ಬೆಳಗ್ಗೆ ಎದ್ದು ಅಡುಗೆ ಮಾಡಿ ನಂತರ ಕೃಷಿ ಕೆಲಸದಲ್ಲಿ ಎಲ್ಲರಂತೆ ಸಮನಾಗಿ ಕೆಲಸ ಮಾಡುವ ಮಹಿಳೆಯರು ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ಅನ್ನೋದನ್ನು ಒಪ್ಪಿಕೊಳ್ಳಬೇಕಾದ ಸತ್ಯ ಈ ಮಹಿಳೆಯೂ ಹಾಗೆ ಕುಟುಂಬದ ಪರಿಸ್ಥಿತಿ ತುಂಬಾ ಕೆಟ್ಟ ಸ್ಥಿತಿಗೆ ತಲುಪಿದಾಗ ಇವರ ಒಂದು ಆಲೋಚನೆ ಇವತ್ತು ತಿಂಗಳಿಗೆ 1,00,000 ದುಡಿಯುವಂತೆ ಮಾಡಿದೆ. ಅಷ್ಟಕ್ಕೂ ಇವರು ಕೈಗೊಂಡ ನಿರ್ಧಾರಗಳು ಎಂದು ನೋಡೋಣ ಬನ್ನಿ. ಇವರ ಹೆಸರು ಬೀನಾ ದೇವಿ ಬಿಹಾರ ರಾಜ್ಯದ ಇವರು ಎಲ್ಲರಂತೆ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟರು. ವ್ಯವಸಾಯ ಮಾಡಿ ಬದುಕುತ್ತಿತ್ತು. ಗಂಡನ ಕುಟುಂಬ ದುಡಿದ ಹಣ ತಿನ್ನುವುದಕ್ಕೆ ಸಾಕಾಗುತ್ತಿತ್ತು.

ಬೀನಾ ದೇವಿಗೆ ಮಕ್ಕಳಾದ ಮೇಲೆ ಇಲ್ಲಿ ಅವರ ಜೀವನ ಕೂಡ ನನ್ನಂತೆ ಆಗಬಾರದು. ಅವರಿಗೆ ಉತ್ತಮ ಜೀವನ ರೂಪಿಸಬೇಕು ಅನ್ನೋ ಆಲೋಚನೆ ಬೀನಾ ದೇವಿ ಅವರ ಮನಸ್ಸಲ್ಲಿ ಮೂಡಿತು. ಅದೇ ಸಮಯಕ್ಕೆ ವ್ಯವಸ್ಥಿತ ವ್ಯವಸಾಯ ಪದ್ಧತಿಯನ್ನು ಮಾಡುವುದೇ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಕೊಡಲಾಗುತ್ತಿತ್ತು. ಇದರ ಬಗ್ಗೆ ಯಾವುದೋ ಒಂದು ಜಾಹಿರಾತುದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಬೀನಾ ದೇವಿ ಅವರಿಗೆ ಅಣಬೆ ಹಾಗೂ ಸಹಜ ಪದ್ಧತಿಯಲ್ಲಿ ವ್ಯವಸಾಯ ಮಾಡುವ ಬಗ್ಗೆ ಆಸಕ್ತಿ ಬೆಳೆಯಿತು. ಅದರ ಜೊತೆ ಟ್ರೈನಿಂಗ್ ನಲ್ಲಿ ಹೇಗೆ ಅಣಬೆ ಬೆಳೆಯಬೇಕು ಎಂದು ಹೇಳಿಕೊಟ್ಟರು.

ಕೊನೆಗೂ ಕುಟುಂಬ ಪದ್ದತಿಗಳನ್ನು ದಾಟಿ ಅಣಬೆ ಬೆಳೆಯುವುದಕ್ಕೆ ಮುಂದಾದ ಬೀನಾ ದೇವಿ ಅವರು ಮನೆಯ ಪಕ್ಕದಲ್ಲಿದ್ದ ಗುಡಿಸಲಿನಲ್ಲಿ ಅಣಬೆ ಕೃಷಿ ಆರಂಭಿಸಿ ಮೊದಲಿಗೆ ಒಂದು ಬೆಳೆದರು. ಆಗ ಬೀನಾ ದೇವಿ ಅವರಿಗೆ ಧೈರ್ಯ ಬಂತು. ನಂತರ ನೂರಾರು ಕೆಜಿ ಅಣಬೆ ಬೆಳೆಯಲು ಆರಂಭಿಸಿದ ಇವರು ಹತ್ತಿರದ ಅಂಗಡಿ ಹಾಗು ತಮ್ಮ ಮನೆಯ ಮಂದಿ ಅಣಬೆ ಮಾರಾಟ ಮಾಡಲು ಮುಂದಾದರು.ಅದರ ಜೊತೆ ತಮಗೆ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಸಹಜ ಪದ್ಧತಿಯಲ್ಲಿ ವ್ಯವಸಾಯ ಕೂಡ ಆರಂಭಿಸಿದರು. ಕೊನೆಗೂ ಬೀನಾ ದೇವಿ ಅವರು ಇದರಲ್ಲಿ ಯಶಸ್ಸು ಗಳಿಸಿದರು. ಈಗ ಅಣಬೆ ಹಾಗೂ ಸಹಜ ಕೃಷಿಯಿಂದ ತಿಂಗಳಿಗೆ ಸುಮಾರು 1,00,000 ಲಾಭ ಗಳಿಸುತ್ತಿದ್ದಾರೆ.

ತಮ್ಮ ಮಕ್ಕಳಿಗೆ ಈಗ ಉನ್ನತ ವಿದ್ಯಾಭ್ಯಾಸ ಕೊಡಿಸುತ್ತಿರುವ ಬೀನಾ ದೇವಿ ಅವರು ಸುತ್ತಮುತ್ತ ಹಳ್ಳಿಯ ಮಹಿಳೆಯರಿಗೂ ಅಣಬೆ ಕೃಷಿಯನ್ನು ಕಳಿಸಿಕೊಡುತ್ತಿದ್ದಾರೆ.ನಿಜ ಹೇಳ್ಬೇಕು ಅಂದ್ರೆನಿಗೆ ಈಗ ಬಾರಿ ಬೇಡಿಕೆ ಇದೆ. ಹಾಗೆ ಇದನ್ನು ಬೆಳೆಯುವುದು ಅಷ್ಟು ಕಷ್ಟದ ಕೆಲಸವೇನೂ ಅಲ್ಲ. ಬೆಂಗಳೂರಿನ ಹೆಸರಘಟ್ಟ ಬಳಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇದೆ. ಇಲ್ಲಿ ಅಣಬೆ ಬೆಳೆಯುವುದು ಹೇಗೆ ಎಂದು ಟ್ರೈನಿಂಗ್ ಕೊಟ್ಟು ಅದಕ್ಕೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಹಾಗಾಗಿ ಒಮ್ಮೆ ವೀಕ್ಷಣೆ ಮಾಡಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಿ.

Leave a Reply

Your email address will not be published. Required fields are marked *