ಒಂದು ಗ್ರಾಂ ಚೇಳಿನ ವಿಷ 7,30,000. ಯಾವುದಕ್ಕೆ ಬಳಕೆ ಮಾಡುತ್ತಾರೆ ಗೊತ್ತಾ, ಈ ವಿಚಾರ ನೀವು ತಿಳಿದುಕೊಂಡರೆ ಖಂಡಿತ ಶಾಕ್ ಆಗೋದು ಗ್ಯಾರೆಂಟಿ, ಈ ಚೇಳಿನ ವಿಷ ಬಂಗಾರಕ್ಕಿಂತ ದುಬಾರಿಯಾಗಿದೆ ನೋಡಿ, ನೀವು ಬಂಗಾರ ಬೇಕಿದ್ರೆ ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದು ಆದರೆ ಈ ಚೇಳಿನ ವಿಷಾದ ಬೆಲೆ ದುಪ್ಪಟ್ಟ, ಇನ್ನು ಕೆಲವೊಂದು ವಿಷಕಾರಿ ಅಂಶಗಳನ್ನು ಕೆಲವೊಂದು ರೀತಿಯಲ್ಲಿ ಬಳಕೆ ಮಾಡುತ್ತಾರೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತಿರಲ್ಲ ಅಂತ ಗೊತ್ತಿರದ ಸಂಗತಿ ಈ ಚೇಳಿನ ವಿಷ, ಇನ್ನು ಈ ಚೇಳಿನ ವಿಷವನ್ನು ಯಾವುದಕ್ಕೆ ನಾಳಾಕೆ ಮಾಡುತ್ತಾರೆ ಮತ್ತು ಇದರಿಂದ ಏನು ಲಾಭ ಅನ್ನೋವು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚೇಳು ಕಡಿದರೆ ವಿಷ ಏರಿ ಸಾಯುತ್ತಾರೆ ಎನ್ನುತ್ತಾರೆ. ಆದರೆ ಇಲ್ಲೇನು ವಿಷಕ್ಕೆ ಇಷ್ಟೊಂದು ಬೆಲೆ. ಕೆಲವು ಚೇಳುಗಳು ಕಡಿದರೆ ಆ ವಿಷ ಮನುಷ್ಯನ ರಕ್ತಕ್ಕೆ ಸೇರಿ ಕ್ಷಣಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂಬುದು ನಿಜ. ಆದರೆ ಹಾಗೆಂದು ಎಲ್ಲಾ ಚೇಳುಗಳು ಪ್ರಾಣ ತೆಗೆಯಲ್ಲ. ಕೆಲವು ಕಚ್ಚಿದರೆ ನೋವಾಗುತ್ತದೆ. ವೈದ್ಯರ ಬಳಿಗೆ ಹೋದರೆ ಔಷಧಿ ನೀಡುತ್ತಾರೆ. ಒಂದೆರಡು ದಿನಗಳಲ್ಲಿ ಕಡೆಮೆಯಾಗುತ್ತದೆ. ಕೆಲವು ವಿಷಪೂರಿತ ಚೇಳುಗಳ ವಿಷವನ್ನು ಮನುಷ್ಯನಿಗೆ ಬರುವ ಕೆಲವು ರೋಗಗಳನ್ನು ಗುಣಪಡಿಸಲು ಉಪಯೋಗಿದರೆ ಒಳ್ಳೆಯದೆಂದು ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಇದರಿಂದ ಚೇಳಿನ ವಿಷಕ್ಕೆ ಭಾರಿ ಬೇಡಿಕೆ ಬಂದಿದೆ.

ಒಂದು ಗ್ರಾಂ ವಿಷದ ಬೆಲೆ ರೂ.7,30000 ಇದ್ದರೆ. ಲೀಟರ್ ವಿಷದ ಬೆಲೆ ರೂ.73 ಕೋಟಿ ರೂಪಾಯಿವರೆಗೂ ಇದೆ. ಹಾಗಾಗಿಯೇ ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಿಷವಾಗಿ ಚೇಳಿನ ವಿಷ ಗುರುತಿಸಿಕೊಂಡಿದೆ. ಚೇಳಿನ ವಿಷದಲ್ಲಿ ಸಂಧಿನೋವನ್ನು ಗುಣಪಡಿಸಬಹುದು ಎಂದು ಅಮೆರಿಕಾದಲ್ಲಿನ ಬೆಲಾರ್ ಕಾಲೇಜ್ ಆಫ್ ಮೆಡಿಸಿನ್ ನಿರ್ವಹಿಸಿದ ಸಂಶೋಧನೆಯಲ್ಲಿ ಗೊತ್ತಾಗಿದೆ. ಒಟ್ಟು 13 ಲಕ್ಷ ಮಂದಿ ಮೇಲೆ ಈ ಔಷಧಿಯನ್ನು ಪ್ರಯೋಗಿಸಿದರು. ಅವರೆಲ್ಲರಿಗೂ ಸಂಧಿ ನೋವಿನಿಂದ ಉಪಶಮನ ಲಭಿಸಿತು. ಚೇಳಿನ ವಿಷದಲ್ಲಿ ಇರುವ ಕಾಂಪೋನೆಂಟ್ಸ್‌ನಿಂದ ಇದು ಸಾಧ್ಯವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೋವುಗಳನ್ನು ಗುಣಪಡಿಸಬಹುದು ಎಂದು ಸಂಶೋದನೆಯಲ್ಲಿ ತಿಳಿದು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *