ನಮಸ್ತೆ ನಮ್ಮ ಪ್ರಿಯ ಓದುಗರೇ, ನಿಮ್ಮ ಚರ್ಮದ ಯೌವನವನ್ನು ಹೆಚ್ಚಿಸಲು ಇಲ್ಲಿದೆ ಅಧ್ಭುತ ಮನೆಮದ್ದುಗಳು. ಓದಿ, ಅನುಸರಿಸಿ. ನೈಸರ್ಗಿಕವಾಗಿ ವಯಸ್ಸಾಗುವ ಪ್ರಕ್ರಿಯೆ ಪ್ರತಿಯೊಬ್ಬರಿಗೂ ಕೂಡ ಉಂಟಾಗುತ್ತದೆ. ಆದರೆ ಕೆಲವರು ಮಾತ್ರ ೪೦ ರ ವಯಸ್ಸಿನಲ್ಲಿಯೂ ೩೦ ರಂತೆ ಕಾಣುತ್ತಾರೆ. ನಿಮಗೆ ಇಷ್ಟು ವಯಸ್ಸಾಗಿದೆಯೇ? ಹಾಗೆ ಕಾಣುವುದೇ ಇಲ್ಲ ಎಂದು ಮೂಗಿನ ಮೇಲೆ ಬೆರಳಿಡುವಂತೆ ಆಗುತ್ತದೆ. ಸುಕ್ಕುಗಳು ಬಂದರೆ ತ್ವಚೆಯು ಹಂತ ಹಂತವಾಗಿ ಕಾಂತಿ ಹಾಗೂ ಯೌವನ ಕುಸಿಯುತ್ತಾ ಹೋಗುತ್ತದೆ. ಮುಖ್ಯವಾಗಿ ನಮ್ಮ ದೇಹದ ಮುಖ, ಕುತ್ತಿಗೆ, ಕೈಗಳ ಭಾಗಕ್ಕೆ ಸೂರ್ಯನ ಕಿರಣಗಳು ತೀಕ್ಷ್ಣವಾಗಿ ಬಿದ್ದಾಗ ಸುಕ್ಕುಗಳು ಅಂಟಾಗುತ್ತಾವೆ.  ತೀವ್ರವಾದ ಸೂರ್ಯನ ಕಿರಣಗಳಿಂದ ಸಂಪೂರ್ಣವಾಗಿ ಚರ್ಮವು ಘಾಸಿಯಾಗುತ್ತದೆ. ತ್ವಚೆ ವಯಸ್ಸಾಗದಂತೆ ತಡೆಯುವ ಟಿಪ್ಸ್ ನಿಮಗೆ ಬೇಕೆ ? ಮುಂದೆ ಓದಿ..

೧.ಅಲೋವೆರಾ – ಅಲೋವೆರಾ ಚರ್ಮ ಹಾಗೂ ಆರೋಗ್ಯವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಚರ್ಮದ ಹಲವಾರು ಸಮಸ್ಯೆಗೆ ಅಲೋವೆರಾ ಉತ್ತಮ ಪರಿಣಾಮವನ್ನು ಬೀರುತ್ತದೆ. ಕೆಲವು ಅಧ್ಯಯನದ ಪ್ರಕಾರ ಚರ್ಮಕ್ಕೆ ಅಲೋವೆರಾ ಬಳಸುವುದರಿಂದ ೬೦ ದಿನಗಳಲ್ಲಿ ಸುಕ್ಕುಗಳು ಪ್ರಮಾಣ ಕಡಿಮಯಾಗುತ್ತಿದೆ ಎಂದು ತಿಳಿದು ಬಂದಿದೆ. ಇದು ಮುಖ್ಯವಾಗಿ ಚರ್ಮವನ್ನು ಹೈಡ್ರಿಕರಣಗೊಳಿಸುವುದರಿಂದ ಸುಕ್ಕುಗಳು ಉಂಟಾಗದಂತೆ ತಡೆಯುತ್ತದೆ. ಪ್ರತಿದಿನ ನಿಮ್ಮ ಚರ್ಮಕ್ಕೆ ತಾಜಾ ಅಲೋವೆರಾ ಅನ್ನು ಮಾತ್ರ ಬಳಸಿ. ೨.ಬಾಳೆಹಣ್ಣಿನ ಫೆಸ್ ಪ್ಯಾಕ್- ಬಾಳೆಹಣ್ಣು ರುಚಿಯಾದ ಮತ್ತು ಸಿಹಿಯಾದ ಹಣ್ಣು ಮಾತ್ರವಲ್ಲ, ಬದಲಾಗಿ ಚರ್ಮಕ್ಕೂ ಜಾದು ಮಾಡುತ್ತದೆ. ಹಾಗೆಯೇ ತ್ವಚೆಯ ಮೇಲಿನ ಸುಕ್ಕುಗಳು ನಿವಾರಣೆಗೂ ಇದು ಸಹಕಾರಿಯಾಗಿದೆ. ಮುಖ್ಯವಾಗಿ ಈ ಹಣ್ಣಿನಲ್ಲಿ ನೈಸರ್ಗಿಕವಾದ ತೈಲ ಹಾಗೂ ವಿಟಮಿನ್ ಗಳು ಇವೆ. ಇದು ಚರ್ಮದ ಆರೋಗ್ಯ ರಕ್ಷಣೆ ಮಾಡುತ್ತದೆ. ಬಾಳೆಹಣ್ಣಿನ ಮಾಸ್ಕ್ ಅನ್ನು ಮುಖಕ್ಕೆ ಲೇಪಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಇದರ ಪೇಸ್ಟ್ ಅನ್ನು ಮುಖದ ಮೇಲೆ ೧೫-೨೦ ನಿಮಿಷ ನಂತರ ತೊಳೆಯಿರಿ. ಇದರಿಂದ ನೀವು ಸುಕ್ಕು ರಹಿತ ತ್ವಚೆಯನ್ನು ಪಡೆಯಬಹುದು.

೩- ಆರೋಗ್ಯಕರವಾದ ಆಹಾರವು ತ್ವಚೆಯ ಸುಕ್ಕನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರವಾದ ಆಹಾರವು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಮಾತ್ರ ನೀಡದೆ ಉತ್ತಮವಾದ ಚರ್ಮವನ್ನು ಕೂಡ ನೀಡುತ್ತದೆ. ಸೂಪರ್ ಫುಡ್ ಎಂದು ಕರೆಯಲಾಗುವ ಕೆಲವು ಆಹಾರಗಳು ಸುಕ್ಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕೆಲವು ವಿಜ್ಞಾನಿಗಳು ಆರೋಗ್ಯಕರವಾದ ಆಹಾರ ತಿಂದ ಮಹಿಳೆ ಮತ್ತು ಪುರುಷರಿಗೂ, ಜಂಕ್ ಫುಡ್ ತಿನ್ನುವ ಮಹಿಳೆ ಪುರುಷರಲ್ಲಿನ ಚರ್ಮದ ವ್ಯತ್ಯಾಸಗಳನ್ನು ಗಮನಿಸಿದ್ದಾರೆ. ೪- ಸಾರಭೂತ ತೈಲಗಳು- ಸುಕ್ಕುಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾರಭೂತ ತೈಲಗಳನ್ನೂ ಅನ್ವಯಿಸುವುದರಿಂದ ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು. ಸಾಮಾನ್ಯವಾಗಿ ತೈಲಗಳು ಚರ್ಮಕ್ಕೆ ಕಿರಿಕಿರಿಯನ್ನು ಉಂಟು ಮಾಡದೇ, ಕಾಂತಿ ಹಾಗೂ ತೇವಾಂಶವನ್ನು ನೀಡುತ್ತದೆ. ಪ್ರತಿನಿತ್ಯ ತೆಂಗಿನ ಎಣ್ಣೆ, ರೋಸ್ಮರಿ ಎಣ್ಣೆ, ಆಲಿವ್ ಎಣ್ಣೆಗಳಿಂದ ನಿಮ್ಮ ತ್ವಚೆಯನ್ನು ಮಸಾಜ್ ಮಾಡಿಕೊಳ್ಳುತ್ತಿದ್ದರೆ, ನಿಮ್ಮ ತ್ವಚೆ ಯೌವ್ವನದಿಂದ ಕಂಗೊಳಿಸುತ್ತದೆ.

Leave a Reply

Your email address will not be published. Required fields are marked *