ಮದುವೆ ಆದಂತ ನವ ದಂಪತಿಗಳಿಗೆ ಹಾಗೂ ಮದುವೆ ಆಗುವಂತವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಇದೆ. ಅದು ಏನಪ್ಪ ಅಂದ್ರೆ ಸಿಂಪಲ್ ಆಗಿ ಮದುವೆ ಆಗುವವರು ಸಿಂಪಲ್ ಆಗಿ ಮದುವೆಯಾಗಿ ಒಂದು ವರ್ಷದೊಳಗೆ ಇರತಕ್ಕಂತಹರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ₹50,000 ಸಹಾಯಧನ ಪಡೆಯಬಹುದು. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲಾತಿಗಳಬೇಕು. ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ನಂತರ ₹50000 ಗೆ ಪಡ್ಕೋಬೇಕು. ಇನ್ನು ಹಲವಾರು ವಿಷಯವನ್ನು ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಇನ್ನು ಈ ಒಂದು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲಾತಿಗಳಬೇಕಪ್ಪ ಅಂತ ಅಂದ್ರೆ ಪತಿ ಹಾಗೂ ಪತ್ನಿಯ ಆಧಾರ್ ಕಾರ್ಡ್ಬೇಕಾಗುತ್ತೆ ಅಂದ್ರೆ ಗಂಡ ಹೆಂಡತಿ ಆಧಾರ್ ಕಾರ್ಡ್ಬೇಕಾಗುತ್ತೆ. ನಂತರ ಪತಿ ಹಾಗೂ ಪತ್ನಿಯ ಜಾತಿ ಪ್ರಮಾಣ ಪತ್ರಬೇಕಾಗುತ್ತೆ. ಆಮೇಲೆ ಪತಿ ಹಾಗೂ ಪತ್ನಿಯ ಆದಾಯ ಪ್ರಮಾಣ ಪತ್ರ ಬೇಕಾಗುತ್ತೆ.ನಂತರ ಮದುವೆ ಆಗುವಂತಹ ಒಂದು ಫೋಟೋಬೇಕಾಗುತ್ತೆ. ನಂತರ ಅರ್ಜಿದಾರರ ವಯಸ್ಸಿನ ಬಗ್ಗೆ ದಾಖಲೆಬೇಕಾಗುತ್ತೆ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಇದ್ರೆ ಸಾಕು ಸಪರೇಟಾಗಿ ಬೇರೆ ದಾಖಲೆ ಏನು ಬೇಕಾಗಿರಲಿಲ್ಲ.

ನಂತರ ಸಾಮೂಹಿಕ ವಿವಾಹ ನೋಂದಣಿ ಪ್ರಮಾಣಪತ್ರಬೇಕಾಗುತ್ತೆ ಅಂದ್ರೆ ನೀವೇನಾದ್ರೂ ನೋಂದಾಯಿತ ಸಂಘ ಸಂಸ್ಥೆಗಳಿಂದ ಮದುವೆ ಆಗಿದ್ರೆ ಅಥವಾ ಧಾರ್ಮಿಕ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಏನಾದ್ರೂ ಮದುವೆ ಆಗಿದ್ದಾರೆ ಅಂದ್ರೆ ದೇವಸ್ಥಾನದಲ್ಲಿ ಆಗಿರಬಹುದು, ಚರ್ಚಲಿ ಆಗಿರಬಹುದು.ನೀವು ಅಲ್ಲಿ ಏನಾದ್ರೂ ಮದುವೆ ಆಗಿದ್ರೆ ನಿಮಗೆ ಸಾಮೂಹಿಕ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಕೊಟ್ಟಿರುತ್ತಾರೆ. ಆ ಒಂದು ಪ್ರಮಾಣಪತ್ರ ಬೇಕಾಗುತ್ತೆ. ನಂತರ ಗಂಡ ಹೆಂಡತಿಯ ಜಂಟಿ ಅಕೌಂಟ್ ಪಾಸ್ ಬುಕ್ ಬೇಕಾಗುತ್ತದೆ. ಈಗ ಹೇಳು ತಕ್ಕಂತ ದಾಖಲಾತಿಗಳೆಲ್ಲ ನೀವು ಅಟ್ಯಾಚ್ ಮಾಡಿ ಬಿಟ್ಟು ನಿಮ್ಮ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಆ ಒಂದು ಅರ್ಜಿಯನ್ನು ಕೊಟ್ಟಾಗ ಅವರು ಮೂರರಿಂದ ಆರು ತಿಂಗಳ ಒಳಗಾಗಿ ನಿಮ್ಮ ಜಂಟಿ ಅಕೌಂಟ್ಗೆ ಸರ್ಕಾರದಿಂದ ಬರುವಂತಹ ₹50000 ನಿಮ್ಮ ಅಕೌಂಟ್‌ಗೆ ಜಮಾ ಮಾಡುತ್ತಾರೆ.

ಇನ್ನ ಸರಳ ವಿವಾಹ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಅಂತ ಅಂದ್ರೆ ಅವರು ಮದುವೆ ಒಂದು ವರ್ಷದೊಳಗೆ ಆಗಿರಬೇಕಾಗುತ್ತೆ. ಒಂದು ವರ್ಷದ ಮೇಲೆ ದಾಟಿದ್ರೆ ಈ ಒಂದು ಯೋಜನೆಯ ಲಾಭ ಸಿಗುವುದಿಲ್ಲ. ಒಂದು ವರ್ಷದೊಳಗಡೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ. ಹುಡುಗ ಹುಡುಗಿ ಬಂದು ಬಿಟ್ಟು ಪರಿಶಿಷ್ಟ ಜಾತಿಗೆ ಎಸ್ ಸಿ ಕ್ಯಾಟಗರಿಗೆ ಸೇರಿದವರು ಮಾತ್ರ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಗಾಗಿ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *