ನಮಸ್ತೆ ನಮ್ಮ ಪ್ರಿಯ ಓದುಗರೇ, ತೂಕ ಇಳಿಸುವ ಕೆಲಸವೊಂದು ರೋಲರ್ ಕೋಸ್ಟರ್ನಲ್ಲಿ ಸವಾರಿ ಮಾಡಿದ ಹಾಗೆ. ಇವೆಲ್ಲದರ ನಡುವೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲದೆ ತೂಕ ಇಳಿಕೆ ಹೇಳಿದಷ್ಟು ಸುಲಭವಲ್ಲ ಎಂದು ಈ ಪ್ರಯತ್ನದಲ್ಲಿರುವವರಿಗೆ ಕೆಲವೇ ದಿನಗಳಲ್ಲಿ ಗೊತ್ತಾಗಿ ಬಿಡುತ್ತದೆ. ಆದರೆ, ಕೊಂಚ ತಾಳ್ಮೆ ವಹಿಸಿ ಸರಿಯಾದ ಕ್ರಮವನ್ನು ಅನುಸರಿಸಿದರೆ ಇದನ್ನು ಸಾಧಿಸುವುದು ಕಷ್ಟವೇನಲ್ಲ. ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ತೂಕ ಇಳಿಸಿಕೊಳ್ಳುವ ಮಾತ್ರೆ, ಹುಡಿ ಇತ್ಯಾದಿಗಳನ್ನು ಸೇವಿಸಲು ಆರಂಭಿಸುವರು. ಆದರೆ ಇದು ತೂಕ ಇಳಿಸಿದರೂ ಇದರ ಸೇವನೆ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಹೆಚ್ಚಳವಾಗುವುದು. ಹೀಗಾಗಿ ಈ ಅಭ್ಯಾಸಗಳನ್ನ ನಿಯಮಿತವಾಗಿ ಪಾಲನೆ ಮಾಡಿದ್ರೆ ತೂಕವನ್ನು ಸುಲುಭವಾಗಿ ಕಳೆದುಕೊಳ್ಳಬಹುದು. 1)ಆರೋಗ್ಯಕರ ಆಹಾರ: ನಮಗೆ ದೇಹಕ್ಕೆ ಮೂರನೇ ಒಂದು ಭಾಗ ಶಕ್ತಿ ಸಿಗುವುದು ನಿತ್ಯ ಉಪಹಾರದಿಂದ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮನೆಯಲ್ಲಿ ಸಿದ್ಧಪಡಿಸಿದ ಆರೋಗ್ಯಕರ ತಿನಿಸುಗಳನ್ನು ತಿನ್ನುವುದರಿಂದ , ಊಟದ ಸಮಯದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಸೇವಿಸುವುದು ತಪ್ಪುತ್ತದೆ. ಮೊಸರು, ಒಣ ಹಣ್ಣುಗಳು, ಸೇಬು, ಕಿತ್ತಳೆ ಮತ್ತು ಬಾಳೆಯಂತಹ ಹೆಚ್ಚು ನಾರುಳ್ಳ ಹಣ್ಣುಗಳು, ಕ್ಯಾರೆಟ್ ಮತ್ತು ಬ್ರಾಕೊಲಿಯಂತಹ ಹೆಚ್ಚು ನಾರುಳ್ಳ ತರಕಾರಿಗಳು, ಗೋಡಂಬಿ ಮತ್ತು ವಾಲ್‍ನಟ್ ತಿನ್ನುವುದು ಉತ್ತಮ. 2) ನಿಮ್ಮನ್ನು ನೀವು ಪ್ರೇರೇಪಿಸಿ ಕೊಳ್ಳಿ: ಕೆಲವರು ತೂಕ ಇಳಿಸಿಕೊಳ್ಳಬೇಕೆಂದು ನಾನ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ತೂಕ ಇಳಿಕೆಯಲ್ಲಿನ ಕಷ್ಟದ ಹಾದಿ ಅವರನ್ನು ತೂಕ ಇಳಿಕೆಯ ಸಹವಾಸವೇ ಸಾಕು ಎನ್ನುವಂತೆ ಮಾಡುತ್ತದೆ. ಹೀಗಾಗಿ ಪ್ರತಿನಿತ್ಯ ಸೆಲ್ಫ್ ಮೋಟಿವೆಟ್ ಮಾಡಿಕೊಳ್ಳುವುದರಿಂದ ತೂಕ ಇಳಿಕೆಯ ಹಾದಿಯಲ್ಲಿ ಇದು ಸಹಾಯಕವಾಗಲಿದೆ.

3)ಹೆಚ್ಚಿನ ನೀರು ಸೇವನೆ: ನೀರು ಕ್ಯಾಲೊರಿ ಮುಕ್ತವಾಗಿದ್ದು ನೀರು ಸೇವನೆಯಿಂದ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್​ ಮಾಡಬಹುದು. ಹಾಗೆ ನೀರಿನ ಸೇವನೆ ಹಸಿವಾಗುವುದನ್ನು ತಡೆಯುತ್ತದೆ. ನೀರು ಟಾಕ್ಸಿನ್​ಗಳನ್ನು ದೇಹದಿಂದ ಹೊರಹಾಕುವುದಲ್ಲದೆ, ಲಾಂಗ್​ ಟರ್ಮ್​ನಲ್ಲಿ ತೂಕ ಗಳಿಕೆಯನ್ನು ತಡೆಯುತ್ತದೆ. 4) ಸೂರ್ಯನ ಬೆಳಕಿನಲ್ಲಿ ನಿಲ್ಲುವುದು: ತೂಕ ಇಳಿಕೆ ಮಾಡಿಕೊಳ್ಳಬೇಕು ಎನ್ನುವವರು ಪ್ರತಿನಿತ್ಯ ಸೂರ್ಯನಿಗೆ ಮಯ್ಯೊಡ್ಡಿ ನಿಲ್ಲುವುದರಿಂದ ಹೊಸ ಚೈತನ್ಯ ಸಿಗಲಿದೆ.. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಸೂರ್ಯನ ಕಿರಣಗಳು ಭೂಮಿಯನ್ನು ಸ್ಪರ್ಧಿಸಲು ಆರಂಭ ಮಾಡಿದಾಗ ನೀವು ಎಳೆಯ ಬಿಸಿಲಿಗೆ ಮೈಯೊಡ್ಡಿ ನಿಂತರೆ ಹೊಸ ಚೈತನ್ಯ ನಿಮ್ಮಲ್ಲಿ ಬರಲಿದೆ.ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕವಾಗಿ ನಿಮಗೆ ವಿಟಮಿನ್ ಸಿಗಲಿದೆ. 5)ನಿಯಮಿತ ವ್ಯಾಯಾಮ: ತೂಕ ಇಳಿಸಬೇಕೆಂದುಕೊಳ್ಳುವವರು ನಿತ್ಯ ವ್ಯಾಯಾಮ ಮಾಡಬೇಕು. ದಿನಕ್ಕೆ ಕನಿಷ್ಠ 30 ನಿಮಿಷವಾದರು ವ್ಯಾಯಾಮ ಮಾಡಿದರೆ ಆರೋಗ್ಯಯುತ ದೇಹ ನಿಮ್ಮದಾಗಿಸಿಕೊಳ್ಳಬಹದು. ವ್ಯಾಯಾಮ ಕಡ್ಡಾಯ ಎಂದಾಕ್ಷಣ ನೀವು ಜಿಮ್​ಗೆ ಹೋಗಬೇಕೆಂದಿಲ್ಲ. ಮನೆಯಲ್ಲೇ ಹೊಟ್ಟೆ ಭಾಗಕ್ಕೆ ಮಾಡಬಹುದಾದ ವ್ಯಾಯಾಮಗಳನ್ನು ಮಾಡಬಹುದು. ಎಲ್ಲಾದರೂ ತೆರಳಬೇಕಾದರೆ ನಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳುವುದು ಆರೋಗ್ಯಯುತ ದೇಹ ಪಡೆಯಲು ಸಹಾಯವಾಗುತ್ತದೆ.

6)ಸರಿಯಾದ ಪ್ರಮಾಣದಲ್ಲಿ ನಿದ್ರೆ: ದೇಹದ ಆರೋಗ್ಯ ಹಾಗೂ ತೂಕ ನಿಯಂತ್ರಣಕ್ಕೆ ಸರಿಯಾದ ನಿದ್ರೆ ಅತ್ಯಗತ್ಯ. ಸರಿಯಾದ ನಿದ್ರೆ ಇಲ್ಲದಿದ್ದರೆ, ಚಯಾಪಚಯ ಕ್ರಿಯೆಗೆ ತೊಂದರೆ ಆಗುತ್ತದೆ ಮತ್ತು ಕೆಲವು ಪ್ರಮುಖ ಹಾರ್ಮೋನ್‍ಗಳಿಗೆ ತೊಂದರೆಯಾಗುತ್ತದೆ. ಆರು ಗಂಟೆಗಿಂತ ಕಡಿಮೆ ನಿದ್ರಿಸುವುದರಿಂದ ಬೊಜ್ಜು ಹೆಚ್ಚಿಸಬಹುದು. 7) ಸಾರ್ವಜನಿಕ ಸಾರಿಗೆ ಬಳಸಿ: ಸಾಮಾನ್ಯವಾಗಿ ಸ್ವಂತ ವಾಹನ ಬಳಸುವವರು ನಡೆದಾಡುವುದೇ ಕಡಿಮೆ.. ಹೀಗಾಗಿ ಸಾರ್ವಜನಿಕ ಸಾರಿಗೆ ಬಳಸುವುದರಿಂದ ಹೆಚ್ಚಿನ ಓಡಾಟ ಆಗಲಿದೆ. ಅಧ್ಯಯನವೊಂದರ ಪ್ರಕಾರ ವಾಕಿಂಗ್, ಬೈಕಿಂಗ್ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಕಡಿಮೆ ದೇಹದ ತೂಕ ಮತ್ತು ತೂಕ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ. 8) ಒತ್ತಡ ಕಡಿಮೆ ಮಾಡಿ: ಮನುಷ್ಯನಿಗೆ ತೂಕ ಹೆಚ್ಚಳಕ್ಕೆ ಕಾರಣವಾಗುವುದು ಒತ್ತಡ.. ಹೀಗಾಗಿ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ತೂಕ ಇಳಿಸಿಕೊಳ್ಳಬಹುದು.. ಮನುಷ್ಯ ಒತ್ತಡದಲ್ಲಿದ್ದಾಗ ಅನಗತ್ಯವಾಗಿ ಆಹಾರ ಸೇವನೆ ಮಾಡುವ ಸಾಧ್ಯತೆಯಿರುತ್ತದೆ.. ಇದರಿಂದಾಗಿ ತನಗೆ ತಾನೇ ದೇಹದ ತೂಕ ಅರಿವಿಲ್ಲದಂತೆ ಹೆಚ್ಚಳವಾಗುವುದು.. ಹೀಗಾಗಿ ಪ್ರತಿನಿತ್ಯ ಯೋಗ ವ್ಯಾಯಾಮ ಧ್ಯಾನ ಮಾಡುವ ಮೂಲಕ ಒತ್ತಡ ನಿವಾರಣೆ ಮಾಡಿಕೊಂಡು ತೂಕ ಇಳಿಸಿಕೊಳ್ಳಬಹುದು. ಶುಭದಿನ.

Leave a Reply

Your email address will not be published. Required fields are marked *