ಹೌದು ಮನೆಮದ್ದುಗಳಲ್ಲಿ ಇದು ಸಹ ಒಂದು ಈ ಸೀಬೆಹಣ್ಣಿನಲ್ಲಿರುವ ಅಂಶವು ಹಲವು ರೋಗಗಳನ್ನು ದೂರ ಮಾಡುತ್ತದೆ ಮತ್ತು ಹಲವು ರೋಗಗಳನ್ನು ಬರದಂತೆ ನೋಡಿಕೊಳ್ಳುತ್ತದೆ. ಸೀಬೆಹಣ್ಣಿನಿಂದ ಹೋಗಲಾಡಿಸುವಂತ ಮತ್ತು ತಡೆಗಟ್ಟುವಂತ ಕಾಯಿಲೆಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ.

ಕಾಮಾಲೆ ರೋಗ ಮಾಯ: 3 ದಿನ ಸೀಬೆ ಎಲೆ ಕಷಾಯ ಕುಡಿದರೆ ಕಾಮಾಲೆ ಮಾಯ. ಸೀಬೆ ಮರದ ಎಲೆ ಕಾಮಾಲೆಗೆ ಅತ್ಯಂತ ಪರಿಣಾಮಕಾರಿ ಹಾಗೂ ಮಿತವ್ಯಯಕಾರಿ ಮದ್ದು ಎಂಬುದನ್ನು ವೈದ್ಯಕೀಯ ರಂಗ ಪತ್ತೆ ಹಚ್ಚಿದೆ.

ಡಯಾಬಿಟೀಸ್‌ ನಿಯಂತ್ರಣ : ಫೈಬರ್‌ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಡಯಾಬಿಟಿಸ್‌ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದನ್ನು ಪ್ರತಿ ನಿತ್ಯ ಸೇವನೆ ಮಾಡುತ್ತ ಬಂದರೆ ರಕ್ತದಲ್ಲಿನ ಶುಗರ್‌ನ ಮಟ್ಟ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯ : ಸೀಬೆ ಹಣ್ಣು ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಶಿಯಂನ್ನು ನಿಯಂತ್ರಿಸುತ್ತದೆ. ಇದರಿಂದ ಬ್ಲಡ್‌ ಪ್ರೆಶರ್‌ ಕಡಿಮೆಯಾಗಿ ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತದೆ.

ಮಲಬದ್ಧತೆ ಸಮಸ್ಯೆ ನಿವಾರಣೆ : ಇದರಲ್ಲಿ ಡಯಟರಿ ಫೈಬರ್‌ ಇರುವುದರಿಂದ ಒಂದು ಸೀಬೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯಕ : ಇದರಲ್ಲಿ ವಿಟಾಮಿನ್‌ ಎ ಹೆಚ್ಚು ಇದ್ದು, ಇದು ಕಣ್ಣಿನ ದೃಷ್ಟಿ ದೋಷವನ್ನು ನಿವಾರಣೆ ಮಾಡಲು ನೆರವಾಗುತ್ತದೆ.

ಪ್ರೆಗ್ನೆನ್ಸಿ ಸಮಯದಲ್ಲಿ ಪೇರಳೆ : ಸೀಬೆ ಹಣ್ಣಿನಲ್ಲಿ ಫೋಲಿಕ್‌ ಆಸಿಡ್‌, ವಿಟಾಮಿನ್‌ ಬಿ 9 ಹೆಚ್ಚಾಗಿರುವುದರಿಂದ ಇದನ್ನು ಗರ್ಭಿಣಿ ಮಹಿಳೆಯರಿಗೆ ಸೇವನೆ ಮಾಡಲು ಹೇಳಲಾಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಮಕ್ಕಳ ನರವ್ಯೂಹ ವ್ಯವಸ್ಥೆ ಸರಿಯಾಗಿ ಆಗುತ್ತದೆ.

ಹಲ್ಲು ನೋವು ನಿವಾರಣೆ : ಸೀಬೆ ಹಣ್ಣಿನ ಚಿಗುರು ಎಲೆಗಳು ಆ್ಯಂಟಿಬಯೋಟಿಕ್‌ ರೀತಿ ವರ್ತಿಸುವುದರಿಂದ ಇವು ಹಲ್ಲು ನೋವು ನಿವಾರಣೆಗೆ ಸಹಾಯಕವಾಗಿದೆ.

Leave a Reply

Your email address will not be published. Required fields are marked *