ ಕರಿಮೆಣಸು ಪುಡಿ ಅನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಶೀತ ಮತ್ತು ಕೆಮ್ಮು ಇದ್ದರೆ ಕರಿಮೆಣಸು ಬಹಳ ಉತ್ತಮ. ನಿಮಗೆ ಶೀತ ಮತ್ತು ಕೆಮ್ಮು ಇದ್ದರೆ ಟೀ ಮಾಡುವಾಗ ಕರಿ ಮೆಣಸು ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಿರಿ. ಇದರಿಂದ ನಿಮ್ಮ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ಇನ್ನು ಯಾರಿಗೆ ಜೀರ್ಣಶಕ್ತಿ ಸಮಸ್ಯೆ ಇರುತ್ತದೆ ಅಂತಹವರು ನಿಯಮಿತವಾಗಿ ಕರಿಮೆಣಸನ್ನು ತಿನ್ನುವುದರಿಂದ ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ. ಮತ್ತು ಹಸಿವಾಗದೆ ಇರುವವರಿಗೂ ಕೂಡ ಹಸಿವು ಆಗುತ್ತದೆ.

ಮತ್ತು ಈ ಕರಿಮೆಣಸನ್ನು ನಿಯಮಿತವಾಗಿ ಅಡುಗೆಯಲ್ಲಿ ಉಪಯೋಗ ಮಾಡುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಯಾವುದೇ ಕಾಯಿಲೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಇನ್ನು ಅಜೀರ್ಣವಾದಾಗ ಮಜ್ಜಿಗೆಯೊಂದಿಗೆ ಕಾಳುಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ. ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು. ಔಷಧಿಗಳಲ್ಲಿ ಉಪಯೋಗ ಮಾಡುವ ಮೊದಲು ಇದನ್ನು ಶುದ್ಧಿ ಮಾಡಿಕೊಳ್ಳುವುದು ಒಳ್ಳೆಯದು. ಕಾಳು ಮೆಣಸನ್ನು ಹುಳಿ ಮಜ್ಜಿಗೆಯಲ್ಲಿ ಮೂರು ದಿನ ನೆನಸಿ ಇಟ್ಟು ಅನಂತರ ತೆಗೆದು ಉಪಯೋಗಿಸಿದರೆ ಉತ್ತಮ ಗುಣ ದೊರಕುತ್ತದೆ.

Leave a Reply

Your email address will not be published. Required fields are marked *