ನಮಸ್ತೆ ಪ್ರಿಯ ಓದುಗರೇ, ಅಪಾರ ಪ್ರಮಾಣದ ಪ್ರಾಕೃತಿಕ ಸೌಂದರ್ಯ ವನ್ನಾ ತನ್ನ ಒಡಲಲ್ಲಿ ಹುದುಗಿಸಿ ಇಟ್ಟುಕೊಂಡಿರೂವ ಕರ್ನಾಟಕ ರಾಜ್ಯ ಶಿಲ್ಪ ಕಲಾಕೃತಿಗಳ ತವರೂರು ಕೂಡ ಹೌದು. ಕರ್ನಾಟಕ ರಾಜ್ಯದಲ್ಲಿ ನಿರ್ಮಿಸಿದ ಅದ್ಭುತ ಕಲಾ ಕೆತ್ತನೆಗಳನ್ನು ಉಳ್ಳ ದೇಗುಲಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಬನ್ನಿ ಇವತ್ತಿನ ಲೇಖನದಲ್ಲಿ ಭಾರತದ ನಿವೃತ್ತ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಅವರ ಊರಿನಲ್ಲಿ ಇರುವ ಸುಂದರವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲವನ್ನು ಕಣ್ಣು ತುಂಬಿಕೊಂಡು ಬರೋಣ. ಅದ್ಭುತ ಕಲಾ ಕೆತ್ತನೆಗಳನ್ನು ಹೊಂದಿದ ಜಾವಗಲ್ ನ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವನ್ನು 13 ನೆಯ ಶತಮಾನದಲ್ಲಿ ಹೊಯ್ಸಳ ರಾಜರು ನಿರ್ಮಿಸಿದರು ಎಂಬ ಐತಿಹ್ಯ ಇದ್ದು, ಈ ದೇಗುಲವು ತ್ರಿಕೂಟಾಚಲ ಶಿಲ್ಪವನ್ನು ಹೊಂದಿದೆ. ಪ್ರದಕ್ಷಿಣಾ ಪಥ, ಗರ್ಭಗೃಹ, ಅಂತರಾಳ, ಮುಖ ಮಂಟಪ ಹೊಂದಿರುವ ಈ ಆಲಯದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಜೊತೆ ವೀರ ನಾರಾಯಣ ಹಾಗೂ ವೇಣು ಗೋಪಾಲ ಸ್ವಾಮಿಯನ್ನು ಪೂಜಿಸುತ್ತಾರೆ. ಇಲ್ಲಿಗೆ ಬಂದು ನಿಷ್ಕಲ್ಮಶ ಮನಸಿನಿಂದ ಬೆಡಿಕೊಂದರೆ ಆ ಸ್ವಾಮಿಯು ಕೋರಿಕೆಗಳನ್ನು ಮಾನ್ಯ ಮಾಡುತ್ತಾನೆ ಎಂದು ಹೇಳಲಾಗುತ್ತದೆ.

 

ಇನ್ನೂ ದೇಗುಲದ ಹೊರ ಭಿತ್ತಿಯಲ್ಲಿ ಆನೆ, ಮಕರ, ಹಂಸ, ದೊರೆ, ಲತಾ ಸುರುಳಿಗಳಿಂದ ಕೆತ್ತಿದ ಕಲಾತ್ಮಕ ಪೆಟ್ಟಿಗೆಗಳು ಇದ್ದು, ಭಿತ್ತಿಯಲ್ಲಿ ರಾಮಾಯಣ ಹಾಗೂ ಭಾಗವತ, ನರಸಿಂಹ ಅವತಾರದ ಕಥಾ ಪ್ರಸಂಗ ಗಳನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಇಲ್ಲಿನ ಮಹಿಷ ಮರ್ದಿನಿ, ಗಣಪತಿ, ಇಂದ್ರ, ಭುವನೇಶ್ವರಿ ದೇವಿಯ ವಿಗ್ರಹಗಳು ನೋಡುಗರ ಮೈ ಮನವನ್ನು ತಣಿಸುತ್ತದೆ. ಇಲ್ಲಿನ ದುಂಡು ತಿರುಗಣಿ ಇರುವ ಕಂಬಗಳು, ದ್ವಾರ ಬಂಧುಗಳು, ಪ್ರಧಾನ ಗರ್ಭ ಗೃಹದಲ್ಲಿ ಇರುವ ನಾಲ್ಕು ಹಂತದ ಶಿಖರಗಳು ಪಾಥಳಂಗಣ, ಸ್ತ್ರೀ ಪ್ರತಿಮೆಗಳು, ಕೊಳಲನ್ನು ಊದುತ್ತಿರುವ ವೇಣು ಗೋಪಾಲ ಸ್ವಾಮಿಯ ಕೆತ್ತನೆ, ಗೋಪುರದ ಮೇಲಿರುವ ಕಲಾಕೃತಿಗಳು ಈ ದೇಗುಲದ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿ ವರ್ಷ ವೈಶಾಖ ಮಾಸದಲ್ಲಿ ವೈಕಾನ ಸ ಆಗಮ ರೀತಿಯಲ್ಲಿ ಇಲ್ಲಿನ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಅಭಿಷೇಕ, ಕುಂಕುಮ ಅರ್ಪಣೆ, ನಿತ್ಯೋತ್ಸವ, ಶೇಷ ವಾಹನೋತ್ಸವ, ನರಸಿಂಹ ಜಯಂತಿ, ಶಂತೋತ್ಸವ, ಉಯ್ಯಲೊತ್ಸವ, ಪ್ರಕಾರೊತ್ಸವ, ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ವಿಧಿವತ್ತಾಗಿ ಆಚರಿಸಲಾಗುತ್ತದೆ.

 

ಆ ಸಮಯದಲ್ಲಿ ಸರ್ವಲಂಕೃಥ ಭೋಶೀತನಾದ ಸ್ವಾಮಿಯನ್ನು ನೋಡುವುದೇ ಒಂದು ದಿವ್ಯ ಅನುಭೂತಿ ಆಗಿದೆ. ಇಲ್ಲಿ ನಡೆಯುವ ಜಾತ್ರಾ ಮಹೋತ್ಸವ ಕ್ಕೆ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದ ಕೂಡ ಭಕ್ತರು ಆಗಮಿಸಿ ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ. ಇನ್ನೂ ಈ ಕ್ಷೇತ್ರದಲ್ಲಿ ಇರುವ ಭಗವಂತನಿಗೆ ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಈ ದೇಗುಲಕ್ಕೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಮಂಗಳಾರತಿ, ತುಳಸಿ ಅರ್ಚನೆ, ಅಲಂಕಾರ ಸೇವೆ, ಕರ್ಪೂರದ ಆರತಿ ಸೇವೆಗಳನ್ನು ಮಾಡಿಸಬಹುದು. ವಾಸ್ತುಶಿಲ್ಪ ಹಾಗೂ ಭಕ್ತಿಯ ಕೇಂದ್ರ ಆಗಿರುವ ಈ ಭವ್ಯ ಆಲಯವು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಎಂಬ ಊರಿನಲ್ಲಿ ಇದೆ. ಈ ಕ್ಷೇತ್ರವೂ ಬೆಂಗಳೂರಿನಿಂದ 222 ಕಿಮೀ, ಹಾಸನದಿಂದ 43 ಕಿಮೀ, ಅರಸೀಕೆರೆ ಇಂದ 33 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಈ ಸುಂದರವಾದ ದೇಗುಲವನ್ನು ನೀವು ಒಮ್ಮೆ ಕಣ್ಣು ತುಂಬಿಕೊಂಡು ಬನ್ನಿ. ಶುಭದಿನ.

Leave a Reply

Your email address will not be published. Required fields are marked *