ನಮಸ್ತೆ ನಮ್ಮ ಆತ್ಮೀಯ ಓದುಗರೇ, ಬೇಕರಿ ತಿಂಡಿ ತಿನಿಸುಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಬೇಕರಿ ತಿಂಡಿ ತಿನಿಸುಗಳು ಯಾರಿಗಿಷ್ಟ ಇಲ್ಲ ಹೇಳಿ. ಕೆಲವೊಮ್ಮೆ ಅಲ್ಲಿಗೆ ಹೋದರೆ ಯಾವುದು ಖರೀದಿ ಮಾಡಬೇಕು ಯಾವುದು ಬೇಡ ಅಂತಾನೆ ಕನ್ಫ್ಯೂಸ್ ಆಗ್ತೀವಿ. ಅದ್ರಲ್ಲಿ ಕುಕ್ಕೀಸ್ ಅಂದರೆ ಎಲ್ಲರಿಗೂ ಪ್ರಿಯ ಅದರಲ್ಲಿ ಕೊಕೊನಟ್, ಬಾದಾಮ್, ಡ್ರೈ ಫ್ರೂಟ್ಸ್ ಕುಕ್ಕೀಸ್ ಹೀಗೆ ತರಾವರಿ ವಿಧಗಳು ತಿನ್ನಲು ಬಲು ಇಷ್ಟ. ಇವುಗಳಲ್ಲಿ ಬಟ್ಟರ್ ಕುಕ್ಕೀಸ್ ಅಂತಹ ರುಚಿಯಾದ ಕುಕ್ಕೀಸ್ ಅನ್ನು ಕೆಲವೊಂದು ಬೇಕರಿಗಳಲ್ಲಿ ಮೊಟ್ಟೆಯನ್ನು ಬಳಸಿ ಮಾಡುವುದುಂಟು. ಆದರೆ ನಮ್ಮಲ್ಲಿ ಕೆಲವೊಬ್ಬರು ಮೊಟ್ಟೆ ಹಾಕಿ ಮಾಡಿದ ಯಾವುದೇ ತಿನಿಸುಗಳನ್ನು ಮುಟ್ಟದೆ ಇರುವವರೂ ಇದ್ದಾರೆ. ಹೀಗಿರುವಾಗ ಇಂದಿನ ಲೇಖನದಲ್ಲಿ ಮೊಟ್ಟೆ ಹಾಕದೆ ಬಾಯಲ್ಲಿ ನೀರೂರಿಸುವ, ಬಾಯಲ್ಲಿಟ್ಟರೆ ಕರಗುವ ಎಗ್ ಲೆಸ್ ಬಟ್ಟರ್ ಕುಕ್ಕೀಸ್ ಮಾಡೋದರ ವಿಧಾನ ನೋಡೋಣ.

ಇದಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ನೋಡೋಣ – ಮೈದಾ ಹಿಟ್ಟು ಒಂದು ಕಪ್, 2/3 ಕಪ್ (85ಗ್ರಾಂ) ಅಷ್ಟು ಕ್ಯಾಸ್ಟರ್ ಶುಗರ್, 5 ಚಮಚದಷ್ಟು ಕಾರ್ನ್ ಫ್ಲೋರ್, 150ಗ್ರಾಂ ಅಷ್ಟು ಬೆಣ್ಣೆ, ಕಾಲು ಟೀ ಚಮಚ ಉಪ್ಪು, ಒಂದು ಚಮಚ ವೆನಿಲ್ಲಾ ಎಸೆನ್ಸ್. ಇವೆಲ್ಲಾ ಸಾಮಗ್ರಿಗಳು ಇದ್ದರೆ ಎಗ್ ಲೆಸ್ ಬಟ್ಟರ್ ಕುಕ್ಕೀಸ್ ರೆಡಿ ಆದಂತೆ. ಕುಕ್ಕೀಸ್ ತಯಾರಿಸುವ ಮುನ್ನ ಎಲೆಕ್ಟ್ರಿಕ್ ಓವೆನ್ ಅನ್ನು 180 ಡಿಗ್ರೀ ಗೆ ಇಟ್ಟು 20 ನಿಮಿಷ ಪ್ರೀ ಹೀಟ್ ಗೆ ಇಡಿ. ನಂತರ ಒಂದು ಓವೆನ್ ಒಳಗಿಡುವ ಟ್ರೆ ಮೇಲೆ ಅದೇ ಗಾತ್ರದ ಬಟ್ಟರ್ ಪೇಪರ್ ಅನ್ನು ಇಟ್ಟು ರೆಡಿ ಮಾಡಿಕೊಳ್ಳಿ. ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸ್ ಮಾಡಲು ಒಂದು ಮಿಕ್ಸಿಂಗ್ ಪಾತ್ರೆ ತೆಗೆದುಕೊಂಡು ಅದರೊಳಗೆ ಮೇಲೆ ಹೇಳಿದ ಪ್ರಮಾಣದ ಬೆಣ್ಣೆ, ಕಾಸ್ಟರ್ ಶುಗರ್ 85ಗ್ರಾಂ ನಷ್ಟು, ಇವೇರೆಡನ್ನೋ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಮಿಕ್ಸ್ ಮಾಡಿದ ನಂತರ ಇದನ್ನು ಚೆನ್ನಾಗಿ ಬೀಟ್ ಮಾಡಬೇಕು. ಇದು ತುಂಬಾನೇ ಮುಖ್ಯವಾದ ಅಂಶ.

ಬೀಟ್ ಮಾಡುವುದರಿಂದ ಚೆನ್ನಾಗಿ ಫ್ಲಫಿ ಆಗಿ ಬಣ್ಣ ಕೂಡ ಗಾಡವಿದ್ದದ್ದು ಲೈಟ್ ಆಗುತ್ತದೆ. ಇದಕ್ಕೆ ನಾವು ಒಂದು ಕಪ್ ಮೈದಾ ಹಿಟ್ಟು, 5 ಚಮಚದಷ್ಟು ಕಾರ್ನ್ ಫ್ಲೋರ್, ಕಾಲು ಚಮಚದಷ್ಟು ಉಪ್ಪು ಹಾಕಿ ಚೆನ್ನಾಗಿ ಹಿಟ್ಟಿನ ಹದಕ್ಕೆ ಕಲಸಿ. ಈ ಕಲಸಿದ ಹಿಟ್ಟನ್ನು ಒಂದು ಕವರ್ ನಲ್ಲಿ ಮುಚ್ಚಿ ಒಂದು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಟ್ಟು ನಂತರ ಹೊರಗೆ ತೆಗೆದು ಕೈಯಲ್ಲೇ ನಾದಿ, ಹೀಗೆ ಮಾಡುವುದರಿಂದ ಗಟ್ಟಿಯಾದ ಹಿಟ್ಟು ಮೃದುವಾಗುತ್ತದೆ. ತಯಾರಾದ ಹಿಟ್ಟನ್ನು 8-9 ಎಂಎಂ ಅಷ್ಟು ಲಟ್ಟಿಸಿ, ಕುಕ್ಕೀಸ್ ಕಟ್ಟರ್ ಇಂದ ದುಂಡಾಗಿ ಕುಕ್ಕೀಸ್ ರೂಪದಲ್ಲಿ ತಯಾರಿಸಿ. ಆಗಲೇ ರೆಡಿ ಮಾಡಿದ ಟ್ರೆ ಯಲ್ಲಿ ಇವುಗಳನ್ನು ಜೋಡಿಸಿ ಓವೆನ್ ಅಲ್ಲಿ 12 ನಿಮಿಷಗಳ ಕಾಲ ಬೇಕ್ ಮಾಡಿ ಹೊರಗೆ ತೆಗೆದು ತಣ್ಣಗಾಗಲು ಬಿಡಿ. ಬಿಸಿಯಾಗಿರುವಾಗ ಇವು ಸ್ವಲ್ಪ ಮೆತ್ತಗೆ ಇರುತ್ತವೆ, ಆರಿದ ಬಳಿಕ ಗಟ್ಟಿಯಾಗಿ ತಿನ್ನಲು ಸಿದ್ಧವಾಗುತ್ತವೆ. ನೋಡಿದ್ರಲ್ಲಾ ಸ್ನೇಹಿತರೆ, ಬಟ್ಟರ್ ಕುಕ್ಕೀಸ್ ಮಾಡುವುದು ಎಷ್ಟು ಸುಲಭ ಅಂತ. ನೀವೂ ನಿಮ್ಮ ಮನೆಯಲ್ಲಿ ಖಂಡಿತ ಬಾಯಲ್ಲಿ ಕರಗುವ ಬಟ್ಟರ್ ಕುಕ್ಕೀಸ್ ಟ್ರೈ ಮಾಡಿ ನಿಮ್ಮ ಮನೆಯವರಿಗೆ ಖುಷಿ ಪಡಿಸಿ. ಎಗ್ ಇಲ್ಲದೇ ಕುಕ್ಕೀಸ್ ಮಾಡುವುದು ಈಗ ತುಂಬಾ ಸುಲಭ. ನೀವೂ ತಿಂದು ನಿಮ್ಮ ಮನೆಯವರಿಗೂ ತಿನ್ನಿಸಿ. ಶುಭದಿನ

Leave a Reply

Your email address will not be published. Required fields are marked *