ನಮಸ್ತೆ ಪ್ರಿಯ ಓದುಗರೇ, ಸ್ಮಶಾನ ಮಲ್ಲಿಗೆ, ಇದು ಒಂದು ಜಾತಿಯ ಸಸ್ಯ. ಈ ಗಿಡದ ಪ್ರತಿಯೊಂದು ಭಾಗವಾದ ಕಾಯಿ ಹಣ್ಣು ಎಲೆ ಹೂವು ಬೇರು ಎಲ್ಲವೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಸ್ಮಶಾನ ಮಲ್ಲಿಗೆ ಈ ಹೆಸರಿನಲ್ಲಿ ಸ್ಮಶಾನ ಎಂಬ ಹೆಸರು ಇರುವ ಕಾರಣ ಇದನ್ನು ನಾವು ಯಾವುದೇ ದೇವರ ಪೂಜೆಗೆ ಬಳಕೆ ಮಾಡಲಾಗುವುದಿಲ್ಲ. ಈ ಗಿಡದ ಮೂಲಸ್ಥಾನ ಮಡಗಾಸ್ಕರ್. ಇದನ್ನು ಉದ್ಯಾನವನಗಳಲ್ಲಿ ಉದ್ಯಾನವನ ಅಂಚುಗಳ ಅಂದವನ್ನು ಹೆಚ್ಚಿಸಲು ಮುಖ್ಯವಾಗಿ ಬೆಳೆಸುತ್ತಾರೆ.

ಈ ಸಸ್ಯವನ್ನು ಸಾಮಾನ್ಯವಾಗಿ ಬಿಪಿ ಮತ್ತು ಸಕ್ಕರೆ ಕಾಯಿಲೆ ರೋಗಗಳಿಗೆ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ದೇಶದಲ್ಲಿ ಸಿಹಿ ಮಲಮೂತ್ರ ರೋಗಕ್ಕೆ ಔಷಧವಾಗಿ ಬಳಕೆ ಮಾಡುತ್ತಾರೆ. ಈ ಸಸ್ಯವನ್ನು ನಾವು ವಿವಿಧ ಹೆಸರುಗಳಿಂದ ಪರಿಚಯಿಸಿಬಹುದು. ಇದು ನಿತ್ಯವೂ ಹೂವು ಬಿಡುವುದರಿಂದ, ಅಥವಾ ವರ್ಷದ ಎಲ್ಲ ಋತುಗಳಲ್ಲಿ ಹೂವು ಬಿಡುವುದರಿಂದ ಇದನ್ನು ನಾವು ನಿತ್ಯಾಪುಷ್ಪಿ ಅಂತ ಕರೆಯುತ್ತೇವೆ.

ಮೈಸೂರು ಪ್ರಾಂತ್ಯದಲ್ಲಿ ಹೇನುಹೋವು ಅಂತ ಕರೆಯಲಾಗುತ್ತದೆ. ಹಾಗೆಯೇ ಇದನ್ನು ಕಾಶಿ ಕಣಗಿಲೆ ಅಂತ ಕೂಡ ಕರೆಯುತ್ತಾರೆ. ಈ ಸಸ್ಯ ಬಿಳಿ ಮತ್ತು ಕೆಂಪು ಹೂಗಳನ್ನು ಬಿಡುವ ಸಸ್ಯವಾಗಿದೆ. ಈ ಗಿಡವು ನಮ್ಮ ಮನೆಯ ಅಂಗಳವನ್ನು ಅಂದವಾಗಿ ಮಾಡುವುದಲ್ಲದೆ ಇದು ಆರೋಗ್ಯಕ್ಕೆ ಎಷ್ಟೊಂದು ಉಪಯೋಗ ಅಂತ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ನಿತ್ಯಪುಷ್ಮ ಅಥವಾ ಕಾಶಿ ಕಣಗಿಲೆ ಇದು ರಕ್ತ ಕ್ಯಾನ್ಸರ್ ರೋಗಿಗಳಿಗೆ ಒಂದು ದಿವ್ಯ ಔಷಧ ಅಂತ ಹೇಳಬಹುದು. ಅದು ಹೇಗೆಂದರೆ ಈ ಗಿಡದ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಅದನ್ನು ಬಿಸಿಲಿನಲ್ಲಿ ಒಣಗಿಸಿ ಅದರ ಚೂರ್ಣವನ್ನು ಮಾಡಿ ಅದನ್ನು ಎರಡು ಲೋಟ ನೀರು ಹಾಕಿ ಆ ನೀರು ಒಂದು ಲೋಟ ಆಗುವವರೆಗೆ ಚೆನ್ನಾಗಿ ಕುದಿಸಿ ಕಷಾಯದ ರೂಪದಲ್ಲಿ ದಿನಕ್ಕೆ ಮೂರು ಬಾರಿ ನಿತ್ಯವೂ ಸೇವನೆಯನ್ನು ಮಾಡುವುದು. ಇದು ರಕ್ತ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ತುಂಬಾನೇ ಪರಿಣಾಮಕಾರಿ ಆಗಿದೆ. ಹಾಗೆಯೇ ಇದು ರಕ್ತವನ್ನು ಶುದ್ಧೀಕರಿಸುತ್ತದೆ.

ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮಗೆ ಈ ಗಿಡದ ಎಲೆಗಳನ್ನು ಒಣಗಿಸಲು ಕಷ್ಟವಾದರೆ ಹಸಿಯಾಗಿ ಸಿಕ್ಕರೆ ಈ ಗಿಡದ ಎಲೆಗಳನ್ನು ನೀವು ಜಗಿದು ತಿನ್ನಬಹುದು. ಹೂವುಗಳನ್ನು ಕೂಡ ಜಗಿದು ತಿನ್ನಬಹುದು. ತುಂಬಾನೇ ಲಾಭದಾಯಕ ಆಗಿದೆ. ಹೀಗೆ ನಿರಂತರವಾಗಿ ಮಾಡುವುದರಿಂದ ಮಧುಮೇಹವನ್ನು ಹತೋಟಿಗೆ ತೆಗೆದುಕೊಳ್ಳಬಹುದು. ಅಧಿಕ ರಕ್ತದೊತ್ತಡವನ್ನು ಕೂಡ ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದು. ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಈ ಕಷಾಯವನ್ನು ಕುಡಿಯುವುದರಿಂದ.

ಇನ್ನೂ ಹೆಣ್ಣು ಮಕ್ಕಳಿಗೆ ಋತು ಚಕ್ರದ ಸಮಯದಲ್ಲಿ ಅಧಿಕ ರಕ್ತಸ್ರಾವ ಆಗುತ್ತದೆ ಅಂಥವರ ಈ ಕಷಾಯವನ್ನು ಕುಡಿದರೆ ಅಧಿಕ ರಕ್ತಸ್ರಾವ ನಿಲ್ಲಿಸಿಕೊಳ್ಳಬಹುದು. ಇನ್ನೂ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಮೊಡವೆಗಳು. ಮುಖದ ಕಾಂತಿ ಕಡಿಮೆ ಆಗುವುದು. ಮುಖದಲ್ಲಿ ಕಳೆ ಅನ್ನುವುದು ಇರುವುದಿಲ್ಲ. ಅಂತಹವರು ಈ ಗಿಡದ ಎಲೆಗಳನ್ನು ಜೊತೆಗೆ ಬೇವಿನ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದರಲ್ಲಿ ಅರಿಶಿಣವನ್ನು ಮಿಕ್ಸ್ ಮಾಡಿ ಮುಖಕ್ಕೆ ಲೇಪನ ಮಾಡುವುದರಿಂದ ಮೊಡವೆಗಳನ್ನು ನಾಶ ಮಾಡಿಕೊಳ್ಳಬಹುದು.

ಹಾಗೆಯೇ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇನ್ನೂ ಗಾಯವಾದರೆ ಈ ಗಿಡದ ಎಲೆಗಳನ್ನು ಜಜ್ಜಿ ಲೇಪನ ಮಾಡುವುದರಿಂದ ಕೂಡ ಗಾಯ ಮಂಗಮಾಯವಾಗುತ್ತದೇ. ಅಷ್ಟೊಂದು ಲಾಭಗಳನ್ನು ಹೊಂದಿದೆ. ಈ ಸಸ್ಯ. ನಿಜಕ್ಕೂ ಅದ್ಭುತವಾಗಿದೆ. ಇದನ್ನು ನೀವು ಮನೆಯ ಅಂಗಳದಲ್ಲಿ ಕೂಡ ಬೆಳೆಸಬಹುದು. ಇದು ನಿಮ್ಮ ಅಂಗಳದ ಸೌಂದರ್ಯವನ್ನು ಹೆಚ್ಚಿಸುತ್ತದೆ ಜೊತೆಗೆ ನಿಮ್ಮ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *