ಕಾಲಕ್ಕೆ ಅನುಗುಣವಾಗಿ ನಾವು ಆಹಾರ ಮತ್ತು ಆರೋಗ್ಯದ ಕಾಳಜಿವಹಿಸತ್ತಲೇ ಇರುತ್ತೇವೆ. ಡಯಟ್‌, ವ್ಯಾಯಾಮ ಎಂದೆಲ್ಲಾ ಯೋಚಿಸುತ್ತಲೇ ಇರುತ್ತೇವೆ. ಡಯಟ್‌ ಮಾಡುವವರಿಗೆ ಕೊಡುವ ಸಲಹೆ ಏನೆಂದರೆ ಅವರು ಅನುಸರಿಸುವ ಕ್ರಮ ಬಹಳ ದಿನಗಳವರೆಗೆ ಪ್ರಯೋಜನಗಳನ್ನು ನೀಡಬೇಕು ಎಂಬುದು. ಅಂತಹವುಗಳಲ್ಲಿ ಬಿಳಿ ಈರುಳ್ಳಿ ಬಹಳಷ್ಟು ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ. ಜನಪ್ರಿಯ ಈರುಳ್ಳಿಯ ಬಗೆಗಳಲ್ಲಿ ಬಿಳಿ ಬಣ್ಣದ ಈರುಳ್ಳಿಯು ಒಂದು. ಅದರ ರುಚಿಯೂ ಸಹ ಸ್ವಲ್ಪ ಬೇರೇಯೇ ಇದೆ.

ಭಾರತದ ಪ್ರತಿ ಅಡುಗೆ ಮನೆಯಲ್ಲೂ ಈರುಳ್ಳಿ ಇದ್ದೇ ಇರುತ್ತದೆ. ಈರುಳ್ಳಿ ಇಲ್ಲದೇ ಅಡುಗೆ ಮಾಡುವವರೇ ಅಪರೂಪ. ಸಾಮಾನ್ಯ ಈರುಳ್ಳಿಗಿಂತ ಬಿಳಿ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ಪಾರ್ಶ್ವವಾಯು, ಪಾರ್ಕಿನ್ಸನ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಪುರುಷರಿಗೆ ವಿಶೇಷವಾಗಿ ಬಿಳಿ ಈರುಳ್ಳಿಯ ಸೇವನೆಯು ಹೆಚ್ಚು ಪ್ರಯೋಜನಕಾರಿ ಅನ್ನೋದು ಸಾಬೀತಾಗಿದೆ.ಹೃದಯದ ಆರೋಗ್ಯ ಬಿಳಿ ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ಇದು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ ಮತ್ತು ಹೃದಯವು ಆರೋಗ್ಯವಾಗಿರುತ್ತದೆ.‌ ಕ್ಯಾನ್ಸರ್ ಬಿಳಿ ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತ ಮತ್ತು ಫ್ಲೇವನಾಯ್ಡ್ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡುಬರುತ್ತವೆ. ಇವು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಬಿಳಿ ಈರುಳ್ಳಿ ಸೇವನೆಯಿಂದ ಗಡ್ಡೆಗಳ ಅಪಾಯವೂ ಕಡಿಮೆಯಾಗುತ್ತದೆ.

ಡಯಾಬಿಟಿಸ್‌ ಕ್ರೋಮಿಯಂ ಮತ್ತು ಸಲ್ಫರ್ ಕೂಡ ಬಿಳಿ ಈರುಳ್ಳಿಯಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಪ್ರತಿದಿನ ಬಿಳಿ ಈರುಳ್ಳಿಯನ್ನು ಸೇವಿಸಬೇಕು.ಅಜೀರ್ಣ ಸಮಸ್ಯೆ ಬಿಳಿ ಈರುಳ್ಳಿ ಸೇವನೆಯಿಂದ ಉದರ ಬಾಧೆ ಕಡಿಮೆಯಾಗುತ್ತದೆ. ಇದರಲ್ಲಿರುವ ಫೈಬರ್ ಮತ್ತು ಪ್ರಿಬಯಾಟಿಕ್‌ಗಳು ಹೊಟ್ಟೆಯನ್ನು ಆರೋಗ್ಯಕರವಾಗಿಡುತ್ತವೆ. ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆಯು ಹೆಚ್ಚಾಗುತ್ತದೆ. ಇದಲ್ಲದೆ, ಬಿಳಿ ಈರುಳ್ಳಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

Leave a Reply

Your email address will not be published. Required fields are marked *