ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶ್ರೀ ರಾಮನವಮಿಯೂ ಒಂದು. ವಸಂತ ನವರಾತ್ರಿ ಹೊಸ ಸಂವತ್ಸರದ ಆದಿಯಿಂದಲೇ 9 ದಿನ ಆಂಜನೇಯನ ಗುಡಿಯಲ್ಲಿ, ಶ್ರೀರಾಮನ ದೇವಾಲಯಗಳಲ್ಲಿ ಹಾಗೂ ಶ್ರೀರಾಮ ಸೇವಾ ಸಮಿತಿಗಳು ವಸಂತ ನವರಾತ್ರಿ ಆಚರಿಸುತ್ತಾರೆ. ಹೀಗಾಗಿ ಹಬ್ಬದ ಪ್ರಯುಕ್ತ ಬೆಲ್ಲದ ಪಾನಕ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿ: ಬೆಲ್ಲದ ಪುಡಿ 3 ಚಮಚ, ಕತ್ತರಿಸಿದ ಕರ್ಬೂಜ ಹಣ್ಣು, ಒಂದು ಬೌಲ್ ಏಲಕ್ಕಿ ಪುಡಿ- ಸ್ವಲ್ಪ ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಮೊದಲಿಗೆ ಎರಡು ಗ್ಲಾಸ್ ನೀರನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಳ್ಳಿ ನಂತರ ಆ ನೀರಿಗೆ ಪುಡಿ ಮಾಡಿಕೊಂಡಿರುವ ಬೆಲ್ಲವನ್ನು ಹಾಕಿಕೊಳ್ಳಿ. ಬೆಲ್ಲ ಸಂಪೂರ್ಣವಾಗಿ ಕರಗಲಿ. ನೀರಿನಲ್ಲಿ ಬೆಲ್ಲ ಕರಗಿದ ಬಳಿಕ ಚಿಕ್ಕದಾಗಿ ಕತ್ತರಿಸಿಕೊಂಡ ಕರ್ಬೂಜ ಹಣ್ಣಿನ ತುಂಡುಗಳನ್ನು ಸೇರಿಸಿಕೊಳ್ಳಿ.ನಂತರ ಸ್ವಲ್ಪ ಏಲಕ್ಕಿ ಪುಡಿ ಮತ್ತು ಉಪ್ಪು ಮಿಕ್ಸ್ ಮಾಡಿಕೊಳ್ಳಬೇಕು. ಕತ್ತರಿಸಿದ ಕರ್ಬೂಜ ಹಣ್ಣನ್ನು ಸ್ವಲ್ಪ ಕಿವುಚಿಕೊಳ್ಳಬೇಕು. ರೆಡಿಯಾದ ಪಾನಕಕ್ಕೆ ಐಸ್ ಹಾಕಿಕೊಂಡು ಕುಡಿಯಬಹುದು.

Leave a Reply

Your email address will not be published. Required fields are marked *