ಭಾರತದ ಜತೆಗೆ ಇತರೆ ದೇಶಗಳಲ್ಲೂ ಸಹ ಪುರುಷರು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಸ್ಪರ್ಮ್ ಕೌಂಟ್ ಕಡಿಮೆ ಇರುವುದು. ಇದೇನು ಅನಾರೋಗ್ಯ ಸಮಸ್ಯೆ ಅಲ್ಲ. ಆದರೆ ಮಕ್ಕಳಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಸ್ಪರ್ಮ್ ಕೌಂಟ್ ಹೆಚ್ಚಿಸಲು ಸಾಕಷ್ಟು ರೀತಿಯ ಔಷಧಿಗಳು ಬಂದಿವೆ. ಆದರೆ ಸ್ಪರ್ಮ್ ಕೌಂಟ್‌ನ್ನು ಔಷಧಿಗಳಿಂದ ಅಷ್ಟೇ ಅಲ್ಲದೆ ಸಾಮಾನ್ಯ ಪದ್ಧತಿಗಳಲ್ಲೂ ಸಹ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ತಜ್ಞರು. ನಾವು ನಿತ್ಯ ಮಾಡುವ ಕೆಲಸಗಳಿಂದ ಈ ಸಮಸ್ಯೆ ಬರುತ್ತದೆ ಎಂದು ತಿಳಿದುಕೊಂಡ ವೈದ್ಯರು, ಆ ತಪ್ಪುಗಳನ್ನು ಮಾಡದಿದ್ದರೆ ಆ ಕೌಂಟ್ ಆಟೋಮ್ಯಾಟಿಕ್ ಆಗಿ ಹೆಚ್ಚಾಗುತ್ತದೆ ಎನ್ನುತ್ತಿದ್ದಾರೆ.

ನಾವು ಪ್ರತಿ ನಿತ್ಯ ತಿನ್ನುವ ಆಹಾರ, ನಾವು ಮಾಡುವ ಕೆಲಸದಿಂದ ಅನಾರೋಗ್ಯ ಸಮಸ್ಯೆಗಳು ಹೇಗೆ ಬರುತ್ತವೋ ಅದೇ ರೀತಿ ಈ ಕೌಂಟ್ ಸಹ ನಾವು ಮಾಡುವ ಕೆಲಸಗಳಿಂದ ಕಡಿಮೆಯಾಗುತ್ತದೆ. ಹಾಗಾಗಿ ಕೆಟ್ಟ ಅಭ್ಯಾಸಗಳಿಗೆ ದೂರ ಇರುವುದರ ಜತೆಗೆ, ಜಂಕ್ ಫುಡ್ ಹೆಚ್ಚು ತಿನ್ನದೆ, ಧೂಮಪಾನ ಮಾಡದಂತೆ ದೂರ ಇರಬೇಕು. ಇನ್ನು ಕಂಪ್ಯೂಟರ್ ಕೆಲಸ ಮಾಡುವವರು ಮುಖ್ಯವಾಗಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು, ಲ್ಯಾಪ್‌ಟಾಪ್‌ಗಳನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವವರು ಕೂಡಲೆ ಎಚ್ಚೆತ್ತುಕೊಳ್ಳಬೇಕು.

ಲ್ಯಾಪ್‍ಟಾಪನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದು ತುಂಬಾ ಅಪಾಯಕಾರಿ ಸಂಗತಿ. ಆ ಬಿಸಿಯ ಕಾರಣ ಸ್ಪರ್ಮ್‌ಗೆ ಹೊಡೆತ ಬೀಳುವ ಅವಕಾಶ ಇದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‌ಗಳಿಂದ ಸ್ವಲ್ಪ ದೂರ ಇದ್ದು ಕೆಲಸ ಮಾಡಿಕೊಳ್ಳಬೇಕು. ಇನ್ನು ಸ್ಫರ್ಮ್ ಕೌಂಟ್ ಹೆಚ್ಚಿಸಿಕೊಳ್ಳಲು ಯೋಗಾ ಒಳ್ಳೆಯದೆಂದು ತಜ್ಞರು ಹೇಳುತ್ತಿದ್ದಾರೆ. ಶಾಸ್ತ್ರೀಯವಾಗಿ ಸಹ ದೃಢಪಟ್ಟಿದ್ದಾಗಿ ಹೇಳುತ್ತಾರೆ. ಸ್ಪರ್ಮ್ ಕೌಂಟ್ ಹೆಚ್ಚಾಗಲು ನಿತ್ಯ ಯೋಗಾ ಮಾಡಿದರೆ ಒಳ್ಳೆಯ ಫಲಿತಾಂಶ ಇರುತ್ತದೆ ಎಂದು ವೈದ್ಯರು ಪ್ರಯೋಗಗಳನ್ನು ಮಾಡಿ ನಿರೂಪಿಸಿದ್ದಾರೆ. ಔಷಧಿಗಳ ಪ್ರಭಾವಕ್ಕಿಂತ ಸಹ ಹೆಚ್ಚಾಗಿ ಯೋಗಾ ಪ್ರಭಾವ ಇದೆ ಎನ್ನುತ್ತಿದ್ದಾರೆ.

ಯೋಗಾದಿಂದ ಕೇವಲ ಕೌಂಟ್ ಹೆಚ್ಚಾಗುವುದಷ್ಟೇ ಅಲ್ಲದೆ ಒತ್ತಡವನ್ನೂ ಜಯಿಸಬಹುದು. ಇನ್ನು ಮನುಷ್ಯನಲ್ಲಿನ ಡಿಎನ್‌ಎ ಕ್ಯಾಲಿಟಿ ಸಹ ಹೆಚ್ಚಿಸುವಲ್ಲಿ ಯೋಗಾ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಜ್ಞರು ನಿರೂಪಿಸಿದ್ದಾರೆ. ಮನುಷ್ಯನಿಗೆ ಮಾತ್ರ ಸಾಧ್ಯವಾದ ಯೋಗಾವನ್ನು ಎಲ್ಲರೂ ಮಾಡುವುದರಿಂದ ಅದ್ಭುತವಾದ ಪ್ರಯೋಜನಗಳು ಇರುತ್ತವೆ. ಹಾಗಾಗಿ ಯೋಗಾ ಬಗ್ಗೆ ಅರಿವು ಮೂಡಿಸಲು ಈ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *