ಗೃಹಲಕ್ಷ್ಮಿ ಯೋಜನೆಯ ಹಣ. ಆದರೆ ಸಾಕಷ್ಟು ಜನ ಮಹಿಳೆಯರಿಗೆ ಹಣ ಬರುತ್ತಿಲ್ಲ. ಕೆಲವರಿಗೆ ಹಣ ಇದುವರೆಗೂ ಬಂದಿಲ್ಲ.ಇನ್ನು ಕೆಲವರಿಗೆ ಏನಾಗಿದೆ ಅಂದ್ರೆ ಲಕ್ಷ್ಮಿ ಯೋಜನೆ ಒಂದು ಕಂತು ಬಂದರೆ ಮತ್ತೆ ಇನ್ನೊಂದು ಕಂತು ಬಂದಿಲ್ಲ .ಅನೇಕ ಮಂದಿಗೆ ಏಳನೇ ಕಂತು ಬಂದಿಲ್ಲ. ಈ ರೀತಿಯಾಗಿ ಎಲ್ಲ ಸಮಸ್ಯೆಗಳು ಆಗಿರುತ್ತೆ, ನೀವು ಕೇಳಬಹುದು, ಹಾಗಾದ್ರೆ ಯಾಕೆ ನಮಗೆ ಒಂದು ಹಣ ಬರುತ್ತಿಲ್ಲ, ಏನು ಸಮಸ್ಯೆ ಆಗಿದೆ ಅಂತ ನೀವೆಲ್ಲರು ಪ್ರಶ್ನೆಗಳು ಕೇಳ್ತೀರಾ, ಈಗ ನಿಮಗೆ ಯಾರು ಹಣ ಬರುತ್ತಿಲ್ಲವೋ ಅವರಿಗೆ ಈ ಮಾಹಿತಿ ಸ್ವಲ್ಪ ಸಹಾಯ ಆಗಬಹುದು.‌ಗೃಹಲಕ್ಷ್ಮಿ ಯೋಜನೆಯ ಹಣ ಸಾಕಷ್ಟು ಜನರಿಗೆ ಬರುತ್ತಿಲ್ಲ. ಏನು ಸಮಸ್ಯೆ ಆಗಿರಬಹುದು ಅಂತ ನೀವು ಕೇಳಬಹುದು.

ಯಾಕಂದ್ರೆ ಕೆಲವರು ಏನು ಮಾಡುತ್ತಾರೆ ಅರ್ಜಿಯನ್ನು ಹಾಕಿರ್ತಾರೆ ನಾವು ಅರ್ಜಿಯನ್ನು ಹಾಕಿದ ಮೇಲೆ ಒಂದು ಹಣ ಬಂದಿದೆ ಅಂದ್ರೆ ಒಂದು ಅಥವಾ ಎರಡು ಕಂತಿರ ಹಣ ಬಂದಿದೆ ಅಂದ್ರೆ ನಮ್ಮ ಅರ್ಜಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ .ಹಣ ಬರುತ್ತಿದೆ ಅಲ್ಲ ಒಂದು ತಿಂಗಳಾದ್ರೂ ಪರವಾಗಿಲ್ಲ, 2 3 ತಿಂಗಳು ಲೇಟ್ ಆದರೂ ಪರವಾಗಿಲ್ಲ ನಮಗೆ ಬರುತ್ತೆ ಅಂತ ಯೋಚನೆ ಮಾಡಿಕೊಂಡು ಕೂತಿರುತ್ತಾರೆ, ಈಗ ಬಹಳಷ್ಟು ದಿನಗಳ ನಂತರ ಅವರಿಗೆ ಸ್ವಲ್ಪ ಯೋಚನೆ ಮಾಡುವುದಕ್ಕೆ ಶುರು ಮಾಡುತ್ತಾರೆ ಏಕೆಂದರೆ ಇಷ್ಟು ದಿನಗಳಾದರೂ ಕೂಡ ಬಂದಿಲ್ಲ ಎಂದು ಸ್ವಲ್ಪ ಚಿಂತೆ ಬರುತ್ತದೆ.

ನಮಗೆ ಬಂದಿರುವ ಮಾಹಿತಿಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರಿಗೆ ಆಗುವಂತಹ ಸಮಸ್ಯೆಗಳು ಏನು ಎಂದು ನೋಡಿದರೆ ಮೊದಲಿಗೆ ಒಂದು ಅಥವಾ ಎರಡನೇ ಕಂತಿನ ಹಣ ಬಂದು ನಂತರ ಹಣ ಬರುವುದಕ್ಕೆ ಸಂಪೂರ್ಣವಾಗಿ ಸ್ತಬ್ಧವಾಗಿದೆ ಇದು ಹಲವಾರು ಜನಗಳು ಎದುರಿಸುತ್ತಿದ್ದಾರೆ.ಇದರ ಸಮಸ್ಯೆಗೆ ಕಾರಣ ಏನೆಂದರೆ ನೀವು ಹಾಕಿದಂತಹ ಗೃಹಲಕ್ಷ್ಮಿ ಯೋಜನೆ ಅರ್ಜಿ ರದ್ದಾಗಿದೆ ಎಂದು ಅರ್ಥ ಹೌದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಈ ಸಮಸ್ಯೆ ಎದರಾಗುತ್ತಿದೆ ಒಂದು ವೇಳೆ ನಿಮಗೆ ಎರಡು ಅಥವಾ ಮೂರು ಕಂತಿನ ಹಣ ಬಂದು ನಂತರ ನಿಂತು ಹೋದರೆ ನಿಮಗೂ ಕೂಡ ಇದೇ ರೀತಿ ಸಮಸ್ಯೆ ಎದರಾಗುತ್ತಿದೆ.

ಹಾಗಾಗಿ ಈ ಸಮಸ್ಯೆಗೆ ಹೊರಬರಲು ಪರಿಹಾರ ಏನು ಎಂದು ನಾವು ನೋಡುವುದಾದರೆ ನಿಮ್ಮ ಅರ್ಜಿಯನ್ನು ತೆಗೆದುಕೊಂಡು ನಿಮ್ಮ ಸಮೀಪ ಇರುವಂತಹ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಿಮ್ಮ ಅರ್ಜಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ. ಒಂದು ವೇಳೆ ನಿಮ್ಮ ಅರ್ಜಿ ಸ್ಥಗಿತಗೊಂಡರೆ ಅಲ್ಲಿ ಅವರಲ್ಲಿ ಮತ್ತೆ ಒಂದು ಅರ್ಜಿಯನ್ನು ನೀವು ಹಾಕಿಕೊಳ್ಳಿ ಇದರಿಂದ ನಿಮಗೆ ಮುಂದೆ ಯಾವುದೇ ರೀತಿಯಾದಂತಹ ಸಮಸ್ಯೆ ಬರುವುದಿಲ್ಲ.

Leave a Reply

Your email address will not be published. Required fields are marked *