ಏಲಕ್ಕಿಯನ್ನು ಸಾಮಾನ್ಯವಾಗಿ ಆಹಾರಗಳಿಗೆ ಪರಿಮಳವನ್ನು ನೀಡಲು ಬಳಕೆ ಮಾಡಲಾಗುತ್ತದೆ. ಇದರಿಂದ ಆನೇಕ ಆರೋಗ್ಯ ಪ್ರಯೋಜನಗಳೂ ಇವೆ. ಏಲಕ್ಕಿ ನೀರು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ, ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇರುತ್ತವೆ.ಏಲಕ್ಕಿ ಎರಡು ವಿಧ: ದೊಡ್ಡ ಮತ್ತು ಸಣ್ಣ ಏಲಕ್ಕಿ. ಸಣ್ಣ ಹಸಿರು ಏಲಕ್ಕಿ ಇದನ್ನು ಪಾನ್, ಸಿಹಿ ತಿಂಡಿಗಳು (Sweets) ಮತ್ತು ಅಡುಗೆಯಲ್ಲಿ ಬಳಸಲಾಗುತ್ತದೆ. ಏಲಕ್ಕಿಯು ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಏಲಕ್ಕಿ ಪೋಷಕಾಂಶಗಳ ನಿಧಿಯಾಗಿದ್ದು, ಇದು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತೆ.ಏಲಕ್ಕಿಯನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುವುದಲ್ಲದೆ ನೆಗಡಿ , ಕೆಮ್ಮು , ಜೀರ್ಣ ಸಮಸ್ಯೆಗಳು ವಾಂತಿ ಮೂತ್ರದ ಸಮಸ್ಯೆಗಳೂ ಪರಿಹಾರವಾಗುತ್ತದೆ. ಏಲಕ್ಕಿಯಲ್ಲಿ ಮೆಗ್ನೀಶಿಯ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದೆ, ಇದು ಯಾವಾಗಲೂ ದೇಹದ ರಕ್ತ ಪರಿಚಲನೆಯನ್ನು ಸಾಮಾನ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಇಂತಹ ಪ್ರಯೋಜನಕಾರಿ ಏಲಕ್ಕಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುದಿಸಿ ಅದರ ಕಷಾಯ ಅಥವಾ ನೀರನ್ನು ಕುದಿಸಿ ಕುಡಿಯುವುದರಿಂದ ಪ್ರಯೋಜನವನ್ನು ಪಡೆಯುತ್ತೀರಿ. ಏಲಕ್ಕಿ ನೀರು ಅಥವಾ ಕಷಾಯ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳು ಮತ್ತು ಅದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿದೆ

ಏಲಕ್ಕಿ ನೀರನ್ನು ಈ ಕೆಳಗಿನಂತೆ ಮಾಡಿ: ಏಲಕ್ಕಿ ನೀರನ್ನು ತಯಾರಿಸಲು ಮೊದಲು ಒಂದು ಲೀಟರ್ ನೀರನ್ನು ತೆಗೆದುಕೊಂಡು ಅದರಲ್ಲಿ 5-6 ಏಲಕ್ಕಿ ಸಿಪ್ಪೆಯನ್ನು ಸುಲಿದು ರಾತ್ರಿಯಿಡೀ ನೀರಿನಲ್ಲಿ ನೆನೆಯಲು ಬಿಡಿ. ನೆನೆಸಿದ ಏಲಕ್ಕಿ ನೀರನ್ನು ಒಂದು ಬಾಣಲೆಯಲ್ಲಿ ಹಾಕಿ ಪೂರ್ತಿಯಾಗಿ ಕುದಿಸಿ. 3/4 ನೇ ಉಳಿದಿರುವಾಗ ಗ್ಯಾಸ್ ಆಫ್ ಮಾಡಿ. ಈಗ ಈ ನೀರನ್ನು ಸೋಸಿ ಒಂದು ಜಾರ್ ಅಥವಾ ಬಾಟಲಿಯಲ್ಲಿ ಹಾಕಿಡಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯಿರಿ.ಏಲಕ್ಕಿ ನೀರು ಕುಡಿಯುವ ಪ್ರಯೋಜನಗಳು.

ಏಲಕ್ಕಿ ನೀರು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಏಲಕ್ಕಿ ನೀರು ಅತ್ಯಂತ ಸಹಾಯಕ. ಮಧುಮೇಹ ರೋಗಿಗಳು ಇದನ್ನು ಕೆಲವು ದಿನಗಳ ಕಾಲ ಸೇವಿಸಿದರೆ ಪ್ರಯೋಜನ ವಾಗುತ್ತದೆ. ಜೀರ್ಣಕ್ರಿಯೆಯನ್ನು ನಿರ್ವಹಿಸುತ್ತದೆ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಇದ್ದರೆ ಏಲಕ್ಕಿ ನೀರನ್ನು ಸೇವಿಸಿ. ಇದರ ನಿಯಮಿತ ಸೇವನೆಯು ಎಲ್ಲಾ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ ಜೊತೂಕ ನಿಯಂತ್ರಣಕ್ಕೆ ಸಹಕಾರಿ.

ತೂಕ ಹೆಚ್ಚಳದಿಂದ ಬಳಲುತ್ತಿದ್ದರೆ ಏಲಕ್ಕಿ ನೀರನ್ನು ಸೇವಿಸಿ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕುವ ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.ತೆಗೆ ಹೊಟ್ಟೆ ಹಗುರಾಗುತ್ತದೆ. ತೂಕ ನಿಯಂತ್ರಣಕ್ಕೆ ಸಹಕಾರಿ ತೂಕ ಹೆಚ್ಚಳದಿಂದ ಬಳಲುತ್ತಿದ್ದರೆ ಏಲಕ್ಕಿ ನೀರನ್ನು ಸೇವಿಸಿ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕುವ ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿರುವವರು ಏಲಕ್ಕಿ ನೀರನ್ನು ಸೇವಿಸಿ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದ್ರೋಗಗಳನ್ನುದೂರವಿಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಆರೋಗ್ಯದಿಂದಿರಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *