ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯ ಶುರು ಮಾಡುವುದಕ್ಕೆ ಮುನ್ನ ಗಣಪತಿ ಪೂಜೆ ಮಾಡುವ ಸಂಪ್ರದಾಯ ಇದೆ. ಏಕಂದಂಥ, ವಕ್ರತುಂಡ, ಲಂಬೋದರ, ವಿಗ್ನೇಶ ಎಂಬೆಲ್ಲಾ ಹೆಸರಿನಿಂದ ಕರೆಯುವ ಗಜಾನನ ಈ ಕ್ಷೇತ್ರದಲ್ಲಿ ನೆಲೆ ನಿಂತು ತನ್ನ ಬಳಿ ಪ್ರಶ್ನೆಗಳನ್ನು ಹೊತ್ತು ತರುವವರಿಗೆ ಉತ್ತರವನ್ನು ನೀಡ್ತಾ ಇದ್ದಾನೆ. ಅಲ್ಲದೆ ಈ ಸ್ಥಳದಲ್ಲಿ ಪಾರ್ವತಿ ಪರಮೇಶ್ವರ ಕೂಡ ಅರ್ಧ ನಾರಿಶ್ವರ ರೂಪದಲ್ಲಿ ನೆಲೆ ನಿಂತು ಭಕ್ತರ ಸಂಕಷ್ಟಗಳನ್ನು ದೂರ ಮಾಡ್ತಾ ಇದ್ದಾನೆ. ಬನ್ನಿ ಹಾಗಾದರೆ ತಡ ಮಾಡದೆ ಗಣಪತಿಯು ಪಾರ್ವತಿ ಪರಮೇಶ್ವರ ರ ಜೊತೆ ನೆಲೆ ನಿಂತ ಸನ್ನಿಧಾನ ಯಾವುದು ಅಲ್ಲಿ ನಡೆಯುವ ಗಣೇಶನ ಪವಾಡಗಳು ಏನೇನು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಗರ್ಗೇಶ್ವರಿ ಎಂಬ ಹಳ್ಳಿಯಲ್ಲಿ ಪಾರ್ವತಿ ಪರಮೇಶ್ವರ ಅರ್ಧ ನಾರೀಶ್ವರ ರೂಪದಲ್ಲಿ ನೆಲೆ ನಿಂತು ಭಕ್ತರನ್ನು ಹಾರಸುತ್ತಿದ್ದು, ಇಲ್ಲಿನ ದೇವನನ್ನು ಪಂಚವಕ್ರಂ ಉದಾರಂಗಮ್ ಶುದ್ಧ ಸ್ಪಟಿಕ ಸನ್ನಿಭಾಂ, ವ್ಯಾಘ್ರ ಚರ್ಮಮ್ ಬರಧರಂ, ನಾಗೋ ಯಜ್ಞ ಪವೀತನಮ್, ಗಿರಿಜಸಕ್ತ ವಾಮಾಂಗಮ್ ಚಂದ್ರ ಸೋರ್ಯಗ್ನಿ ಲೋಚನಂ, ದ್ಯಾರ್ಯ ಸದಾಶಿವಂ ಚಿತ್ರಂ ಗರ್ಗೊತ್ರ ಮುನಿಸಕ್ಷಮಾ. ಎಂದು ಬಣ್ಣಿಸಲಾಗಿದೆ.

ಬಹಳ ಹಿಂದೆ ಗರ್ಗ ಎಂಬ ಋಷಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿದರಂತೆ ಅವರ ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿ ದೇವರು ಪ್ರತ್ಯಕ್ಷ ಆಗಿ ಈ ಕ್ಷೇತ್ರದಲ್ಲಿ ಲಿಂಗ ರೂಪದಲ್ಲಿ ನೆಲೆ ನಿಂತರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ದೇಗುಲವನ್ನು ಮಧ್ಯ ಕಾಶಿ ಎಂದು ಕರೆಯಲಾಗುತ್ತದೆ. ಪ್ರಾಂಗಣ, ಗೋಪುರ, ಪ್ರದಕ್ಷಿಣಾ ಪಥ ಹೊಂದಿರುವ ಇಲ್ಲಿನ ಗರ್ಭ ಗುಡಿಯಲ್ಲಿ ಸ್ವಾಮಿಯ ಬೃಹತ್ ಲಿಂಗವಿದ್ದು, ಈ ದೇವರನ್ನು ಪ್ರಸನ್ನ ಪಾರ್ವತಿ ಸಮೇತ ಗರ್ಗೇಶ್ವರ ಎಂದು ಕರೆಯಲಾಗುತ್ತದೆ. ಈ ದೇಗುಲದಲ್ಲಿ ಪಾರ್ವತಿ ಪರಮೇಶ್ವರ ರನ್ನು ಒಂದೇ ಲಿಂಗದಲ್ಲಿ ನಾವು ಕಣ್ಣು ತುಂಬಿಕೊಳ್ಳಬಹುದು. ಇಲ್ಲಿರುವ ಶಿವನ ಲಿಂಗವು ಸ್ಪಟಿಕ ಲಿಂಗವಾಗಿದ್ದು, ಈ ದೇವನು ಐದು ಮುಖವನ್ನು ಹೊಂದಿದ್ದಾನೆ. ಹೀಗಾಗಿ ಅತ್ಯಪರೂಪದ ಶಿವ ದೇವಾಲಯ ಆಗಿದೆ. ಇನ್ನೂ ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಏನು ಅಂದ್ರೆ ದೇಗುಲದ ಒಳ ಪ್ರಾಂಗಣದಲ್ಲಿ ಶಂಕರಾಚಾರ್ಯ ರ ಮಂತ್ರಿಸಿ ಇಟ್ಟಿರುವ ಯಕ್ಷ ಪ್ರಶ್ನೆ ಗಣೇಶನ ವಿಗ್ರಹ. ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಮನಸಲ್ಲಿ ಇರುವ ಕೋರಿಕೆಗಳು ನೆರವೆರುತ್ತೋ ಇಲ್ಲವೋ ಎಂದು ಗಣೇಶನ ಬಳಿ ಉತ್ತರವನ್ನು ಪಡೆಯಬಹುದು. ಯಾವುದಾದರೂ ಸಂಕಲ್ಪ ಮಾಡಿಕೊಂಡು ಇಲ್ಲಿನ ಗಣಪತಿ ವಿಗ್ರಹವನ್ನಾ ಎತ್ತಿದರೆ ಗಣಪತಿ ವಿಗ್ರಹ ವೂ ಸಲೀಸಾಗಿ ಕೈಗೆ ಬಂದರೆ ಕೆಲಸ ಆಗುತ್ತೆ ಎಂದು ಗಣಪತಿ ವಿಗ್ರಹ ಎತ್ತಲು ಆಗದೆ ಹೋದರೆ ಕೆಲ್ಸ ಆಗೋದಿಲ್ಲ ಎಂದು ಹೇಳಲಾಗುತ್ತದೆ.

ಇನ್ನೂ ಕೆಲವರು ಗಣಪತಿ ಬಳಿ ನಮ್ಮ ಕೆಲಸ ಆದ್ರೆ ನಿನಗೆ ಸೇವೆ ಮಾಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಾವುದೇ ಜಾತಿ ಮತ ಭೇದವಿಲ್ಲದೆ ಭಕ್ತರು ಬಂದು ಈ ಗಣೇಶನ ಬಳಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಶನಿವಾರ ಮತ್ತು ಭಾನುವಾರ ದಿನಗಳು ಮಾತ್ರ ಭಕ್ತರಿಗೆ ಗಣಪತಿ ಬಳಿ ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ಇವೆರಡೂ ದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಸಂಜೆ 4-7 ಗಂಟೆ ವರೆಗೆ ಗಣೇಶನ ಬಳಿ ಭಕ್ತರು ಪ್ರಶ್ನೆ ಕೇಳಬಹುದು. ಉಳಿದ ದಿನಗಳಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಿತ್ಯವೂ ಇಲ್ಲಿನ ದೇವರಿಗೆ ಅಭಿಷೇಕ ಸಹಿತ ಪೂಜೆಯನ್ನು ಮಾಡಲಾಗುತ್ತದೆ. ಸಂಕಷ್ಟಿ ಮಹಾ ಶಿವರಾತ್ರಿ, ಕಾರ್ತಿಕ ಮಾಸದ ಸಮಯದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಅತ್ಯಂತ ಶಕ್ತಿಶಾಲಿ ಆದ ಈ ಪರಮಾತ್ಮನನ್ನು ನಿತ್ಯ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ವರೆಗೆ, ಸಂಜೆ 4-7 ಗಂಟೆವರೆಗೂ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೇಗುಲದ ದೂರವಾಣಿ ಸಂಖ್ಯೆ 9449130696 ಗೆ ಕರೆಮಾಡಿ. ಪುರಾಣ ಪ್ರಸಿದ್ಧವಾದ ಈ ಆಲಯವು ಮಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಗರ್ಗೇಶ್ವರಿ ಎಂಬ ಊರಿನಲ್ಲಿ ಇದೆ. ಈ ಕ್ಷೇತ್ರವು ಬೆಂಗಳೂರಿನಿಂದ 143 ಕಿಮೀ, ಮೈಸೂರಿನಿಂದ 31 ಕಿಮೀ, ಟಿ ನರಸೀಪುರ ಧಿಂದ ಕೇವಲ 4.5 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಜೀವಮಾನದಲ್ಲಿ ನೀವೂ ಒಮ್ಮೆ ಈ ಶಕ್ತಿಪೀಠವನ್ನು ದರ್ಶನ ಮಾಡಿ ಪುನೀತಾರಾಗಿ. ಶುಭದಿನ.

Leave a Reply

Your email address will not be published. Required fields are marked *