ನಮಸ್ತೆ ಪ್ರಿಯ ಓದುಗರೇ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ಕೊರತೆ ಇದ್ದೆ ಇರುತ್ತದೆ, ಅದ್ರಲ್ಲಿ ಆರ್ಥಿಕ ಸಮಸ್ಯೆ ಉಂಟಾದರೆ ಮಾನಸಿಕ ನೆಮ್ಮದಿ ಹಾಳಾಗಿ ಹೋಗಿಬಿಡುತ್ತದೆ. ಹಾಗಾಗಿ ಎಲ್ಲರೂ ಬಯಸುವುದು ಶಾಂತಿಯನ್ನು. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಹಾಗೂ ತನ್ನ ಬಳಿ ಬಂದ ಭಕ್ತರ ಮುಖದಲ್ಲಿ ನಗು ತರಿಸುವ ಮಂದಹಾಸ ಮೂಡಲು ಪ್ರೇರಣೆ ಆಗುವ ಮಹಾಲಕ್ಷ್ಮಿ ಅಮ್ಮನವರ ಪುರಾತನವಾದ ದೇವಾಲಯ ದರ್ಶನ ಮಾಡಿ ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಮಹಾಲಕ್ಷ್ಮಿ ಅಮ್ಮನವರ ಈ ದೇವಸ್ಥಾನವು ಸುಮಾರು 900 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿದೆ. ಕ್ರಿಸ್ತ ಶಕ 1600 ಹೇವಿಳಂಬಿ ನಾಮ ಸಂವ್ಸರದ ಚೈತ್ರ ಶುದ್ಧ ಬಿದಿಗೆಯಂದು ವಿಷ್ಣುವರ್ಧನ ನ ಪ್ರತ್ನಿಯಾದ ಶಾಂತಲಾ ದೇವಿಯ ಕನಸಿನಲ್ಲಿ ಅಮ್ಮನವರು ಕಾಣಿಸಿಕೊಂಡು ನನ್ನನ್ನು ಭಕ್ತಿಯಿಂದ ಪೂಜಿಸಿ ನಿಮಗೆ ಎಲ್ಲವೂ ಶುಭ ಆಗುತ್ತೆ ಎಂದು ಹೇಳಿದರ ಫಲವಾಗಿ ಈ ಸ್ಥಳದಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ ನು ದೇವಾಗುಲವನ್ನು ನಿರ್ಮಿಸಿದನು ಎಂದು ಇಲ್ಲಿನ ಐತಿಹ್ಯದ ಪ್ರಕಾರ ಹೇಳಲಾಗಿದೆ. ರಾಜ ವಿಷ್ಣುವರ್ಧನನು ಯುದ್ಧಕ್ಕೆ ಹೊರಡುವ ಮುನ್ನ ಈ ದೇವಿಯ ಅನುಗ್ರಹ ಪಡೆದು ಯುದ್ಧಕ್ಕೆ ತೆರಳುತ್ತಿದ್ದ ಎನ್ನುವ ಮಾತುಗಳು ಇವೆ. ಈ ತಾಯಿಯಿಂದಲೆ ಹೊಯ್ಸಳರು ಯುದ್ಧದಲ್ಲಿ ವಿಜಯವನ್ನು ಸಾಧಿಸುತ್ತಾ ಇದ್ರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ದೇಗುಲದ ಗರ್ಬಗುಡಿ ಒಳಗೇ 3.5 ಅಡಿ ಎತ್ತರದ ಕಪ್ಪು ವರ್ಣದ ಕಂಚಿನ ನಾದ ಬೀರುವ ಪುಂಚಿಕೆ ಇಂದ ಕೆತ್ತಿರುವ ದೇವಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ತಾಯಿಯು ಕೈಯಲ್ಲಿ ಶಂಖ ಚಕ್ರ ಗದೆ ಹಾಗೂ ಅಮೃತ ಕಲಶವನ್ನು ಹಿಡಿದು ಗಜಪೀಠದ ಮೇಲೆ ನಿಂತ ಭಂಗಿಯಲ್ಲಿ ದರ್ಶನವನ್ನು ನೀಡ್ತಾ ಇದ್ದಾಳೆ. ಹಣಕಾಸಿನ ಸಮಸ್ಯೆ, ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ, ಸಂತಾನ ಸಮಸ್ಯೆ, ಕೌಟುಂಬಿಕ ಸಮಸ್ಯೆ ಹೀಗೆ ಏನೇ ಸಂಸ್ಥೆಗಳು ಇದ್ರೂ ಈ ಸನ್ನಿಧಿಗೆ ಬಂದು ದೇವಿಗೆ ಪ್ರಿಯವಾದ ಜೇನುತುಪ್ಪ ಹಾಲನ್ನು ಸಮರ್ಪಿಸು ತ್ತೇವೆ ಎಂದು ಹರಕೆ ಹೊತ್ತರೆ ಎಲ್ಲ ಸಮಸ್ಯೆಗಳು ತಾಯಿಯ ದಿವ್ಯ ತೇಜಸ್ಸಿನಿಂದ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇಲ್ಲಿಗೆ ಬರುವ ಭಕ್ತಾದಿಗಳು ಅಮ್ಮನವರಿಗೆ ಸೀರೆ ಸಮರ್ಪಣೆ, ಹಣ್ಣು ಹೋಳಿಗೆ ಸಮರ್ಪಣೆ ಹರಕೆ ಹೋತ್ತುಕೊಳ್ಳಬಹುದು. ಈ ತಾಯಿಯನ್ನು ಅರಿವೇ ಲಕ್ಕಮ್ಮ, ಲಕ್ಕಮ್ಮ, ಲಕ್ಷ್ಮಮ್ಮ, ಸೌಭಾಗ್ಯ ಲಕ್ಷ್ಮೀ ಎಂಬೆಲ್ಲಾ ಹೆಸರಿನಿಂದ ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಬಹಳ ಹಿಂದೆ ಮೃಗು ಮಹರ್ಷಿಗಳು ಶ್ರೀಮನ್ ನಾರಾಯಣನ ವಕ್ಷ ಸ್ಥಳಕ್ಕೆ ಒಡೆದಾಗ ಕೋಪಗೊಂಡ ಹರಿಯು ವಕ್ಷಸ್ಥಳ ನಿವಾಸಿ ಆದ ಲಕ್ಷ್ಮೀ ದೇವಿಯು ವೈಕುಂಠವನ್ನು ತೊರೆದು ಈ ಕ್ಷೇತ್ರದಲ್ಲಿ ತನ್ನ ಪಾದವನ್ನು ಊರಿದಳು ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಸಾಕ್ಷಾತ್ ಮಹಾಲಕ್ಷ್ಮಿ ದೇವಿಯೇ ಇಲ್ಲಿ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಾಳೆ ಎಂದು ದೇಗುಲಕ್ಕೆ ಭೇಟಿ ನೀಡುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಇಲ್ಲಿಗೆ ಬಂದು ದೇವಿಯನ್ನು ಆರಾಧಿಸಿ ಬದುಕಿನಲ್ಲಿ ಯಶಸ್ಸನ್ನು ಕಂಡ ಭಕ್ತರ ಸಂಖ್ಯೆಗೆ ಲೆಕ್ಕವೇ ಇಲ್ಲ. ಹೊಯ್ಸಳ ಶೈಲಿಯ ಅದ್ಭುತ ಕಲಾ ಶೈಲಿಯಿಂದ ಕೂಡಿದ ಈ ದೇವಾಲಯಕ್ಕೆ ಹೋದ್ರೆ ಚಿತ್ತ ಕ್ಲೇಶಗಳೂ ಎಲ್ಲವೂ ತಾಯಿಯ ಪಾದರವಿಂದಾದಲ್ಲಿ ಕರಗಿ ಹೋಗುವುದು ಸತ್ಯ. ಜಗನ್ಮಾತೆ ನೆಲೆ ನಿಂತಿರುವ ಈ ದೇಗುಲದಲ್ಲಿ ನವರಾತ್ರಿ ಸಂದರ್ಭದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಮಂಗಳವಾರ ಶುಕ್ರವಾರ ದಿನದಂದು ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಮಾರ್ಗಶಿರ ಮಾಸದ ಪೌರ್ಣಮಿ ಅಂದು ಕಾರ್ತಿಕ ದೀಪೋತ್ಸವ, ಯುಗಾದಿ, ದೀಪಾವಳಿ ಸೇರಿದಂತೆ ಇನ್ನೂ ಹತ್ತು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನೂ ಈ ಕ್ಷೇತ್ರದಲ್ಲಿ ವಿಧಿವತ್ತಾಗಿ ಆಚರಿಸಲಾಗುತ್ತದೆ. ಈ ಪುಣ್ಯ ಕ್ಷೇತ್ರವೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೇರೆಸಂತೆ ಎಂಬ ಊರಿನಲ್ಲಿ. ಈ ಆಲಯವು ಬೆಂಗಳೂರಿನಿಂದ 219 ಕಿಮೀ, ಹಾಸನದಿಂದ 190 ಕಿಮೀ, ಚಿಕ್ಕಮಗಳೂರಿನಿಂದ 56 ಕಿಮೀ, ಅರಸೀಕೆರೆ ಇಂದ 24 ಕಿಮೀ, ಕಡೂರಿ ನಿಂದಾ 18 ಕಿಮೀ, ಬಾನವಾರ ದಿಂದ 9 ಕಿಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಅಂಚೇಚೂಮನ ಹಳ್ಳಿ ಗೇಟ್ ಇಂದ 1 ಕಿಮೀ ಸಾಗಿದರೆ ದೇಗುಲಕ್ಕೆ ಸುಲಭ ವಾಗಿ ತಲುಪಬಹುದು. ಸಾಧ್ಯವಾದರೆ ನೀವು ಒಮ್ಮೆ ದರ್ಶನ ಮಾಡಿ ಕೃತಾರ್ಥ ರಾಗಿ. ಶುಭದಿನ.

Leave a Reply

Your email address will not be published. Required fields are marked *