ಕೆಲವೊಮ್ಮೆ ಗಂಟಲಿನ ಸಮಸ್ಯೆ ಹೆಚ್ಚಗಿ ಬರುತ್ತದೆ ಮತ್ತು ಈ ಗಂಟಲಿನ ಸಮಸ್ಯೆ ಬಂದಾಗ ಕೆಲವೊಮ್ಮೆ ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ನಿಮ್ಮ ಗಂಟಲು ಕಿರಿಕಿರಿಯನ್ನು ತಪ್ಪಿಸಲು ಇಲ್ಲಿವೆ ನೋಡಿ ಮನೆಮದ್ದುಗಳು.

ಬಿಸಿನೀರಿಗೆ ಕೊಂಚ ಹಸಿಶುಂಠಿಯನ್ನು ಹಾಕಿ ಕುದಿಸಿ ಸೋಸಿ ತಯಾರಿಸಿದ ಟೀ ದಿನಕ್ಕೆರಡು ಕಪ್‌ನಂತೆ ಕುಡಿಯಿರಿ. ಗಂಟಲ ಬೇನೆಗೆ ತಕ್ಷ ಣದ ಪರಿಹಾರ ನೀಡಲು ಈ ವಿಧಾನ ಉತ್ತಮವಾಗಿದೆ. ಒಂದು ವೇಳೆ ಕಫ ಗಟ್ಟಿಯಾಗಿದ್ದಂತೆ ಅನ್ನಿಸಿದರೆ ಈ ಟೀ ಯಲ್ಲಿ ಒಂದು ಚಮಚ ಜೇನು ಬೆರೆಸಿ ಕುಡಿಯಿರಿ.

ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿ.

ಒಂದು ಲೀಟರ್‌ ನೀರಿಗೆ ಎರಡು ದೊಡ್ಡಚಮಚ ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ನೀರಿನ ಬಣ್ಣವನ್ನು ಗಮನಿಸಿ. ಯಾವಾಗ ನೀರಿನಲ್ಲಿ ಮೆಂತೆ ಬಣ್ಣ ಬಿಡತೊಡಗುತ್ತದೆಯೋ ಆಗ ತಕ್ಷ ಣ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಮುಕ್ಕಳಿಸುತ್ತಿರಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳ ಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಒಂದು ದಾಳಿಂಬೆಯ ಕಾಳುಗಳಿಂದ ಹಿಂಡಿ ತೆಗೆದ ರಸ ಹಾಗೂ ಸುಮಾರು ಮೂರರಿಂದ ನಾಲ್ಕು ಕಪ್‌ ನೀರನ್ನು ಇದಕ್ಕೆ ಬೆರೆಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚ ಕೊಂಚವಾಗಿ ಕುಡಿಯುತ್ತಾ ಖಾಲಿ ಮಾಡಿ. ಗಂಟಲ ಕಿರಿಕಿರಿ ನಿವಾರಿಸಲು ಇದೂ ಒಂದು ಉತ್ತಮ ವಿಧಾನವಾಗಿದೆ.

ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಇನ್ನೂ ಹಬೆಯಾಡುತ್ತಿರುವಂತೆಯೇ ಇದರ ಮೇಲೆ ಮುಖವಿರಿಸಿ ದಪ್ಪ ಟವೆಲ್ಲಿನಿಂದ ಪಾತ್ರೆಯನ್ನು ಆವರಿಸಿ ಹಬೆಯನ್ನು ಮೂಗಿನಿಂದ ಉಸಿರಾಡಿ. ಇನ್ನೂ ಉತ್ತಮ ಪರಿಣಾಮ ಪಡೆಯಲು ಈ ನೀರಿಗೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಈ ಹಬೆಯನ್ನು ಕೆಲವಾರು ನಿಮಿಷಗಳವರೆಗೆ ಉಸಿರಾಡಿ.

Leave a Reply

Your email address will not be published. Required fields are marked *