ನಮಸ್ತೆ ಪ್ರಿಯ ಮಿತ್ರರೇ ಆರೋಗ್ಯವೇ ಭಾಗ್ಯ ಅನ್ನುವ ಸುಭಾಷಿತ ಇದೆ ಮಿತ್ರರೇ. ಆರೋಗ್ಯ ಚೆನ್ನಾಗಿ ಇದ್ದರೆ ನಾವು, ಹೊರತು ನಮ್ಮಿಂದ ಆರೋಗ್ಯವಲ್ಲ ಅನ್ನುವ ಮಾತನ್ನು ನಾವು ಚೆನ್ನಾಗಿ ಅರಿತುಕೊಂಡಿರಬೇಕು. ಆರೋಗ್ಯ ಅನ್ನುವುದು ದೇವರು ಕೊಟ್ಟ ವರಗಳಲ್ಲಿ ಒಂದಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಆದ್ದರಿಂದ ಈ ವರವನ್ನು ನಾವು ತುಂಬಾನೇ ಕಾಳಜಿಯಿಂದ ಜೋಪಾನವಾಗಿ ಕಾಪಾಡಿಕೊಂಡು ಹೋಗಬೇಕು. ಉತ್ತಮವಾದ ಆರೋಗ್ಯಕ್ಕಾಗಿ ನಾವು ನಿತ್ಯವೂ ಆಹಾರವನ್ನು ಸೇವಿಸುತ್ತೇವೆ.

ಅದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಹಾಗೆಯೇ ಅನಾವಶ್ಯಕವಾದ ಅಂಶಗಳನ್ನು ನಾವು ಸೇವಿಸುವ ಆಹಾರವು ಒಳಗೊಂಡಿರುತ್ತದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಹುರುಳಿ ಕಾಳುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ. ಹುರುಳಿ ಕಾಳು ಇದನ್ನು ದ್ವಿದಳಧಾನ್ಯ ಅಂತ ಪರಿಗಣಿಸಿದ್ದು ಇದರಲ್ಲಿ ಹೇರಳವಾದ ವಿಟಮಿನ್ ಪ್ರೊಟೀನ್ ಕ್ಯಾಲ್ಸಿಯಂ ಜೀವಸತ್ವಗಳು ಒಳಗೊಂಡಿರುತ್ತವೆ. ಇದು ಪೌಷ್ಟಿಕ ಅಂಶಗಳನ್ನು ಹೊಂದಿದ್ದು ಇದನ್ನು ಆಯುರ್ವೇದದಲ್ಲಿ ತೂಕವನ್ನು ಇಳಿಸಿಕೊಳ್ಳಲು ಈ ಹುರುಳಿ ಕಾಳುಗಳು ಸೂಕ್ತ ಅಂತ ಸಾಬೀತು ಪಡಿಸಲಾಗಿದೆ.

ಅಷ್ಟೇ ಅಲ್ಲದೇ ದೇಹದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ ಮತ್ತು ಮಧುಮೇಹ ರೋಗವನ್ನು ನಿಯಂತ್ರಿಸಲು ಈ ಹುರುಳಿ ಕಾಳು ಸಹಾಯ ಮಾಡುವುದರ ಜೊತೆಗೆ ನ್ಯುಮಿರೋ ದೌರ್ಬಲ್ಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಮತ್ತು ಈ ಹುರುಳಿ ಕಾಳು ತಿನ್ನುವುದರಿಂದ ಕಾಮ ಉತ್ತೇಜಕವಾಗಿ ಕೆಲಸ ಮಾಡುತ್ತಿದ್ದು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಅಷ್ಟೇ ಅಲ್ಲದೇ ಪಿಸಿಒಡಿ ಮತ್ತು ಪಿಸಿಓಎಸ್ ಮತ್ತು ಕಫದ ಎಲ್ಲ ಸಮಸ್ಯೆಗಳಿಗೆ ಈ ಹುರುಳಿ ಕಾಳು ಸೇವನೆ ಸೂಕ್ತ. ರಾತ್ರಿ ಹೊತ್ತು ಹುರುಳಿ ಕಾಳು ನೆನೆಸಿ ಬೆಳಿಗ್ಗೆ ಅವುಗಳನ್ನು ತಿನ್ನಬೇಕು ಇದರಿಂದ ಕಿಡ್ನಿಯಲ್ಲಿ ಆಗಿರುವ ಕಲ್ಲುಗಳು ಕರಗುತ್ತವೆ. ನಿಮಗೆ ಗೊತ್ತೇ, ಸ್ನೇಹಿತರೇ, ಈ ಧಾನ್ಯವನ್ನು ಇಂಗ್ಲಿಷ್ ನಲ್ಲಿ ಹೋರ್ಸ್ ಗ್ರಾಂ ಎಂದು ಕರೆಯುತ್ತಾರೆ. ಏಕೆ ಈ ಹೆಸರಿನಿಂದ ಇದನ್ನು ಗುರುತಿಸುತ್ತಾರೆ ಅಂದರೆ ಈ ದ್ವಿದಳ ಧಾನ್ಯವನ್ನು ಹೆಚ್ಚಾಗಿ ಹಸುಗಳಿಗೆ ಮತ್ತು ಕುದುರೆಗಳಿಗೆ ಆಹಾರವಾಗಿ ನೀಡುತ್ತಾರೆ ಆದ ಕಾರಣದಿಂದ ಇದನ್ನು ಈ ಹೆಸರಿನಿಂದ ಕರೆಯಲ್ಪಡುವುದರ ಜೊತೆಗೆ ಕನ್ನಡ ಭಾಷೆಯಲ್ಲಿ ಇದನ್ನು ಹುರುಳಿ ಅಂತ ಕರೆಯುತ್ತಾರೆ.

ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಹುರುಳಿಯನ್ನು ವ್ಯಾಪಕವಾಗಿ ಬೆಳೆದು ಬಳಸುತ್ತಾರೆ. ಹಾಗಾದರೆ ಬನ್ನಿ ಇದರಲ್ಲಿ ಯಾವೆಲ್ಲ ಅಂಶಗಳು ಅಡಗಿರುತ್ತವೆ ಅಂತ ನೋಡೋಣ. ಎಲ್ಲ ದ್ವಿದಳ ಧಾನ್ಯಗಳಲ್ಲಿಯೇ ಅದು ಅತಿ ಹೆಚ್ಚು ಕ್ಯಾಲ್ಸಿಯಂ ಮತ್ತು ಅತಿ ಹೆಚ್ಚು ಸಸ್ಯಗಳ ಮೂಲದ ಪ್ರೊಟಿನ್ ಅನ್ನು ಹಾಗೆಯೇ ಕಡಿಮೆ ಕೊಬ್ಬು ಹಾಗೂ ಹೆಚ್ಚು ಶರ್ಕರ ಪಿಷ್ಟದಿಂದ ಕೂಡಿದೆ.

ಕಡಿಮೆ ಮೇದಸ್ಸು ಸ್ಥೂಲಕಾಯರಿಗೆ ಸೂಕ್ತ ಆಹಾರವಾಗಿದೆ. ಅಷ್ಟೇ ಅಲ್ಲದೇ ಇದರ ಬಗ್ಗೆ ಹೇಳುವುದಾದರೆ ಈ ಹುರುಳಿ ಕಾಳುಗಳನ್ನು ಅಡುಗೆ ಮಾಡಿಕೊಂಡು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹವು ನಿಶ್ಯಕ್ತಿ ಇಂದ ಕೂಡಿರಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹುರುಳಿ ಕಾಳು ಉಷ್ಣ ಪ್ರಕೃತಿಯನ್ನು ಹೊಂದಿದೆ. ಇದನ್ನು ಅಧಿಕ ಶೀತ ಉಳ್ಳ ದೇಹವನ್ನು ಹೊಂದಿರುವವರು ಬಳಕೆ ಮಾಡಿದರೆ ತುಂಬಾನೇ ಉತ್ತಮ.

ತೂಕವನ್ನು ಕಡಿಮೆ ಮಾಡಿಕೊಳ್ಳಲು ತುಂಬಾನೇ ಪ್ರಯತ್ನ ಮಾಡುತ್ತಿದ್ದರೆ ನಿತ್ಯವೂ ಹುರುಳಿ ಕಾಳು ಸೇವಿಸಿ ಇದರಿಂದ ನಿಮ್ಮ ತೂಕ ಕಡಿಮೆ ಆಗುತ್ತದೆ. ಇನ್ನೂ ಹೆಚ್ಚು ಬೊಜ್ಜು ಹೊಂದಿರುವ ಕಾರಣ ನ್ಯೂಮಿರೋ ದೌರ್ಬಲ್ಯದಿಂದ ಬಳಲುವ ಜನರಿಗೆ ಇದು ತುಂಬಾನೇ ಉಪಯುಕ್ತವಾಗಿದೆ. ಅಷ್ಟೇ ಅಲ್ಲದೆ ಗುಪ್ತಚರ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಗುಪ್ತಚರ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹುರುಳಿ ಕಾಳಿನಲ್ಲಿ ನಾರಿನ ಅಂಶ ಇದ್ದು ಇದು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೆಯೇ ಕರುಳಿನ ಚಲನೆಯನ್ನು ಸರಾಗವಾಗುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *