ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನೀವೆಲ್ಲರೂ ಶ್ರೀ ಕೃಷ್ಣನಿಗೆ ನಿರ್ಮಿತವಾದ ಸಾಕಷ್ಟು ದೇಗುಲಗಳ ಬಗ್ಗೆ ಕೆಳಿರ್ಥಿರ. ಆದ್ರೆ ಯಾವತ್ತಾದರೂ ಮಾಧವನ ಸಹೋದರ ಆದ ಬಲರಾಮನಿಗೆ ನಿರ್ಮಿಸಿರುವ ದೇವಾಲಯದ ಬಗ್ಗೆ ಕೇಳಿದ್ದೀರಾ? ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಬಲರಾಮನ ಆ ದಿವ್ಯ ಸನ್ನಿಧಾನ ದ ಕುರಿತು ಮಾಹಿತಿಗಳನ್ನು ಪಡೆದುಕೊಂಡು ಬರೋಣ. ವಾಸುದೇವ, ವಿಠ್ಠಲ, ಪಾಂಡುರಂಗ, ಮುಕುಂದ, ಮುರಾರಿ, ಗೋಪಾಲ, ಮೇಘಾಷ್ಯಮ, ಗೋಕುಲ ನಂದನ, ಯಶೋಧಾ ಕಂದ ಹೀಗೆ ನಾನಾ ಹೆಸರುಗಳಿಂದ ಕರೆಯುವ ಶ್ರೀ ಕೃಷ್ಣ ಪರಮಾತ್ಮನು ಹೇಗೆ ಗುಡಿಯಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೋ ಹಾಗೆಯೇ ಮಲ್ಪೆಯ ಸಮುದ್ರ ತೀರದ ಬಳಿ ನಿಂತು ಈ ದೇವನು ಭಕ್ತರ ಸಂಕಷ್ಟಗಳನ್ನು ದೂರ ಮಾಡ್ತಾ ಇದ್ದಾನೆ. ವಾಡಭಂದೇಶ್ವರ ಆಗಿ ಇಲ್ಲಿ ಬಲರಾಮನನ್ನು ಪೂಜಿಸು ತ್ತಿದ್ದು , ಈ ಕ್ಷೇತ್ರದಲ್ಲಿ ಬಲರಾಮನ ಮೂರ್ತಿಯನ್ನು ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ.

 

ಸಮುದ್ರ ತೀರದಲ್ಲಿ ಇರುವ ಈ ದೇವನನ್ನು ಮನಸ್ಸಿನಿಂದ ಪ್ರಾರ್ಥಿಸಿದರೆ ಮನದ ಅಭಿಲಾಷೆಗಳು ಎಲ್ಲವೂ ಈಡೇರುತ್ತವೆ ಎಂದು ಹೇಳಲಾಗುತ್ತದೆ. ಸುಮಾರು 800 ವರ್ಷಗಳಷ್ಟು ಪುರಾತನವಾದ ಈ ದೇಗುಲವು ಗರ್ಭಗೃಹ, ಹಂಚಿನ ಛಾವಣಿ, ಕಲ್ಯಾಣಿಯನ್ನು ಹೊಂದಿದೆ. ಬಲರಾಮನ ಜೊತೆಗೆ ಸುಬ್ರಮಣ್ಯ ದೇವಸ್ಥಾನಗಳನ್ನು ಹೊಂದಿದೆ. ಇಲ್ಲಿನ ಬಲರಾಮನಿಗೆ ತೊಗರಿಬೇಳೆ ಪಾಯಸ ಹಾಗೂ ಪಂಚಾಮೃತ ಅಭಿಷೇಕ ಬಲು ಪ್ರಿಯವಾದ ಸೇವೆ ಆಗಿದೆ. ಈ ಎರಡೂ ಸೇವೆಗಳನ್ನು ಮಂಗಳವಾರದ ದಿನ ಹೆಚ್ಚಾಗಿ ನೆರವೇರಿಸಲಾಗುತ್ತದೆ. ಇನ್ನೂ ಮಹಾಲಯ ಅಮಾವಾಸ್ಯೆ ಅಂದು ನೂರಾರು ಮಂದು ತಮ್ಮ ಪಿತೃಗಳಿಗೆ ತರ್ಪಣ ಕೊಡಲು ಈ ದೇಗುಲದ ಸಮುದ್ರ ತೀರಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷವೂ ಈ ಕ್ಷೇತ್ರದಲ್ಲಿ ಬಲರಾಮ ದೇವರ ಜಾತ್ರಾ ಮಹೋತ್ಸವವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇನ್ನೂ ಆದಿಶೇಷನ ಅವತಾರವಾದ ಬಲರಾಮನು ಭೂಮಿಯಲ್ಲಿ ದಯಪಾಲಿಸಿದ ಶ್ರಾವಣ ಮಾಸದ ಪೌರ್ಣಮಿಯಂದು ಇಲ್ಲಿನ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಆ ದಿನ ಬಲರಾಮ ಜಯಂತಿಯನ್ನು ಕೂಡ ವಿಧಿವತ್ತಾಗಿ ಇಲ್ಲಿ ಆಚರಿಸಲಾಗುತ್ತದೆ.

 

ಅತ್ಯಂತ ಪ್ರಶಾಂತವಾಗಿರುವ ಈ ಕ್ಷೇತ್ರಕ್ಕೆ ಹೋದರೆ ಮನಸ್ಸಿನ ದುಗುಡ ದುಮ್ಮಾನ ದೂರವಾಗಿ ಚಿತ್ತ ಕ್ಲೇಷಗಳು ಭಗವಂತನ ಪಾದಾರವಿಂದದಲ್ಲಿ ಲೀನವಾಗಿ ಬಿಡುತ್ತೆ ಅಂತ ಅನಿಸುವುದು ನಿಜ. ಇಲ್ಲಿ ನೆಲೆಸಿರುವ ಬಲರಾಮನನ್ನು ನಿತ್ಯ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ವಿಶೇಷ ಸೇವೆ, ಅಲಂಕಾರ ಸೇವೆ, ಪಂಚಾಮೃತ ಅಭಿಷೇಕ, ಪಾಯಸ ಸಮರ್ಪಣಾ ಸೇವೆ, ಹಣ್ಣು ಕಾಯಿ ಸೇವೆಯನ್ನು ಮಾಡಿಸಬಹುದು. ವಡಭಂಡ ಬಲರಾಮ ನೆಲೆಸಿದ ಈ ಪುಣ್ಯ ಕ್ಷೇತ್ರವೂ ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನ ಸಮೀಪ ಇದ್ದು, ಈ ಆಲಯವು ಬೆಂಗಳೂರಿನಿಂದ 410 ಕಿಮೀ, ಮಂಗಳೂರಿನಿಂದ 61 ಕಿಮೀ, ಉಡುಪಿಯಿಂದ 7 ಕಿಮೀ ದೂರದಲ್ಲಿದೆ. ಉಡುಪಿ ಯು ಉತ್ತಮವಾದ ರಸ್ತೆ ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದೆ. ಶ್ರೀ ಕೃಷ್ಣ ಮಠದಿಂದ ಬಾಡಿಗೆ ಅಥವಾ ಬಸ್ ಮೂಲಕ ಈ ಕ್ಷೇತ್ರಕ್ಕೆ ಸುಲಭವಾಗಿ ತಲುಪಬಹುದು. ಸಾಧ್ಯವಾದರೆ ಉಡುಪಿಗೆ ಭೇಟಿ ನೀಡಿದಾಗ ನೀವು ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ಕೃತಾರ್ಥರಾಗಿ. ಶುಭದಿನ.

Leave a Reply

Your email address will not be published. Required fields are marked *