ನಾಲಿಗೆ ತೊದಲು ಸಮಸ್ಯೆ ಇರುವವರು ನಿಯಮಿತವಾಗಿ ಬೆಟ್ಟದನಲ್ಲಿ ಕಾಯಿ, ಬಾದಾಮಿ, ಕರಿಮೆಣಸು, ಒಣ ಕರ್ಜೂರವನ್ನು ನಾಲಿಗೆಯಿಂದ ಚೀಪುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಉಪ್ಪನ್ನು ಕಲಸಿ ಪ್ರತಿದಿನ ನಾಲಿಗೆ ತಿಕ್ಕಿದರೆ ನಾಲಿಗೆ ತೊದಲುವಿಕೆ ಕಡಿಮೆಯಾಗುತ್ತದೆ.

ಮಕ್ಕಳು ಸರಿಯಾಗಿ ಮಾತನಾಡದೆ ತೊದಲುತ್ತಿದ್ದರೆ ದಿನ ನಿತ್ಯ ಊಟದಲ್ಲಿ ಒಂದರಿಂದ ಎರಡು ಚಮಚ ದೇಸಿ ಹಸುವಿನ ತುಪ್ಪವನ್ನು ಹಾಕಿ ಊಟ ಮಾಡಿಸಿದರೆ ಕ್ರಮೇಣವಾಗಿ ಮಾತು ಸ್ಪಷ್ಟವಾಗುತ್ತದೆ. ಬಾದಾಮಿ, ಕರಿಮೆಣಸು ಮತ್ತು ಸ್ವಲ್ಪ ಸಕ್ಕರೆಗೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್‌ ಮಾಡಿ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ನಾಲಿಗೆ ತೊದಲು ನಿವಾರಣೆಯಾಗಿ ಮಾತು ಸ್ಪಷ್ಟವಾಗುತ್ತದೆ.

ಕೊತ್ತಂಬರಿ ಸೊಪ್ಪನ್ನು ಕಕ್ಕರೆ ಮರದ ತಿರುಳಿನಲ್ಲಿ ಕಲಸಿ ನೀರಿನ ಜತೆ ಕಷಾಯ ಮಾಡಿ. ಈ ಕಷಾಯದಿಂದ ಪ್ರತಿ ದಿನ ಬಾಯಿ ಮುಕ್ಕಳಿಸಿದರೆ ನಾಲಿಗೆ ತೆಳುವಾಗಿ ಮಾತು ಸರಿಯಾಗುತ್ತದೆ. 9 ಒಣದ್ರಾಕ್ಷಿ , 7 ಬಾದಾಮಿ ಮತ್ತು 1 ಆಕ್ರೋಡವನ್ನು ಪುಡಿ ಮಾಡಿ. ಈ ಪುಡಿಯನ್ನು ಬಿಸಿ ಹಾಲಿಗೆ ಹಾಕಿ ಖಾಲಿ ಹೊಟ್ಟೆಗೆ ಸೇವಿಸಿದರೆ ಮಾತು ಸ್ಪಷ್ಟವಾಗುತ್ತದೆ.

ಬಜೆ ಪುಡಿಗೆ ಏಲಕ್ಕಿ ಪುಡಿ, ಲವಂಗದ ಪುಡಿ, ವಿಳ್ಯೆದೆಲೆ ಬೇರಿನ ಪುಡಿ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ದಿನಾ ಬೆಳಗ್ಗೆ ಅದರಿಂದ ನಾಲಿಗೆ ತಿಕ್ಕಿದರೆ ನಾಲಿಗೆ ತೆಳುವಾಗಿ ಮಾತು ಸರಿಯಾಗುತ್ತದೆ. ಬೆಳಗ್ಗೆ ಎದ್ದ ಕೂಡಲೆ ಅರ್ಧ ಚಮಚ ಬೆಟ್ಟದನಲ್ಲಿಕಾಯಿ ಪುಡಿಗೆ ಅರ್ಧ ಚಮಚ ಹಸುವಿನ ತುಪ್ಪ ಮತ್ತು ಕಲ್ಲುಸಕ್ಕರೆ ಸೇರಿಸಿ ಸೇವಿಸಿದರೆ ನಾಲಿಗೆ ತೊದಲುವುದು ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *