ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆ ಗಗನಮುಖಿಯಾಗಿದೆ. ಅದರಲ್ಲೂ ಟೊಮೆಟೊ ಸಾಮಾನ್ಯ ಜನರ ವ್ಯಾಪ್ತಿಯಿಂದ ಹೊರಗುಳಿಯುತ್ತಿದೆ. ಪ್ರತಿ ಕೆಜಿಗೆ ನೂರು ರೂಪಾಯಿ 200 ರೂಪಾಯಿ ಮೇಲ್ಪಟ್ಟು ದಾಖಲೆಗಳ ಮಟ್ಟಕ್ಕೆ ಏರಿಕೆ ಕಂಡಿದ್ದ ಟೊಮ್ಯಾಟೋ ದರದಲ್ಲಿ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದ್ದು ಕೇಂದ್ರ ಸರ್ಕಾರವು ಸಬ್ಸಿಡಿ ಟೊಮೇಟೊ ಬೆಲೆ ಇದೀಗ ದಿಢೀರನೆ ಹೇರಿಕೆ ಮಾಡಿದೆ ಇದರಿಂದಾಗಿ ಎಲ್ಲಾ ಸಾರ್ವಜನಿಕರಿಗೆ ನೆಮ್ಮದಿ ಸುದ್ದಿ ಬಂದಿದ್ದು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ ಮತ್ತು ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಇಂಡಿಯಾ ಇನ್ ಹಿಂದಿ ನಮ್ಮ ಭಾರತ ದೇಶದಾದ್ಯಂತ ಟೊಮೆಟೊ ದರವನ್ನು ಇಳಿಸಿದೆ.

ಟೊಮೇಟೊಗಳ ಬೆಳೆಗಳ ಕುಸಿತ ಪ್ರವೃತ್ತಿ ಗಮನದಲ್ಲಿಟ್ಟುಕೊಂಡು ಇಂದಿನಿಂದ ಜಾರಿಗೆ ಬರುವಂತೆ ಪ್ರತಿ ಕೆಜಿಗೆ 70 ನಿಗದಿ ಮಾಡಲಾಗಿದೆ ಮುಂದಿನ ದರದಲ್ಲಿ ಟೊಮೆಟೊ ಬೆಲೆಯನ್ನು ಮತ್ತಷ್ಟು ಇಳಿಕೆ ಮಾಡುವ ಮೂಲಕ ಪ್ರತಿ ಕೆಜಿಗೆ 20 ರೂಪಾಯಿಗೆ ಸುಲಭವಾಗಿ ಸಾರ್ವಜನಿಕರಿಗೆ ದೊರೆಯಲಿದೆ ಎಂದು ಗ್ರಾಹಕರ ವ್ಯವಹಾರ ಇಲಾಖೆ ಇಎಫ್‌ಡಿ ಅಧಿಕೃತ ಘೋಷಣೆ ಮಾಡಿದೆ.ಭಾರತೀಯ ಗ್ರಾಹಕ ಒಕ್ಕೂಟವು ಜನರಿಗೆ ಕೆಜಿಗೆ 80 ರೂ.ಗೆ ಟೊಮೆಟೊವನ್ನು ನೀಡುತ್ತಿದೆ ಎಂದು ಹೇಳಿಕೊಂಡಿದೆ.ದೆಹಲಿ-ಎನ್‌ಸಿಆರ್‌ನ ಕೆಲವು ಪ್ರದೇಶಗಳಲ್ಲಿ ಸೋಮವಾರದಿಂದಲೇ ಅಗ್ಗದ ದರದಲ್ಲಿ ಟೊಮೆಟೊ ಮಾರಾಟ ಆರಂಭವಾಗಿದೆ.

ಕೆಲವು ಪ್ರದೇಶಗಳಲ್ಲಿ ಅಗ್ಗದ ಟೊಮೆಟೊಗಳ ಮಾರಾಟ ಪ್ರಾರಂಭವಾಗಿದೆ. ಇನ್ನು ಕೆಲವೆಡೆ ಪ್ರಚಾರಕ್ಕಾಗಿ ಮಾತ್ರ ಟೊಮೆಟೊ ಮಾರಾಟ ಮಾಡಲಾಗುತ್ತಿದ್ದು, ಇನ್ನೂ ಮುಕ್ತ ಮಾರುಕಟ್ಟೆಯಲ್ಲಿ ಟೊಮೇಟೊ ಕೆಜಿಗೆ 120ರಿಂದ 180 ರೂ.ಗೆ ಕೊಳ್ಳಬೇಕಾಗಿದೆ ಎಂದು ಜನರು ದೂರುತ್ತಾರೆ. ಆದರೆ ಚಿಲ್ಲರೆಯಲ್ಲಿ ಟೊಮೇಟೊ, ತರಕಾರಿಗಳನ್ನು ಮನಬಂದಂತೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬೆಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಟೊಮೇಟೊ ಬೆಲೆ ನಿಗದಿ ಮಾಡಿದೆ. ಆದರೆ, ಇದಾದ ನಂತರವೂ ವ್ಯಾಪಾರಿಗಳು ಮನಬಂದಂತೆ ಬೆಲೆ ವಸೂಲಿ ಮಾಡುತ್ತಿದ್ದಾರೆ.

ಟೊಮೇಟೊ ಚಿಲ್ಲರೆ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಪರಿಹಾರ ನೀಡಲು ಕೇಂದ್ರ ಸರಕಾರ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟ ಮಾಡುತ್ತಿದೆ. ಟೊಮೇಟೊ ದರವನ್ನು ಗುರುವಾರದಿಂದ ಕೆಜಿಗೆ 80 ರೂ.ಗೆ ಬದಲಾಗಿ 70 ರೂ.ಗೆ ಇಳಿಸಿದೆ. ಕಳೆದ ವಾರ ಶುಕ್ರವಾರದಿಂದ, ದೆಹಲಿ ಎನ್‌ಸಿಆರ್ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಕೇಂದ್ರ ಸರ್ಕಾರವು ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಈಗಲೂ ಮುಕ್ತ ಮಾರುಕಟ್ಟೆಯಲ್ಲಿ ಟೊಮೇಟೊ ಕೆಜಿಗೆ 160ರಿಂದ 200 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ನಿಮ್ಮ ಜಿಲ್ಲೆಯ ಒಂದು ಸದ್ಯ ಪ್ರತಿ ಕೆಜಿ ಟೊಮಾಟೊಗೆ ಎಷ್ಟು ದರ ಎಂದು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Leave a Reply

Your email address will not be published. Required fields are marked *