ಹಲವಾರು ನಾಯಕರು ಏನು ಇಲ್ಲದೆ ಇವತ್ತು ಕೋಟ್ಯಧಿಪತಿಗಳಾಗಿದ್ದರೆ. ಕಾರಣ ಅವರ ಶ್ರಮ. ಅದೇ ರೀತಿ ಬೆಂಗಳೂರು ಮೂಲದ ವಾಣಿಜ್ಯೋದ್ಯಮಿ ರಾಜ ನಾಯಕ್ ಅವರ ಸಾಧನೆಯು ಸಹ ಇದಕ್ಕೆ ಹೊರತಾಗಿಲ್ಲ. ಯಾಕೆಂದರೆ ಕೆಲವರು ಸಣ್ಣ ಪುಟ್ಟ ವ್ಯಾಪಾರ ಮಾಡಿದರೆ ಸರಿಯಾಗಿ ಹೊಟ್ಟೆಯೇ ತುಂಬುವುದಿಲ್ಲ ಇನ್ನು ಶ್ರೀ ಮಂತರಾಗಲು ಸಾದ್ಯ ಹಣ ಹೆಸರು ಗಳಿಸಲು ಸಾದ್ಯ ಎಂದು ತಿಳಿದವರು ಇವರ ಸಾಧನೆಯ ಬಗ್ಗೆ ತಿಳಿದುಕೊಳ್ಳಲೇಬೇಕು.

ಒಂದು ಚಿಕ್ಕ ಬಡ ದಲಿತ ಕುಟುಂಬದಲ್ಲಿ ಜನಿಸಿದ ರಾಜು ನಾಯಕ ಮನೆಬಿಟ್ಟು ಬಂದು ಬೀದಿ ವ್ಯಾಪಾರ ಮಾಡುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ಈಗ ಸುಮಾರು 60 ಕೋಟಿ ರೂ. ವರಗೆ ವಹಿವಾಟು ಮಾಡುತ್ತಿದ್ದಾರೆ ಅಂದರೆ ಇದು ಸಾಮಾನ್ಯವಾದ ಸಾಧನೆಯಲ್ಲ. ಮೊದಲು ರಾಜು ನಾಯಕ್ ಅವರು ಸ್ನೇಹಿತನ ಜೊತೆಗೂಡಿ 5 ಸಾವಿರ ಹಣ ಹೂಡಿ ಮಾರುಕಟ್ಟೆಯಲ್ಲಿ ತಿರಸ್ಕರಿಸಿದ ಬಟ್ಟೆಗಳನ್ನು ಕೊಂಡುಕೊಂಡು ಪುಟ್ ಪಾತ್ ಮೇಲಿಟ್ಟು ವ್ಯಾಪಾರ ಮಾಡಲು ಶುರುಮಾಡಿದರು.

ರಾಜು ಅವರ ಬಾಲ್ಯದ ದಿನಗಳು: ಅವರದು ತುಂಬಾ ಬಡ ಕುಟುಂಬವಾದರಿಂದ ತಿನ್ನಲು ಸರಿಯಾದ ಊಟವು ಇರಲಿಲ್ಲ 5 ಮಕ್ಕಳಿದ್ದರು ತಂದೆ ಮನೆಯ ಜವಾಬ್ದಾರಿಯನ್ನು ವಹಿಸಲಿಲ್ಲ. ಒಡಹುಟ್ಟಿದವರಲ್ಲಿ ರಾಜು ಅವರು ಹಿರಿಯರಾಗಿದ್ದರು. ಇವರಿಗೆ ಶಾಲೆಯ ಫೀಜ್ ಕಟ್ಟಲು ಹಣವಿಲ್ಲದೆ ಎಷ್ಟೋ ಬಾರಿ ಹೊರಗೆ ನಿಂತುಕೊಂಡಿದ್ದ ಪರಿಸ್ಥಿಯು ಇತ್ತಂತೆ. ಸಾಮಾನ್ಯ ಗೃಹಿಣಿಯಾದ ಅವರ ತಾಯಿ ಒಡವೆಗಳನ್ನು ಮಾರಿ ಹಣ ಕಟ್ಟುತ್ತಿದರು. ಶಾಲೆಯ ಊಟದ ಸಮಯದಲ್ಲಿ ಊಟವಿಲ್ಲದೆ ರಸ್ತೆಯಲ್ಲಿ ಅಲೆಯುತ್ತಿದ್ದ ರಾಜು ನಾಯಕ್ ಅವರು ಎಸ್ಎಸ್ಎಲ್ಸಿ ಪಾಸಾದ ನಂತರ ತನ್ನ ಸ್ನೇಹಿತನ ಜೊತೆ ಪಂಜಾಬ್ ಗೆ ಹೋಗಿ ಅವರ ಚಿಕ್ಕಪ್ಪನ ಸಹಾಯ ಪಡೆದು ಬೀದಿಯಲ್ಲಿ ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ.

ಮೊದಲು MICO ಕಾರ್ಖಾನೆಯ ಬಳಿ ಪಾದಚಾರಿ ಮಾರ್ಗದಲ್ಲಿ ಮಾರಾಟ ಮಾಡಲು ನಿರ್ಧರಿಸಿದರು ಏಕೆಂದರೆ ನೀಲಿ ಬಟ್ಟೆಗಳಾಗಿದ್ದರಿಂದ ಕಾರ್ಖಾನೆ ಕೆಲಸಗಾರರು ಬಟ್ಟೆ ತೆಗೆದುಕೊಳ್ಳುತ್ತಾರೆ ಅಂದು ವ್ಯಾಪಾರ ಮಾಡಿದೆವು ಅದರಂತೆ ಒಳ್ಳೆಯ ಲಾಭ ಸಿಕ್ಕಿತು, ಅದೇ ಹಣದಿಂದ ತಮಿಳುನಾಡಿನ ತಿರುಪುರಕ್ಕೆ ಹೋಗಿ ಹೆಚ್ಚು ಬಟ್ಟೆಗಳನ್ನು ಖರೀದಿಮಾಡಿ ಬೆಂಗಳೂರಿಗೆ ಬಂದು ವ್ಯಾಪಾರ ಮಾಡಲು ಶುರುಮಾಡಿದರಂತೆ ಅಲ್ಲಿಂದ ಎರಡೇ ವರ್ಷದಲ್ಲಿ ಉತ್ತಮ ಲಾಭ ಸಿಕ್ಕಿತ್ತು.

ನಂತರ ಇವರು ಕೊಲ್ಲಾಪುರಿ ಚಪ್ಪಲ್-ಗಳ ಮಾರಾಟಮಾಡಿ ಹೆಚ್ಚಿನ ಲಾಭಗಳಿಸಿದರಂತೆ. ತದನಂತರ ನೆಲಮಂಗಲದಲ್ಲಿ ಪಂಜಾಬಿ ರೆಸ್ಟೋರೆಂಟ್ ಪ್ರಾರಂಭಿಸಿ ಅದು 3 ವರ್ಷಗಳು ನಡೆಸಿ ಯಶಸ್ವಿಯಾದ ನಂತರ ಲಾಭಕ್ಕಾಗಿ ಅದನ್ನು ಸ್ನೇಹಿತ ದೀಪಕ್ ಅವರ ಸಂಬಂಧಿಕರಿಗೆ ಮಾರಾಟಮಾಡಿದರು. ನಂತರ 1991 ರಲ್ಲಿ, ಮತ್ತೊಂದು ಪಾಲುದಾರರೊಂದಿಗೆ ರಾಜಾ ಅಕ್ಷಯ್ ಎಂಟರ್ಪ್ರೈಸಸ್ ಅನ್ನು ಪ್ರಾರಂಭಿಸಿದರು. ನಂತರ ಅವರು ಎಂಸಿಎಸ್ ಲಾಜಿಸ್ಟಿಕ್ ಇಂಟರ್ನ್ಯಾಷನಲ್ ಪ್ರೈವೇಟ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಇವರ ಸಾಧನೆಗೆ ಸ್ಪೂರ್ತಿ ನೀಡಿದ್ದು ಬಾಲಿವುಡ್ ಸೂಪರ್ ರ್ಸ್ಟಾರ್ ಅಮಿತಾಭ್ ಬಚ್ಚನ್ ಅವರ “ತ್ರಿಶೂಲ್” ಸಿನಿಮಾವಂತೆ. ಈ ಸಿನಿಮಾದ ಕತೆಯಂತೆ ರಾಜು ಅವರು ನಾನು ಏನಾದರು ಸಾಧನೆ ಮಾಡಲೇಬೇಕು ಅಂತ ನಿರ್ಧಾರ ಮಾಡಿದರಂತೆ. ಅದೇ ರೀತಿ ಇವರ ಸಾಧನೆಯ ಹಿಂದೆ ಸದಾ ಅವರ ಪತ್ನಿ ಬೆನ್ನೆಲುಬು ಆಗಿದ್ದಾರೆ. ಇವರ 3 ಜನ ಪುತ್ರರು ಕೂಡ ಇದೆ ಉದ್ಯಮದ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಅದೇ ರೀತಿ ಇವರ ಸಾಧನೆ ಪ್ರತಿಯೋಬ್ಬ ಯುವಕರಿಗೂ ಮಾದರಿಯಾಗಿದೆ.

Leave a Reply

Your email address will not be published. Required fields are marked *