ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸಿದರೆ ದೇಹದ ಎಲ್ಲ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು. ಜೀವಕೋಶವನ್ನು ಪುನಃ ಶ್ಚೇತನಗೊಳಿಸುವುದು. ತುಪ್ಪವು ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುವುದು. ಹೀಗಾಗಿ ಸೋರಿಯಾಸಿಸ್‌ನಂತಹ ಚರ್ಮ ರೋಗಗಳನ್ನು ತಡೆಯುವುದು.

ತುಪ್ಪವು ನೈಸರ್ಗಿಕವಾದ ಲೂಬ್ರಿಕೆಂಟ್‌ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ. ಸಂಧಿ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಕಾಯಿಲೆಗೆ ತುಪ್ಪವನ್ನು ಹೆಚ್ಚಿಕೊಳ್ಳಬಹುದು. ಜತೆಗೆ ಆಸ್ಟಿಯೊಪೊರೋಸಿಸ್‌ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳನ್ನು ನಿವಾರಿಸಬಹುದು.

ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮಿದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುವುದು. ಜತೆಗೆ ನೆನಪಿನ ಶಕ್ತಿ, ಕಲಿಕೆ, ಜ್ಞಾನ ಶಕ್ತಿಯನ್ನು ಸುಧಾರಿಸುವುದು. ಅಲ್ಲದೆ ಬುದ್ಧಿಮಾಂದ್ಯತೆ, ಮರೆವಿನ ಕಾಯಿಲೆ ಬಾರದಂತೆ ತಡೆಯುವುದು.ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ತುಪ್ಪ ಸೇವಿಸಿದರೆ ಚಯಾಪಚಯ ಕ್ರಿಯೆ ಸುಧಾರಣೆಯಾಗುತ್ತದೆ. ಅಲ್ಲದೆ ದೇಹದ ತೂಕ ಇಳಿಕೆಗೆ ಕೂಡ ನೆರವಾಗುವುದು.

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಕೂದಲಿನ ಫೋಲಿಸೆಲ್ಸ್‌ ಗಳು ಆರೋಗ್ಯವಾಗಿರುವಂತೆ ಮಾಡುವುದು. ಕೆಲವರಿಗೆ ಹಾಲು ಅಥವಾ ಹಾಲಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಸೇವಿಸದಾಗ ಜೀರ್ಣಕ್ರಿಯೆ ಸೂಕ್ತವಾಗಿ ಆಗುವುದಿಲ್ಲ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸಿದರೆ ಲ್ಯಾಕ್ಟೋಸ್‌ ಸಮಸ್ಯೆಯು ಸುಧಾರಣೆ ಕಾಣುತ್ತದೆ. ಜೀರ್ಣ ಕ್ರಿಯೆಯೂ ಉತ್ತಮವಾಗುವುದು.

ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನೇಕ ಬಗೆಯ ಕ್ಯಾನ್ಸರ್‌ನಿಂದ ದೂರ ಇರಬಹುದು. ಆಯುರ್ವೇದದ ಪ್ರಕಾರ ತುಪ್ಪ ಕ್ಯಾನ್ಸರ್‌ ವಿರೋಧಿ ಲಕ್ಷ ಣವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.ತುಪ್ಪ ಸೇವಿಸುವುದರಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್‌ ನಿವಾರಣೆಯಾಗುವುದು. ಇದು ಹೃದಯದ ಮೇಲಿನ ಹೊರೆಯನ್ನು ತಗ್ಗಿಸಿ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆಗೊಳಿಸುವುದು.

Leave a Reply

Your email address will not be published. Required fields are marked *