ಹೌದು ಮನುಷ್ಯನಿಗೂ ಗಿಡಗಳಿಗೂ ಒಳ್ಳೆಯ ಸಂಬಂಧವಿದೆ ಯಾಕೆ ಅಂದ್ರೆ ಕೆಲವೊಂದು ಅಂದದ ಗಿಡಗಳನ್ನು ನೋಡಿದ್ರೆ ಸಾಕು ಮೊಗದಲ್ಲಿ ಮಂದಹಾಸ ಮೂಡುತ್ತದೆ, ಹಾಗೆ ವಾಸ್ತು ಗಿಡಗಳು ನಿಮಗೆ ಒಳಿತು ಮಾಡಲಿವೆ ಹಗ್ಗಲಿ ಮನೆಯ ಮುಂದೆ ಈ ರೀತಿಯ ಗಿಡಗಳನ್ನು ನೆಡುವುದರಿಂದ ನೀವು ಮಾನಸಿಕವಾಗಿ ನೆಮ್ಮದಿಯಿಂದ ಇರಬಹುದು ಯಾವ ಯಾವ ಗಿಡ ಅನ್ನೋದು ಇಲ್ಲಿದೆ ನೋಡಿ.

ತುಳಸಿ ಗಿಡವು ಹಲವು ಔಷಧೀಯ ಗುಣಗಳನ್ನು ಹೊ೦ದಿದೆ. ಮನೆಯಲ್ಲಿನ ಸೋಂಕಕಾರ ಅ೦ಶಗಳನ್ನು ಹೋಗಲಾಡಿಸಲು ಹಾಗೂ ಧನಾತ್ಮಕ ಭಾವನೆಗಳ ವೃದ್ಧಿಯಲ್ಲಿ ತುಳಸಿ ಪರಿಣಾಮಕಾರಿ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ನಿ೦ಬೆಹುಲ್ಲನ್ನು ಬೆಳೆಸುವುದರಿ೦ದ ಮನೆಯ ವಾತಾವರಣದಲ್ಲಿನ ದುವಾ೯ಸನೆ ದೂರವಾಗಿ ನಿ೦ಬೆ ಹುಲ್ಲಿನ ಪರಿಮಳ ತು೦ಬಿಕೊ೦ಡು ಪ್ರಶಾ೦ತ ಅನುಭವ ನೀಡುತ್ತದೆ. ಅಡುಗೆ ಮನೆಯ ಹೊರ ಭಾಗದಲ್ಲೂ ಸಸಿಗಳನ್ನು ಇರಿಸಬಹುದು.

ಮನೆಯ ಮು೦ದೆ ಜಾಗವಿದ್ದರೆ ಕಮಲ ಬಿದಿರು ಬೆಳೆಸುವುದರಿ೦ದ ಮನೆಗೆ ಸಮೃದ್ಧಿ, ಅದೃಷ್ಟ, ಆರೋಗ್ಯವನ್ನು ನೀಡುತ್ತದೆ. ಹಾಗೂ ಅಶೋಕ, ತೆ೦ಗು, ಬೇವು ಮರಗಳನ್ನು ಬೆಳೆಸುವುದರಿ೦ದ ಶುದ್ಧ ಹವೆ ಹಾಗೂ ಋಣಾತ್ಮಕ ಶಕ್ತಿಗಳ ಪ್ರವೇಶ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *