ಎಲ್ಲರಿಗೂ ಇಂಧನ ಇಲಾಖೆಯಿಂದ ರೈತರಿಗೆ ಸಿಹಿ ಸುದ್ದಿಯನ್ನ ನೀಡಿದೆ.ರೈತರಿಗೆ ಸೌರ ಪಂಪ್‌ಸೆಟ್ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಿಂದ ರೈತರಿಗೆ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಸೋಲಾರ್ ಪಂಪ್‌ಸೆಟ್ ಯೋಜನೆಗೆ ಇದಕ್ಕೆ ಕುಸುಮ್ ಬಿ ಅಂತ ಕೂಡ ಕರೀತಾರೆ.2024 ಇಪ್ಪತೈದು ನೇ ಸಾಲಿನಲ್ಲಿ 40,000 1000 ಕೃಷಿ ಪಂಪ್ ಸೆಟ್ ಅಳವಡಿಸುವ ಗುರಿಯನ್ನು ಹೊಂದಿದೆ ಮತ್ತು ಮೂರು ರಿಂದ 10 ರವರೆಗಿನ ಒಂದು ಕೊಳವೆ ಬಾವಿಯಿಂದ ನೀರನ್ನು ಎತ್ತಕೊಂಡು ಪಂಪ್‌ಸೆಟ್‌ಗಳಿಗೆ ಸಹಾಯದ ಮೂಲಕ ಅಂದ್ರೆ ಸಬ್ಸಿಡಿ ಮೂಲಕ ಈ ಒಂದು ನಿಮಗೆ ಸೌರ ಪಂಪ್‌ಸೆಟ್ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಸಂಪೂರ್ಣವಾದ ಮಾಹಿತಿಯನ್ನು ಕೊಡ್ತಾ ಹೋಗ್ತೀನಿ.

ರೈತರಿಗೆ ಆರ್ಥಿಕ ಸಮಸ್ಯೆವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೇಕಡಾ 30 ರಷ್ಟು ಸಬ್ಸಿಡಿಯಲ್ಲಿ ಒಂದು ಸೌರ ಪಂಪ್‌ಸೆಟ್ ಅನ್ನ ರೈತರಿಗೆ ಕೊಡೋದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂಧನ ಇಲಾಖೆಯಿಂದ. ಇದು ಪ್ರಕಟಣೆ ಕೊಟ್ಟಿರುವುದು ಕೇಂದ್ರ ಸರ್ಕಾರದ ಶೇಕಡ 30 ರಷ್ಟು. ನಿಮಗೆ ಸಬ್ಸಿಡಿ ಬರುತ್ತೆ.ಕೇವಲ ರೈತರು 20% ನೀವು ಭರಿಸಿದರೆ ಸಾಕು ನಿಮಗೆ ಒಂದು ಸೌರ ಪಂಪ್‌ಸೆಟ್ ನಿಮಗೆ ಪಡೆಯಬಹುದು ಅಂತ ಕೊಟ್ಟಿದಾರೆ.ಒಂದು ಸೌರ ಪಂಪ್‌ಸೆಟ್ ಅರ್ಜಿಯನ್ನು ಆಹ್ವಾನಿಸಲಾಗಿದೆ.ಈ ರೀತಿಯಾಗಿ ನಿಮಗೆ ಸೌರಫಲಕದಿಂದ ಹೊಲದಲ್ಲಿ ಜಮೀನಿನಲ್ಲಿ ಪಂಪ್‌ಸೆಟ್ಗೆ ನೀರು ಬರುವುದಕ್ಕೆ ಅನುಕೂಲವಾಗುತ್ತೆ

ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರದಿಂದ ಒಂದು ವೆಬ್ಸೈಟ್ ಕೂಡ ಇದೆ ಹಾಗಾಗಿ ಸೂಕ್ಷ್ಮವಾಗಿ ಇದನ್ನು ನೀವು ಬಳಸಬೇಕು ಏಕೆಂದರೆ ಕೆಲವೊಮ್ಮೆ ಜಾಲತಾಣಗಳಿಂದ ನಿಮ್ಮ ಮೊಬೈಲ್ ಫೋನಿಗೆ ಹಾನಿಯಾಗಬಹುದು. ಈ ಯೋಜನೆಯ ಕೆಲವೊಂದು ನಿಯಮಗಳು ಇಂತಿವೆ ನೋಡಿ ರೈತರಿಗೆ ಸೌರ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ 2024.ರೈತರುಗಳಿಗೆ ಈ ಕೆಳಕಂಡ ಆದ್ಯತೆಗಳ ಮೇರೆಗೆ ಸೌರ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸಲಾಗುವುದು.

ಆದ್ಯತೆ – 1 ರೈತರು ಈಗಾಗಲೇ ಅನಧಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಯೋಜನೆಯಡಿಯಲ್ಲಿ ರೂ. 10,000/- ಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ ತೆರೆದ ಬಾವಿಗಳು ಪರಿವರ್ಥಕ ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಮೊದಲ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆದರದ ಮೇಲೆ ಅಳವಡಿಸಲಾಗುವುದು.

ಆದ್ಯತೆ – 2 ರೈತರು ಈಗಾಗಲೇ ಅನಧಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಯೋಜನೆಯಡಿಯಲ್ಲಿ ರೂ. 50/- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ ತೆರೆದ ಬಾವಿಗಳು ಪರಿವರ್ಥಕ ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಎರಡನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆದ್ಯತೆಯ ಮೇಲೆ ನೀಡಲಾಗುವುದು.

ಆದ್ಯತೆ 3 ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರವಿದ್ದು ಮತ್ತು ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ಮೂರನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ ಅಳವಡಿಸಲಾಗುವುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *