ಮನುಷ್ಯನಲ್ಲಿ ಆತ್ಮವಿಶ್ವಾಸ ಹೊಂದಿದ್ದರೆ ಸಾಕು ಅಂತಹ ಕಷ್ಟಗಳು ಬಂದರೂ ಕೂಡ ಅವುಗಳನ್ನು ಎದುರಿಸಬಹುದು ಹಾಗೆ ಜ್ಞಾನ ಬಂಡಾರ ಒಂದು ಇದ್ದರೆ ಸಾಕು . ಇಂತಹ ಪರಿಸ್ಥಿತಿಯಿಂದ ನಾವು ಆರ್ಥಿಕವಾಗಿ ಸ್ವಂತ ನಮ್ಮ ಕಾಲಿನ ಮೇಲೆ ನಿಂತು ಕೊಳ್ಳಬಹುದು. ಇವತ್ತಿನ ಮಾಹಿತಿ ಕೂಡ ಅದೇ ರೀತಿ ಆಗಿದೆ ಯಾವ ರೀತಿಯಿಂದಾಗಿ ಒಬ್ಬ ರೈತ ಕೇವಲ ಯೂಟ್ಯೂಬ್ ಸಹಾಯದಿಂದ ಕಾಶ್ಮೀರಿ ಸೇಬನ್ನು ಬೆಳೆಯುತ್ತಿದ್ದಾನೆ ಎಂದು ಬೆಂಗಳೂರಿನಿಂದ ಸುಮಾರು 42 ಕಿ.ಮೀ ದೂರದಲ್ಲಿರುವ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಬಸವರಾಜ ವಾಲ್ಮೀಕಿ ಇವರು ತಾವು ಯೂಟ್ಯೂಬ್ ನಿಂದ ಕಾಶ್ಮೀರಿ ಸೇಬನ್ನು ಹೇಗೆ ಬೆಳೆಯಬೇಕೆಂದು ನೋಡಿಕೊಂಡು ನಂತರ ತಮ್ಮ ಹೊಲದಲ್ಲಿ ಬೆಳೆಸುತ್ತಿದ್ದಾರೆ.

ಮೊದಲಿಗೆ ಇವರಿಗೆ ಯಾವುದೇ ರೀತಿಯಿಂದ ಇದರ ಬಗ್ಗೆ ಜ್ಞಾನ ಇರಲಿಲ್ಲ ನಂತರ ಇವರು ಕೃಷಿ ಇಲಾಖೆಗೆ ಹೋಗಿ ಸ್ವಲ್ಪ ಜ್ಞಾನವನ್ನು ತಿಳಿದುಕೊಂಡು ನಂತರ ಯೂಟ್ಯೂಬಿನಿಂದ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡರು. ನನ್ನ ಮೇಲೆ ನನಗೆ ನಂಬಿಕೆ ಇತ್ತು ಯಾವುದೇ ರೀತಿಯಿಂದ ನನಗೆ ಆರ್ಥಿಕವಾಗಿ ನಾಷ್ಟ ಆಗುವುದಿಲ್ಲ ಎಂಬ ಆತ್ಮವಿಶ್ವಾಸ ಇವರಿಗೆ ಇತ್ತು ಎದೆ ಆತ್ಮವಿಶ್ವಾಸದಿಂದ ಇವರು ಈಗ ಬಹಳಷ್ಟು ಹಣವನ್ನು ಗಳಿಸುತ್ತಿದ್ದಾರೆ ಇವರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಬಸವರಾಜ್ ಅವರು 442 ಗಿಡಗಳಿಂದ ಕೊಯ್ಲು ಮಾಡಿದ ಸುಮಾರು 800 ಕೆಜಿ ಸೇಬುಗಳನ್ನು 120 ಕೆಜಿಗೆ ಮಾರಾಟ ಮಾಡಿದ್ದಾರೆ. ಇನ್ನೆರಡು ವಾರಗಳಲ್ಲಿ ಇನ್ನೂ 400 500 ಕೆಜಿ ಸೇಬುಗಳು ಈಗಾಗಲೇ ಮಾಡುವುದಕ್ಕೆ ಸಿದ್ಧವಾಗಿವೆ. ಪ್ರತಿ ಮರವು ಐದು ಕೆಜಿ ಸೇಬುಗಳನ್ನು ಉತ್ಪಾದಿಸುತ್ತಿದೆ ಎಂದು ಅವರು ಅಂದಾಜಿಸಿದ್ದಾರೆ.

ಇದೆಲ್ಲವೂ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾಯಿತು. ತರಕಾರಿಗಳನ್ನು ಬೆಳೆಸಿದ ಬಸವರಾಜ್, ಕಾಶ್ಮೀರಿ ಸೇಬಿನ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಿದರು ಮತ್ತು ಅದು ಅವರಲ್ಲಿ ಒಂದು ಆಲೋಚನೆಯನ್ನು ಹುಟ್ಟು ಹಾಕಿತ್ತು ಅವರ ಹಳ್ಳಿಯಲ್ಲಿ ಹಣ್ಣನ್ನು ಏಕೆ ಬೆಳೆಯಬಾರದು. ಕೇವಲ ಏಕೆ ಕಾಶ್ಮೀರದಲ್ಲಿ ಇವನು ಬೆಳೆಯಬೇಕು ನಾನು ಒಮ್ಮೆ ಪ್ರಯತ್ನ ಮಾಡಿ ನೋಡೋಣ ನಷ್ಟವಾದರೆ ನಂತರ ನೋಡಿಕೊಳ್ಳೋಣ ಎಂಬ ಆತ್ಮವಿಶ್ವಾಸದಿಂದ ಈ ಒಂದು ನಿರ್ಧಾರವನ್ನು ತೆಗೆದುಕೊಂಡರು ಪ್ರಾಯೋಗಿಕವಾಗಿ ಸೇಬು ಬೆಳೆದ ರೈತರನ್ನು ತಲುಪಿದರು ಮತ್ತು ಅಂತಿಮವಾಗಿ ಮೂಲಭೂತ ಅಂಶಗಳನ್ನು ತಿಳಿಯಲು ಕಾಶ್ಮೀರದ ತಜ್ಞರನ್ನು ಸಂಪರ್ಕಿಸಿದರು.

ಸೇಬು ಕೃಷಿಯ ಬಗ್ಗೆ ಇರುವ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಬಸವರಾಜ್ ಯೂಟ್ಯೂಬ್ ಸಹಾಯವನ್ನು ಪಡೆದುಕೊಂಡರು ನಮಗೆ ಗೊತ್ತಿರುವ ಹಾಗೆ ಈ youtube ನಿಂದ ನಾವು ಇಂಚಿಂಚು ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು ನಿಮಗೆ ಯಾವುದೇ ರೀತಿಯಿಂದ ಸಮಸ್ಯೆ ಇದ್ದರೂ ಕೂಡ ಈ ಒಂದು youtube ಸಾಕು ಎಲ್ಲ ರೀತಿಯಿಂದ ನಾವು ಪರಿಹಾರವನ್ನು ಕಂಡುಕೊಳ್ಳಬಹುದು. ಈ ರೀತಿಯಾಗಿ ಬಸವರಾಜ್ ಕೂಡ ಈ ಒಂದು ವಿಧಾನಗಳನ್ನು ಯೂಟ್ಯೂಬ್ ನಿಂದ ಸಂಪೂರ್ಣವಾಗಿ ತಿಳಿದುಕೊಂಡರು. ಆತ್ಮ ವಿಶ್ವಾಸ ಹೊಂದಿದ್ದರೆ ಸಾಕು ಯಾವುದೇ ಒಂದು ಕೆಲಸಗಳನ್ನು ಮಾಡಬಹುದು ಎಂಬುದಕ್ಕೆ ಈ ರೈತನನ್ನು ನಾವು ಮಾರ್ಗದರ್ಶನವಾಗಿ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *