ನಮಸ್ತೆ ನಮ್ಮ ಪ್ರಿಯ ಓದುಗರೇ, ವ್ಯಾಯಾಮ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ನೀವು ಮಾಡಿದರೆ ಅದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೇಹವನ್ನು ಫಿಟ್ ಆಗಿ ಇಡಬೇಕು ಅಂದ್ರೆ ನಿತ್ಯವೂ ವ್ಯಾಯಾಮ ಮಾಡುವುದು ಅಗತ್ಯ. ಒತ್ತಡದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಸೇವನೆಇಂದ ಹಲವಾರು ಅನಾರೋಗ್ಯ ಉಂಟಾಗುತ್ತಿದೆ. ಇದನ್ನು ದೂರವಿಡಬೇಕು ಎಂದರೆ ದಿನವೂ ವ್ಯಾಯಾಮ ಮಾಡಬೇಕು. ವ್ಯಾಯಾಮದ ವೇಳೆ ಅನುಸರಿಸಲು ಹಲವಾರು ವಿಧಾನಗಳಿವೆ.  ಪ್ರೆತಿಯೊಬ್ಬರು ಬೇರೆ ಬೇರೆ ಬಗೆಯ ವ್ಯಾಯಾಮಗಳನ್ನು ಇಷ್ಟ ಪಡುತ್ತಾರೆ. ಆದರೆ ಕೆಲವರು ವ್ಯಾಯಾಮ ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹೀಗೆ ತಪ್ಪುಗಳನ್ನು ಮಾಡುವುದರಿಂದ ಅದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವ್ಯಾಯಾಮದ ಸಮಯದಲ್ಲಿ ಮಾಡುವ 5 ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿಯೋಣ ಬನ್ನಿ.

೧.ಸ್ಥಿರತೆ = ಯಾವುದೇ ಕೆಲಸವಾದರೂ ಸ್ಥಿರತೆಇಲ್ಲದೆ ಇದ್ದರೆ ಆಗ ಅದರಿಂದ ಕೆಟ್ಟ ಪರಿಣಾಮ ಬೀರುತ್ತದೆ. ವ್ಯಾಯಾಮದ ವೇಳೆಯಲ್ಲಿಯೂ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗಬೇಕು. ಇದರಿಂದ ತೂಕ ಇಳಿಸಲು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ದೇಹವು ವ್ಯಾಯಾಮಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಅದನ್ನು ನಿಲ್ಲಿಸಿದ ವೇಳೆ ಮತ್ತೆ ದೇಹವು ತನ್ನ ಹಳೆಯ ಸ್ಥಿತಿಗೆ ಮರಳುತ್ತದೆ. ೨.ನಿಯಮಿತವಾಗಿ ಮಾಡಿ =ವ್ಯಾಯಾಮಕ್ಕೆ ಸರಿಯಾದ ವೇಳಾಪಟ್ಟಿ ಮಾಡಿಕೊಂಡು ನಿಯಮಿತವಾಗಿ ವ್ಯಾಯಾಮ ಮಾಡಿ. ವಾರದಲ್ಲಿ ನಾಲ್ಕು ಸಲ ವ್ಯಾಯಾಮ ಮಾಡಿದರೆ ಅದರಿಂದ ತುಂಬಾ ನೆರವಾಗಲಿದೆ. ವೇಳಾಪಟ್ಟಿಗೆ ಹೊಂದಿಕೊಂಡು ಅದರ ಪ್ರಕಾರ ವ್ಯಾಯಾಮ ಮಾಡಲು ಪ್ರಯತ್ನಿಸಿ.

೩.ಅತಿಯಾಗಿ ತಿನ್ನುವುದು =ದೇಹವನ್ನು ದಂಡಿಸಿದ ವೇಳೆ ಸಾಮಾನ್ಯವಾಗಿ ಹಸಿವು ಹೆಚ್ಚುವುದು. ಹೀಗಾಗಿ ನೀವು ವ್ಯಾಯಾಮದ ಬಳಿಕ ಸಿಕ್ಕಿದ್ದೆಲ್ಲವನ್ನು ತಿಂದರೆ ಅದರಿಂದ ಯಾವುದೇ ಪ್ರಯೋಜನವಾಗದು. ಕೇವಲ ಪೋಷಕಾಂಶಗಳು ಇರುವ ಆಹಾರವನ್ನು ಮಾತ್ರ ಸೇವಿಸಿ. ೪.ಮಿಶ್ರ ವ್ಯಾಯಾಮ ಮಾಡಿ =ಒಂದೇ ರೀತಿಯ ವ್ಯಾಯಾಮ ಮಾಡಬೇಡಿ. ಇದರಿಂದ ನಿಮಗೆ ಬೇಸರ ಆಗಬಹುದು. ಇದರ ಬದಲಿಗೆ ಕಾರ್ಡಿಯೋ, ಟ್ರೆಡ್ ಮಿಲ್, ಓಡುವುದು ಹಾಗೂ ಯೋಗ ಮಾಡಿ. ನೀವು ನಿಯಮಿತಾಗಿ ಇದನ್ನು ಬದಲಿಸುತ್ತಾ ಇರಬೇಕು. ಇದರಿಂದ ದೇಹವು ಸಾಧೃದವಾಗುವುದು. ೫.ಸ್ಟ್ರೆಚಿಂಗ್ ಮಾಡಿ = ವ್ಯಾಯಾಮ ಮಾಡುವ ಮೊದಲು ನೀವು ಕೆಲವು ಪೂರ್ವಭ್ಯಾಸ ವ್ಯಾಯಾಮಗಳನ್ನು ಮಾಡಿದರೆ ಅದು ತುಂಬಾ ಲಾಭಾಕಾರಿ ಆಗುವುದು. ವ್ಯಾಯಾಮದ ವೇಳೆ ಲಾಕ್ಟಿಕ್ ಆಮ್ಲವು ಜಮೆ ಆಗುವುದು. ಇದರಿಂದಾಗಿ ಗಂಟುಗಳಲ್ಲಿ ಊತ ಕಂಡುಬರುವುದು. ಇದನ್ನು ಶಮನ ಮಾಡು ಪೂರ್ವಭ್ಯಾಸಾ ಮಾಡಿ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಆಗುವುದು.

Leave a Reply

Your email address will not be published. Required fields are marked *