ಇತ್ತೀಚಿಗೆ ನಟಿ ರಾಧಿಕಾ ಕುಮಾರಸ್ವಾಮಿ ಕನ್ನಡ ಸಿನಿಮಾಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದು ಎಲ್ಲರಿಗು ಗೊತ್ತಿರುವ ವಿಚಾರ ಮರಳಿ ಬಂದ ಕೆಲವು ಸಿನಿಮಾಗಳನ್ನು ಮಾಡಿ ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ ಅವರ ಸಿನಿಮಾ ಸ್ವೀಟಿ ನನ್ನ ಜೋಡಿ ಸಿನಿಮಾಗೆ ಸಂಬಂಧಿಸದಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಯಾಕೆ ಅನ್ನೋದು ಇಲ್ಲಿದೆ ನೋಡಿ.

ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಸ್ವೀಟಿ ನನ್ನ ಜೋಡಿ ಸಿನಿಮಾವನ್ನು ಕಿಡಿಗೇಡಿಗಳು ಯಾವುದೇ ಪರ್ಮಿಷನ್ ಇಲ್ಲದೆ ಕಾನೂನು ಬಾಹಿರವಾಗಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಹಾಗಾಗಿ ನಟಿ ರಾಧಿಕಾ ಕುಮಾರಸ್ವಾಮಿ ಕಿಡಿಗೇಡಿಗಳ ವಿರುದ್ಧ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಈ ದೂರಿನಲ್ಲಿ ಏನು ಏನು ಇದೆ ಗೊತ್ತಾ.

ದೂರಿನಲ್ಲಿ ಇರುವ ಅಂಶ: ನಾನು ಸುಮಾರು ಮೂರೂ ಕೋಟಿಯಲ್ಲಿ ಸ್ವೀಟಿ ಸಿನಿಮಾವನ್ನು ಮಾಡಿದ್ದೇವೆ ಆದರೆ ಯಾರೋ ಕಿಡಿಗೇಡಿಗಳು ಮತ್ತು ಅಪರಿಚಿತರು ಆ ಸಿನಿಮಾವನ್ನು ನಮ್ಮ ಅನುಮತಿ ಇಲ್ಲದೆ ಮತ್ತೆ ಯಾವುದೇ ರೀತಿಯಲ್ಲಿ ನಮ್ಮ ಗಮನಕ್ಕೆ ತಿಳಿಸದೇ ಒಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಹಾಗಾಗಿ ಇವರ ವಿರುದ್ಧ ನೀವು ಕಠಿಣ ಕ್ರಮ ಜರುಗಿಸಬೇಕು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಈ ಸಂಬಂಧ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯ್ಲಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಸಿಇಎನ್ ಪೊಲೀಸರು ರಾಧಿಕಾ ದೂರಿನ ಅನ್ವಯ ಎಫ್‍ಐಆರ್ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *