ಕೊರೆಯುವ,ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ.ಅನೇಕರು ಪ್ರತಿದಿನ ಸ್ನಾನ ಮಾಡುತ್ತಾರೆ. ಪ್ರತಿದಿನ ಸ್ನಾನ ಮಾಡುವವರು ಬೆಸ್ಟ್ ಅಂತ ನೀವು ಹೇಳಬಹುದು .ಆದರೆ ಸಂಶೋಧನೆಯೊಂದು ನಿಮಗೆ ಆಶ್ಚರ್ಯ ಆಗುವಂಥ ಸಂಗತಿ ಹೇಳಿದೆ .

ಪ್ರತಿದಿನ ಸ್ನಾನ ಮಾಡೋರು ಗಮನವಿಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗುತ್ತಾರಂತೆ ಯೆಸ್, ಸಂಶೋಧನೆಯೊಂದು ಹೀಗೆ ಬಹಿರಂಗಪಡಿಸಿದೆ. ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ ಪ್ರತಿದಿನ ಸ್ನಾನ ಮಾಡುವುದರಿಂದ ಹೋಗುತ್ತದೆ. ಇದರಿಂದಾಗಿ ಚರ್ಮದ ಸಮಸ್ಯೆಗಳು ಕಾಡಬಹುದು. ಅದರಲ್ಲೂ ಪಶ್ಚಿಮ ದೇಶದಲ್ಲಿರುವ ಜನರಿಗೆ ಇದು ಒಳ್ಳೆಯದಲ್ಲ.

ಯಾಕೆಂದ್ರೆ ಅವರು ಸ್ನಾನಕ್ಕಿಂತ ಪೂರ್ವ ಮೈಗೇ ಎಣ್ಣೆ ಹಚ್ಚಿ ಸ್ನಾನ ಮಾಡುವುದಿಲ್ಲ .ಹಾಗಾಗಿ ಅವರು ಪ್ರತಿದಿನ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತದೆ ಸಂಶೋದನೆ. ಆಸ್ಟ್ರೇಲಿಯಾ ಕಾಲೇಜಿನ ಡೆರ್ಮಾಟಾಲಾಜಿ ಪ್ರೊಫೆಸರ್ ಸ್ಟಿಫೆನ್ ಅವರ ಪ್ರಕಾರ ನಾವು ದಿನನಿತ್ಯ ಸ್ನಾನ ಮಾಡಬೇಕೆಂಬ ನಿಯಮವಿಲ್ಲ . 50-60 ವರ್ಷಗಳಿಂದ ಮಾತ್ರ ಇದು ರೂಢಿಯಲ್ಲಿದೆ. ದಿನನತ್ಯವೂ ಸ್ನಾನ ಮಾಡುವುದು ಸಾಮಾಜಿಕ ಒತ್ತಡವಾಗಿ ಮಾರ್ಪಟ್ಟಿದೆ. ನಿಮಗೆ ಬೇಕೆನಿಸಿದಾಗ ಸ್ನಾನ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುತ್ತಾರೆ ಸ್ಟಿಫೆನ್.

Leave a Reply

Your email address will not be published. Required fields are marked *