ನಮಸ್ತೆ ಪ್ರಿಯ ಓದುಗರೇ, ಇಡೀ ಜಗತ್ತನ್ನು ಪೋರೆಯುತ್ತೀರುವ ಆದಿಶಕ್ತಿ ಜಗನ್ಮಾತೆಯು ಭೂಮಿಯ ಮೇಲೆ ಬೇರೆ ಬೇರೆ ಹೆಸರುಗಳಿಂದ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಳೆ. ಅಮ್ಮಾ ಅಂತ ಕೋಗಿದ್ರೆ ಸಾಕು ಆ ತಾಯಿ ಸಂತುಷ್ಟ ಆಗುತ್ತಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಕಷ್ಟಗಳಿಗೆ ಮುಕ್ತಿಯನ್ನು ದಯಪಾಲಿಸುವ ಚಂದ್ಕೂರಿನ ದುರ್ಗಾಪರಮೇಶ್ವರಿ ಅಮ್ಮನವರನ್ನು ದರ್ಶನ ಮಾಡಿ ಪುನೀತರಾಗೊಣ. ಒಂದು ಕಡೆ ಶಿಖರ ಆಕಾರದ ಕಲ್ಲು ಬಂಡೆ ಇನ್ನೊಂದು ಕಡೆ ಹಚ್ಚ ಹಸುರಿನ ವನಸಿರಿಯ ಪ್ರಶಾಂತ ವಾತಾವರಣ. ಇನ್ನೊಂದೆಡೆ ಮುಗಿಲನ್ನೆ ಚುಂಬಿಸುತ್ತಿದೆ ಏನೋ ಎಂದು ಕಾಣಿಸುವ ಬೆಳ್ಳಿ ಮೋಡಗಳು. ಇಂತಹ ಪ್ರಕೃತಿಯ ರುದ್ರ ರಮಣೀಯ ಸೌಂದರ್ಯವನ್ನು ತನ್ನ ಒಡಲಲ್ಲಿ ಹುದುಗಿಸಿ ಇಟ್ಟುಕೊಂಡೂ ಚಂದದ ಊರು ಎಂದೇ ಖ್ಯಾತಿ ಪಡೆದ ಚಂದ್ಕೂರಿನಲ್ಲಿ ತಾಯಿ ದುರ್ಗಾಪರಮೇಶ್ವರಿಯು ನೆಲೆ ನಿಂತಿದ್ದು, ಇಲ್ಲಿನ ಗರ್ಭಗುಡಿಯಲ್ಲಿ ಇರುವ ಅಮ್ಮನವರ ವಿಗ್ರಹವು ಸುಮಾರು 1200 ವರ್ಷಗಳಷ್ಟು ಪುರಾತನವಾದದ್ದು ಎಂದು ಹೇಳಲಾಗುತ್ತದೆ. ವಿಜಯನಗರ ಸಾಮ್ರಾಜ್ಯ ಶಿಲಾ ಶಾಸನಗಳಲ್ಲಿ ಈ ದೇವಸ್ಥಾನದಲ್ಲಿ ನೋಡಬಹುದು. ವಿಜಯನಗರದ ಅರಸರು ಈ ದೇವಿಯನ್ನು ಆರಾಧಿಸುತ್ತಿದ್ದರು ಎಂದು ಇಲ್ಲಿನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಂತ ಪುರಾತನವಾದ ಈ ಆಲಯವನ್ನು ಹಲವಾರು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಿ ಬ್ರಹ್ಮ ಕಳಶೋತ್ಸವ ನಡೆಸಲಾಗಿದೆ. ಹೆಂಚಿನ ಛಾವಣಿ ಇಂದ ಕೂಡಿರುವ ಈ ಆಲಯದ ಗರ್ಭ ಗುಡಿಯಲ್ಲಿ ಇರುವ ಅಮ್ಮನ ವಿಗ್ರಹವು 3.5 ಅಡಿ ಇದ್ದು, ತಾಯಿಯ ಶಿರಸ್ಸಿನಲ್ಲಿ ಕರಂಡಕ ಮುಕುಟ ಇದೆ. ಚತುರ್ಭುಜ ಹೊಂದಿರುವ ದೇವಿಯು ಕೈಯಲ್ಲಿ ಶಂಖ ಚಕ್ರ ಕಟಿ ಹಸ್ತವನ್ನು ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ವಿವಾಹ ವಿಳಂಬ ಸಮಸ್ಯೆ, ಸಂತಾನ ಸಮಸ್ಯೆ ಇದ್ದರೆ, ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೋದ್ರೆ ಸಮಸ್ಯೆಗಳು ಎಲ್ಲವೂ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಈ ತಾಯಿಯನ್ನು ನಂಬಿದರೆ ಬದುಕಿನ ಎಲ್ಲ ಸಂಕಷ್ಟಗಳು ದೂರ ಆಗುತ್ತೆ ಎನ್ನುವುದು ಈ ಅಮ್ಮನವರನ್ನು ನಂಬಿ ಬದುಕಿನಲ್ಲಿ ಒಳಿತನ್ನು ಪಡೆದ ಭಕ್ತ ಜನರ ಮನದ ಮಾತಾಗಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಬಹಳ ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಯಾವುದೇ ಹೆಣ್ಣು ಮಕ್ಕಳ ವಿವಾಹ ನಿಶ್ಚಯ ಆದ್ರೆ ಆ ಹೆಣ್ಣು ಮಗಳು ಇಲ್ಲಿನ ಬಂಡೆ ಬಳಿ ಬಂದು ಹರಿವಾಣದಲ್ಲಿ ತಾಂಬೂಲ ಇಟ್ಟು ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ತಾಯಿಯು ಹರಿವಾಣದ ತುಂಬಾ ಬಂಗಾರವನ್ನು ನೀಡುತ್ತಿದ್ದಳು ಎಂದು ಹೇಳಲಾಗುತ್ತದೆ.

ಮದುವೆ ಮುಗಿದ ಬಳಿಕ ಪುನಃ ಆ ಬಂಗಾರವನ್ನು ದೇವಿಗೆ ಒಪ್ಪಿಸಬೇಕಿತ್ತು. ಆದ್ರೆ ಇಂದಿನ ಸ್ತ್ರೀ ಇಬ್ಬಳು ತನ್ನ ಮೂಗುತಿಯನ್ನು ಹರಿವಾಣದಲ್ಲಿ ಇಟ್ಟು ಅಮ್ಮನವರು ನೀಡಿದ ಮೂಗುತಿ ಧರಿಸಿದ ಮೇಲೆ ತಾಯಿಯು ಕೋಪಗೊಂಡು ಬಂಗಾರ ನೀಡುವುದನ್ನು ನಿಲ್ಲಿಸಿದಳು ಎಂದು ಕಥೆಗಳು ಈ ದೇಗುಲದ ಕುರಿತಾಗಿ ಕೇಳಿ ಬರುತ್ತಿದೆ. ಅತ್ಯಂತ ಶಕ್ತಿಶಾಲಿ ಆದ ಇಲ್ಲಿನ ದುರ್ಗಾ ಪರಮೇಶ್ವರಿಗೆ ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತೆ. ಈ ದೇಗುಲವನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ದೇವಿಗೆ ಆಭರಣ ಸಮರ್ಪಣಾ ಸೇವೆ, ಕುಂಕುಮಾರ್ಚನೆ, ಅಲಂಕಾರ ಸೇವೆ ಹಣ್ಣು ಕಾಯಿ ಸೇವೆಗಳನ್ನು ಮಾಡಿಸಬಹುದು. ಗಡಾಯಿ ಕಲ್ಲಿನ ಬಳಿ ಇರುವ ನಡಾಯಿ ಮತ್ತು ಲಾಲಿಲ ಗ್ರಾಮ ದೇವತೆ ಆಗಿ ತನ್ನ ಬಳಿ ಬರುವ ಭಕ್ತರ ಸರ್ವ ಸಂಕಷ್ಟಗಳನ್ನು ಪರಿಹರಿಸುವ ಜಗನ್ಮಾತೆ ಆಗಿ ಅಮ್ಮನವರು ಇಲ್ಲಿ ದುರ್ಗಾ ಪರಮೇಶ್ವರಿ ರೂಪದಲ್ಲಿ ನೆಲೆ ನಿಂತಿದ್ದು, ತಾಯಿ ನೆಲೆಸಿದ ಈ ಪುಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಚಂದ್ಕೂರಿನಲ್ಲಿದೆ. ಈ ದೇಗುಲವು ಬೆಂಗಳೂರಿನಿಂದ 313 ಕಿಮೀ, ಮಂಗಳೂರಿನಿಂದ 65 ಕಿಮೀ, ಪುತ್ತೂರಿನಿಂದ 39 ಕಿಮೀ, ಬೆಳ್ತಂಗಡಿ ಇಂದ 6 ಕಿಮೀ, ಗಾಡಾಯಿ ಕಲ್ಲಿನಿಂದ 2.3 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ದಕ್ಷಿಣ ಕನ್ನಡ ಜಿಲ್ಲೆ ಗೆ ಪ್ರವಾಸ ಕೈಗೊಂಡಾಗ ಈ ಕ್ಷೇತ್ರಕ್ಕೆ ಹೋಗಿ ತಾಯಿ ಆಶೀರ್ವಾದ ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *