ಕೃಷಿ ಮಾಡೋದನ್ನ ನೋಡಿರುತ್ತೀರಾ. ಮೊದಲು ಭೂಮಿ ಖರೀದಿ ಮಾಡಬೇಕು. ಭೂಮಿಯನ್ನು ಕೃಷಿ ಮಾಡಲು ಬರುವ ಹಾಗೆ ಬದಲಾಯಿಸಬೇಕು, ನೆಟ್ಟಬೇಕು, ಉಳಬೇಕು, ಕೆಲಸಗಾರರು ಬೇಕು, ನೀರು ಉಪಯೋಗಿಸಲು ಬೋರ್ ಹಾಕಿಸಬೇಕು, ಬೇಲಿ ಹಾಕಿಸಬೇಕು ಒಂದ, ಎರಡ ಹೇಳುತ್ತಾ ಹೋದರೆ 1000 ರೀತಿಯ ತೊಂದರೆ ಬರುತ್ತೆ ಇವೆಲ್ಲ ಸಮಸ್ಯೆ ಇಲ್ಲದ ಹಾಗೆ ಈ ವ್ಯಕ್ತಿ ಮಾಡಿರುವ ಟೆಸ್ಟ್ ನಿಂದ ಇವರನ್ನು ಅನುಸರಿಸಿದರೆ ಬೇಕಾದ್ರು ಮನೆ ಒಳಗಡೆ ಎಲ್ಲ ತರಕಾರಿಯನ್ನು ಬೆಳೆದು ವರ್ಷಕ್ಕೆ 10 ಲಕ್ಷ ತನಕ ದುಡಿಯಬಹುದು. ಆಶ್ಚರ್ಯ ಆಯ್ತು ಅಲ್ವಾ? ಆದರೆ ಇದು ಸತ್ಯ.ಇವರ ಹೆಸರು ರಾಮವೀರ್ ಸಿಂಗ್. ಮೂಲತಃ ಉತ್ತರ ಪ್ರದೇಶದವರು.

ಒಬ್ಬ ಪೂರ್ಣವಾಗಿ ಪತ್ರಕರ್ತರ ಕೆಲಸ ಮಾಡುತ್ತಿದ್ದರು.ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಒಮ್ಮೆ ಅವರ ಸ್ನೇಹಿತರೊಬ್ಬರು ತಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಸುದ್ದಿ ಗೊತ್ತಾಗುತ್ತೆ. ರಾಮ್ ವೀರ್ ಸಿಂಗ್ ಗೆ ಬಹಳ ಬೇಸರವಾಗುತ್ತೆ.ಸ್ನೇಹಿತನ ತಂದೆ ಸಾಕಷ್ಟು ರಾಸಾಯನಿಕಭರಿತ ತರಕಾರಿಗಳನ್ನು ಸೇವನೆ ಮಾಡಿ ಇದರಿಂದ ಕ್ಯಾನ್ಸರ್ ಬಂದಿದೆ ಎಂಬ ವಿಷಯ ತಿಳಿಯುತ್ತೆ. ನಮ್ಮ ದೇಶದಲ್ಲಿ ಕ್ಯಾನ್ಸರ್‌ಗೆ ಸಾವನ್ನಪ್ಪುವರ ಪೈಕಿ ಶೇಕಡಾ 27% ಗುಟುಕ ತಂಬಾಕಿನಿಂದ ಸಾವನ್ನಪ್ಪುತ್ತಾರೆ. ಉಳಿದ 73% ರಾಸಾಯನಿಕದಿಂದ ವಿವಿಧ ರೀತಿಯ ಕ್ಯಾನ್ಸರ್ ಬರುತ್ತೆ. ಆ ರಾಸಾಯನಿಕ ಬೇರೆ ಯಾವುದು ಅಲ್ಲ, ತರಕಾರಿ, ಹಣ್ಣು ಮತ್ತು ಇನ್ನಿತರೆ ಪದಾರ್ಥದ ಮೇಲೆ ಬಳಸುವ ರಾಸಾಯನಿಕ ಈ ಕಾರಣವೇ ರಾಮವೀರ್ ಅವರ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಸುರಕ್ಷತೆ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿತು.

ಅವರು ಈ ಬಗ್ಗೆ ಎಷ್ಟು ಗಂಭೀರವಾದ ಎಂದರೆ ತಮ್ಮ ಪೂರ್ಣವಾದ ಕೆಲಸ ತೊರೆದು ನೈಸರ್ಗಿಕ ತರಕಾರಿ ಕೃಷಿ ವಿಧಾನವನ್ನು ತಾವೇ. ಭೂಮಿಯಲ್ಲಿ ಬೆಳೆಯಲು ನಿರ್ಧಾರ ಮಾಡಿದರು. ತಮ್ಮ ಮನೆಯಿಂದ 40 ಕಿಲೋಮೀಟರ್ ದೂರದಲ್ಲಿದ್ದ ತಮ್ಮ ಪೂರ್ವಜರ ಭೂಮಿಯಲ್ಲಿ ಈ ಫಾರ್ಮ್ ಕೆಲಸ ಮಾಡಲು ನಿರ್ಧರಿಸಿದರು. ಈ ವೇಳೆ ದುಬೈನಲ್ಲಿ ನಡೆದಿದ್ದ ಕೃಷಿ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ರಾಮವೀರ್ ಅವರಿಗೆ ಹೈಡ್ರೋಪೋನಿಕ್ಸ್ ಎಂಬ ಕೃಷಿ ವಿಧಾನದ ಬಗ್ಗೆ ತಿಳಿದು ಅದರಿಂದ ಸಾಕಷ್ಟು ಪ್ರಭಾವಿತರಾದರು. ಕೂಡಲೇ ಅವರು ತಮ್ಮ ಮೂರು ಮಹಡಿಯ ಕಟ್ಟಡವನ್ನು ಹೈಡ್ರೋಪೋನಿಕ್ ಫಾರ್ಮ್ ಆಗಿ ಬದಲಾಯಿಸಲು ನಿರ್ಧರಿಸಿದರು. ವೀಕ್ಷಕರ ಇರೋ ಫಾರ್ಮ್ ಅಂದ್ರೆ ನೀವು ತರಕಾರಿ, ಹಣ್ಣುಗಳು, ಸೊಪ್ಪು ಎಲ್ಲವನ್ನು ಕೇವಲ ನೀರನ್ನು ಬಳಸಿ ಬೆಳೆಯಬಹುದು.

ಇದಕ್ಕೆ ಮಣ್ಣು ಗೊಬ್ಬರದ ಬೇಡವೇ ಬೇಡ. ರಾಮವೀರ್ ಅವರು ಈಗ ತಮ್ಮ ಮನೆಯಲ್ಲಿ ಎಲ್ಲ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಈ ಹೈಡ್ರೋಫೋನಿಕ್ ವಿಧಾನದಿಂದ ಕೇವಲ 10 ದಿನದಲ್ಲಿ ತರಕಾರಿ ಹಣ್ಣುಗಳು ಬರುತ್ತದೆ. ಒಂದು ಸಲ ಬೆಳೆದ ಮೇಲೆ ಗಿಡವನ್ನು ಕಿತ್ತಿ ಹಾಕುವ ಅವಶ್ಯಕತೆ ಇಲ್ಲ. ಮತ್ತೆ ಅದೇ ಗಿಡದಲ್ಲಿ 10 ದಿನದಲ್ಲಿ ತರಕಾರಿ ಬರುತ್ತೆ. ಇದಕ್ಕೆ ಹೈಡ್ರೋಫೋನಿಕ್ ಫಾರ್ಮ್ ಎಂದು ಕರೆಯುತ್ತಾರೆ. ಈ ರೀತಿ ಹೈಡ್ರೋಫೋನಿಕ್ ಫಾರ್ಮಿಂಗ್ ಮಾಡಬೇಕು ಅಂದರೆ ನಿಮಗೆ ಬೇಕಾಗಿರುವುದು ತರಕಾರಿ ಅಥವಾ ಹಣ್ಣುಗಳ ಬೀಜ ಮತ್ತು ಶುದ್ಧ ನೀರು ಈ ತರಕಾರಿ ಮತ್ತು ಹಣ್ಣುಗಳು ಮಾರುಕಟ್ಟೆಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಬದಲಾಗಿ ತುಂಬಾ ಲಾಭ ತಂದುಕೊಡುತ್ತೆ. ತರಕಾರಿ ಬೆಳೆಯಲು ಮೂರು ತಿಂಗಳು ಬೇಕು.ಅದೇ ಹೈಡ್ರೋಫೋನಿಕ್ ವಿಧಾನದಲ್ಲಿ ತಿಂಗಳಿಗೆ ಮೂರು ಸಲ ತರಕಾರಿ ಬೆಳೆಯಬಹುದು.

Leave a Reply

Your email address will not be published. Required fields are marked *