ಸಾಧಿಸಬೇಕು ಅನ್ನೋ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಅನ್ನುವುದಕ್ಕೆ ಈ ಹುಡುಗನ ಸಾಧನೆಯೇ ಸಾಕ್ಷಿ. ಯಾಕೆಂದರೆ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡೋದು ಅಂದರೆ ಅಷ್ಟು ಸುಲಭದ ಮಾತಲ್ಲ. ವರ್ಷಾನುಗಟ್ಟಲೆ ಹಗಲು ರಾತ್ರಿ ಎನ್ನದೆ ಶ್ರಮ ವಹಿಸಬೇಕು ಅಷ್ಟೆಲ್ಲ ಶ್ರಮ ಹಾಕಿದರೂ ಕೆಲವೊಮ್ಮೆ ಸಾಧನೆಯ ಘಟ್ಟ ತಲುಪುವುದು ಕಷ್ಟವಾಗಿರುತ್ತದೆ. ಆದರೆ ಈ ಹುಡುಗ ತನ್ನ ಪೋಷಕರ ಜೊತೆ ವ್ಯಾಪಾರ ಮಾಡಿಕೊಂಡು ಸಾಧನೆಯ ದಡವನ್ನು ಸೇರಿದ್ದಾನೆ.

ಇವರ ಹೆಸರು ಟಿ ಎಸ್ ದಿವಾಕರ್ ಎಂಬುದಾಗಿ ತಿಪಟೂರಿನವರು 2016ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 600 ನೇ ರ‍್ಯಾಂಕ್ ಪಡೆದಿದ್ದಾರೆ. ಈ ಹಿಂದೆ ಇವರು ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕೇವಲ 19 ಅಂಕಗಳಿಂದ ಅನುತ್ತೀರ್ಣರಾಗಿದ್ದರು. ಆದರೆ ಎದೆಗುಂದದೆ ಮತ್ತೊಮ್ಮೆ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.

ಇವರು ಓದಿದ್ದು ಕಂಪ್ಯೂಟರ್ ಎಂಜಿನಿಯರಿಂಗ್‌ ಇವರಿಗೆ ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಈ ಕೆಲಸ ಕೇವಲ ಜೀವನಕ್ಕೆ ಸೀಮಿತವಾಗಿರುತ್ತದೆ ನಾನು ಸಮಾಜಕ್ಕೆ ಏನು ಕೊಡುಗೆ ಕೊಡಲಿಕ್ಕೆ ಆಗೋದಿಲ್ಲ ಎಂಬುದನ್ನು ತಿಳಿದು ಯಾವುದೇ ಕೋಚಿಂಗ್ ಇಲ್ಲದೆ UPSCಪರೀಕ್ಷೆಗೆ ತಯಾರಿ ನಡೆಸುತ್ತಾರೆ.

ತಮ್ಮ ತಂದೆ ತಾಯಿ ವಿಳ್ಳೇದೆಲೆ ಅಡಿಕೆ ವ್ಯಾಪಾರ ಮಾಡಿ ಜೀವನವನ್ನು ಕಟ್ಟಿಕೊಂಡಿದ್ದರು. ಇವರ ತಂದೆ ತಾಯಿಗಳಿಗೆ ಬಿಡುವಿನ ಸಮಯದಲ್ಲಿ ವ್ಯಾಪಾರ ಮಾಡಿ ನೆರವಾಗುತ್ತಿದ್ದರು. ಇವರ ತಾತನ ಕಾಲದಿಂದಲೂ ಕೂಡ ಈ ವ್ಯಾಪಾರ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುವಂಥದ್ದು. ಕಠಿಣ ಶ್ರಮ ಹಾಗೂ ಛಲದೊಂದಿಗೆ ವಿದ್ಯಾಭ್ಯಾಸವನ್ನು ಮಾಡಿ ತಮ್ಮ ಸಾಧನೆಯ ಹಾದಿಯನ್ನು ಗುರುತಿಸಿಕೊಂಡಿದ್ದಾರೆ ಈ ಕನ್ನಡಿಗ ದಿವಾಕರ್.

ತಮ್ಮ ತಂದೆ ತಾಯಿ ಇವರ ವಿದ್ಯಾಭ್ಯಾಸಕ್ಕೆ ಹೆಚ್ಚು ಸಹಕರಿಸಿದ್ದು ನಮ್ಮ ಹಾಗೆ ಇವರು ಕೂಡ ಕಷ್ಟ ಪಡಬಾರದು ಸಮಾಜದಲ್ಲಿ ಒಂದೊಳ್ಳೆ ಕೆಲಸ ಮಾಡಲಿ ತನ್ನನ್ನು ತಾನು ಗುರುತಿಸಿಕೊಳ್ಳಲಿ ಅನ್ನೋ ಆಸೆಯಿಂದ ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಈ ತಂದೆ ತಾಯಿಯ ಆಸೆಯನ್ನು ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ನೆರೆವೇರಿಸಿದ್ದಾರೆ. ಇವರ ತಂದೆ ತಾಯಿ ಹೇಳೋದು ಹೀಗೆ ಉನ್ನತ ಹುದ್ದೆ ಅಲಂಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಅನ್ನೋದು ಇವರ ಪೋಷಕರ ಮಾತು. ಅದೇನೇ ಇರಲಿ ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಇವರೇ ನಿಜವಾದ ಸಾಕ್ಷಿ ಎನ್ನಬಹುದಾಗಿದೆ.

Leave a Reply

Your email address will not be published. Required fields are marked *